ಹೆಂಡತಿ ಮಕ್ಕಳಿದ್ದರೂ ಈ ಸರಕಾರಿ ನೌಕರ ಅನಾಥ
Despite having a family, this govt employee lives orphaned
Team Udayavani, Mar 9, 2022, 12:54 PM IST
ಕುಷ್ಟಗಿ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ನೌಕರನ ಕಾಲು ಗ್ಯಾಂಗ್ರೀನ್ ಕೊಳೆಯುತ್ತಿದ್ದು, ಆಸ್ಪತ್ರೆಯ ಹೊರ ಅವರಣದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾನೆ. ಸರ್ಕಾರಿ ನೌಕರನಾಗಿದ್ದರೂ ಸಹ ವ್ಯಕ್ತಿಯ ಅನಾಥ ಅವಸ್ಥೆಗೆ ಕುಟುಂಬದವರು ಇತ್ತ ಸುಳಿದಿಲ್ಲ. ಕೊಪ್ಪಳ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ಎಸ್ ಡಿ ಸಿ ನೌಕರ ಬಸವರಾಜ್ ಮುಂಡಾಸದ. ಇದೀಗ ಕುಷ್ಟಗಿ ಪಶು ಆಸ್ಪತ್ರೆಯಲ್ಲಿ ಪ್ರಭಾರ ಸೇವೆಯಲ್ಲಿದ್ದಾರೆ. ಗದಗ ಜಿಲ್ಲೆ ಪೇಟಾಲೂರು ಸ್ವಗ್ರಾಮ. ಪತ್ನಿ ಅದೇ ಊರಲ್ಲಿ ಇದ್ದು, ಇಬ್ಬರು ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿದ್ದಾರೆ.