ಮುತ್ತಿನ ಪ್ರಕರಣ : ಶಿಲ್ಪಾ ಶೆಟ್ಟಿಯನ್ನು ’ಸಂತ್ರಸ್ತೆ’ ಎಂದ ಮುಂಬೈ ಕೋರ್ಟ್
Team Udayavani, Jan 25, 2022, 6:44 PM IST
1. ಬಿಜೆಪಿಯ ಅಸಮಾಧಾನಿತ ಶಾಸಕರಿಗೆ ರಾಜ್ಯಾಧ್ಯಕ್ಷ ಕಟೀಲ್ ಶಾಕ್
ಸಂಪುಟ ವಿಸ್ತರಣೆಗಾಗಿ ಹಂಬಲಿಸಿ ಬಹಿರಂಗ ಹೇಳಿಕೆ ನೀಡುತ್ತಿರುವ ಬಿಜೆಪಿಯ ಅಸಮಾಧಾನಿತ ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ. ಶಾಸಕರು ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವ ಹಾಗಿಲ್ಲ. ಮಾಧ್ಯಮ ಹೇಳಿಕೆ ನೀಡಿದವರ ಜೊತೆ ಮಾತಾಡುವೆ. ಕೆಲವರಿಗೆ ನೋಟಿಸ್ ನೀಡಲು ಚಿಂತಿಸಿದ್ದೇವೆ. ಯಾವ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
2. ತೀವ್ರವಾದ ಉಸ್ತುವಾರಿ ವಿವಾದ: ‘ಪಕ್ಷದ ರಾಜಕೀಯ ನೀತಿ’ ಎಂದ ಸಿಎಂ ಬೊಮ್ಮಾಯಿ
ಸಚಿವರಿಗೆ ತವರು ಜಿಲ್ಲೆ ಉಸ್ತುವಾರಿ ತಪ್ಪಿಸಿರುವುದು ಈಗ ಬಿಜೆಪಿಯಲ್ಲಿ ಭಾರಿ ತಳಮಳ ಸೃಷ್ಟಿಸಿದ್ದು, ಹಲವು ಸಚಿವರು ಈ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಯಾರು ಅಸಮಾಧಾನ ವ್ಯಕ್ತಪಡಿಸಿಲ್ಲ. ಎಲ್ಲರ ಬಳಿ ಮಾತನಾಡಿದ್ದೇನೆ. ಜಿಲ್ಲಾ ಉಸ್ತುವಾರಿ ವಹಿಸುವ ಮುನ್ನವೂ ಅವರ ಬಳಿ ಮಾತನಾಡಿದ್ದೇ. ನಂತರವೂ ನಾನು ಮಾತನಾಡಿದ್ದೇನೆ. ಇದು ನಮ್ಮ ಪಕ್ಷದ ರಾಜಕೀಯ ನೀತಿ ಎಂದು ಹೇಳಿದ್ದಾರೆ.
3. ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಆದೇಶ: ಎಂ.ಬಿ.ಪಾಟೀಲ್ ಗೆ ಪ್ರಚಾರ ಸಾರಥ್ಯ
ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರನ್ನು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಆದೇಶ ಹೊರಡಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಈ ಮಹತ್ವದ ಆದೇಶ ಹೊರಡಿಸಿದ್ದು, ಚುನಾವಣಾ ವರ್ಷದಲ್ಲಿ ಕಾಂಗ್ರೆಸ್ ಲಿಂಗಾಯಿತ ಮತಬ್ಯಾಂಕ್ ಓಲೈಕೆಗೆ ಮುಂದಾಗಿದೆ.
4. ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ “ಉಚಿತ ಭರವಸೆ” ಗಂಭೀರ ವಿಷಯ: ಆಯೋಗಕ್ಕೆ ಸುಪ್ರೀಂ ನೋಟಿಸ್
ಮುಂಬರುವ ಪಂಚರಾಜ್ಯ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಆಮಿಷವೊಡ್ಡಲು ಉಚಿತ ಆಶ್ವಾಸನೆ ನೀಡುತ್ತಿರುವ ಕ್ರಮಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
5. ಯುಪಿ:ಮೌರ್ಯಗೆ ಬಿಜೆಪಿ ಶಾಕ್ ! ಕೈ ತೊರೆದ ಮಾಜಿ ಕೇಂದ್ರ ಸಚಿವ ಆರ್ಪಿಎನ್ ಸಿಂಗ್
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ಕಾವು ಏರಿದ್ದು, ಪ್ರಮುಖ ನಾಯಕರ ಪಕ್ಷಾಂತರ ಮುಂದುವರೆದಿದೆ. ಮಾಜಿ ಕೇಂದ್ರ ಸಚಿವ ಮತ್ತು ಉತ್ತರ ಪ್ರದೇಶದ ಕಾಂಗ್ರೆಸ್ ಹಿರಿಯ ನಾಯಕ ರತನ್ಜಿತ್ ಪ್ರತಾಪ್ ನಾರಾಯಣ್ ಸಿಂಗ್ ಅವರು ಬಿಜೆಪಿಗೆ ಸೇರ್ಪಡೆಯಾಗಿರುವುದಾಗಿ ಘೋಷಿಸಿದ್ದಾರೆ.
6. ಬುರ್ಕಿನಾ ಪಾಸೊ ಅಧ್ಯಕ್ಷ ರೋಚ್ ಬಂಧನ; ಕ್ರಿಪ್ರ ಕ್ರಾಂತಿಯಲ್ಲಿ ದೇಶ ಮಿಲಿಟರಿ ವಶಕ್ಕೆ
ಕ್ರಿಪ್ರ ಕ್ರಾಂತಿಯ ಮೂಲಕ ಬುರ್ಕಿನಾ ಪಾಸೊ ಅಧ್ಯಕ್ಷ ರೋಚ್ ಕಬೋರ್ ಅವರನ್ನು ಪದಚ್ಯುತಗೊಳಿಸಿದ ನಂತರ ದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಮಿಲಿಟರಿ ಪಡೆ ಘೋಷಿಸಿದೆ.
ಮುತ್ತಿನ ಪ್ರಕರಣ: ಗೆರೆ ಕೃತ್ಯಕ್ಕೆ ಶಿಲ್ಪಾ ಶೆಟ್ಟಿ’ಸಂತ್ರಸ್ತೆ’ ಎಂದ ಮುಂಬೈ ಕೋರ್ಟ್
ಸಾರ್ವಜನಿಕ ಸಮಾರಂಭವೊಂದರಲ್ಲಿ ಹಾಲಿವುಡ್ ತಾರೆ ರಿಚರ್ಡ್ ಗೆರೆ ಅವರು ಕೆನ್ನೆಗೆ ಮುತ್ತಿಟ್ಟ ಅಶ್ಲೀಲ ವರ್ತನೆ ಪ್ರಕರಣಕ್ಕೆ ಸಂಬಂಧಿಸಿ, ಮುಂಬೈ ನ್ಯಾಯಾಲಯವು, ನಟಿ ಶಿಲ್ಪಾ ಶೆಟ್ಟಿ ಸಂತ್ರಸ್ತೆ ಎಂದು ತೋರುತ್ತದೆ ಎಂದು ಪ್ರಕರಣ ನಡೆದ 15 ವರ್ಷಗಳ ನಂತರ ಶಿಲ್ಪಾ ಅವರನ್ನು ಪ್ರಕರಣದಿಂದ ಬಿಡುಗಡೆ ಮಾಡಿದೆ.
7. ಗಂಗೂಲಿ, ದ್ರಾವಿಡ್,ಕುಂಬ್ಳೆ ವಿಶ್ವಕಪ್ ಗೆದ್ದಿಲ್ಲ; ಅವರು ಕಳಪೆ ಆಟಗಾರರೇ?: ರವಿಶಾಸ್ತ್ರಿ
ದಕ್ಷಿಣ ಆಫ್ರಿಕಾ ವಿರುದ್ಧದ ಆಘಾತಕಾರಿ ಟೆಸ್ಟ್ ಮತ್ತು ಏಕದಿನ ಸರಣಿಯ ಸೋಲಿನ ನಂತರ ಗಾಬರಿಗೊಳ್ಳಬೇಕಾದ ಯಾವುದೇ ಕಾರಣವಿಲ್ಲ, ಸೋಲು ತಾತ್ಕಾಲಿಕ ಹಂತ ಮತ್ತು ತಂಡವು ಶೀಘ್ರದಲ್ಲೇ ಹಳಿಗೆ ಮರಳಲಿದೆ. “ಹಲವು ದಿಗ್ಗಜ ಆಟಗಾರರು ವಿಶ್ವಕಪ್ ಗೆದ್ದಿಲ್ಲ. ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಕೂಡ ಗೆದ್ದಿಲ್ಲ. ಹಾಗಾದರೆ ನಾವು ಅವರನ್ನು ಕಳಪೆ ಆಟಗಾರರು ಎಂದು ಹೆಸರಿಸಬಹುದೇ? ಎಂದು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.