Belagavi ಬಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಪೋಟ: ತಪ್ಪಿದ ಭಾರಿ ದುರಂತ
Team Udayavani, Jul 26, 2020, 6:35 PM IST
ಬೆಳಗಾವಿ: ಇಲ್ಲಿನ ಬಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕ (ಐಸಿಯು) ದಲ್ಲಿ ರವಿವಾರ ಮಧ್ಯಾಹ್ನ ಆಕ್ಸಿಜನ್ ಸಿಲಿಂಡರ್ ಸ್ಪೋಟಗೊಂಡು ಮೂವರು ಗಾಯಗೊಂಡಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ. ಐಸಿಯುದಲ್ಲಿ ಆಕ್ಸಿಜನ್ ಅಳವಡಿಸುವಾಗ ಸಿಲಿಂಡರ್ ಬದಲಿಸುವ ವೇಳೆ ತಾಂತ್ರಿಕ ದೋಷದಿಂದ ಏಕಾಏಕಿ ಸ್ಪೋಟಗೊಂಡಿದೆ.
ಸಿಲಿಂಡರ್ ಅಳವಡಿಸುತ್ತಿದ್ದ ಒಬ್ಬರು ವೈದ್ಯ, ನರ್ಸ್ ಹಾಗೂ ವಾರ್ಡ್ ಬಾಯ್ ಗಾಯಗೊಂಡಿದ್ದಾರೆ. ಕೈ ಹಾಗೂ ಕಾಲು ಸುಟ್ಟಿದ್ದು, ಈ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸಿಲಿಂಡರ್ ಸ್ಪೋಟಗೊಳ್ಳುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿಯೇ ಸಮೀಪದಲಿದ್ದ ಮೂವರಿಗೂ ಬೆಂಕಿ ತಗುಲಿದೆ. ಐಸಿಯುನಲ್ಲಿದ್ದ ಈ ಮೂವರೂ ಪಿಪಿಇ ಕಿಟ್ ಧರಿಸಿದ್ದರಿಂದ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಸಹೋದ್ಯೋಗಿಗಳು ಬೆಂಕಿ ನಂದಿಸಿ ಈ ಮೂವರನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.