|ಕಂಟೈನರ್- ಬಸ್ ಮುಖಾಮುಖಿ: ಹೊತ್ತಿ ಉರಿದ ಬಸ್
Bus-Container lorry collision: Bus catches fire
Team Udayavani, Mar 25, 2021, 11:08 AM IST
ಉಪ್ಪಿನಂಗಡಿ: ಖಾಸಗಿ ಬಸ್ ಮತ್ತು ಕಂಟೈನರ್ ಲಾರಿ ನಡುವೆ ಢಿಕ್ಕಿಯಾಗಿ ಕಂಟೈನರ್ ಚಾಲಕ ಸಜೀವ ದಹನವಾದ ಘಟನೆ ಕಡಬ ತಾಲೂಕಿನ ಮಣ್ಣಗುಂಡಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ನೆಲ್ಯಾಡಿಯ ಕಲ್ಕುಲಾಡಿ ಗ್ರಾಮದ ಪೆರಿಯಶಾಂತಿ ಬಳಿ ಮಧ್ಯರಾತ್ರಿ 12 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ಮೃತಪಟ್ಟ ಕಂಟೈನರ್ ಚಾಲಕನನ್ನು ಮೈಸೂರು ಮೂಲದ ಸಂತೋಷ್ ಎಂದು ಗುರುತಿಸಲಾಗಿದೆ.