ಕ್ಲಿಂಕರ್ ಬೆಲ್ಟ್ ಗೆ ಬೆಂಕಿ
Clinker Belt Fire Incident
Team Udayavani, Feb 21, 2022, 11:30 AM IST
ಸಿಮೆಂಟ್ ಕ್ಲಿಂಕರ್ ಸಾಗೀಸುವ ಬೆಲ್ಟ್ ಗೆ ಬೆಂಕಿ ಹತ್ತಿ ಯಂತ್ರಗಳು ಉರಿದು ಅಗ್ನಿ ಅವಘಡ ಸಂಭವಿಸಿದ ಘಟನೆ ಸೋಮವಾರ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಎಸಿಸಿ ಸಿಮೆಂಟ್ ಕಂಪನಿಯಲ್ಲಿ ನಡೆದಿದೆ.
ಕಲ್ಲು, ಮ್ಯಾಂಗನೀಸ್ ಮಣ್ಣು, ಜಿಬಸಂ, ಕಲ್ಲಿದ್ದಲು, ನೀರು ಮಿಶ್ರಣಮಾಡಿ ಸಿಮೆಂಟ್ ಉತ್ಪಾದನೆಗೂ ಮುಂಚೆ ಕ್ಲಿಂಕರ್ ತಯಾರಿಸುವ ಎಸಿಸಿ ಘಟಕದಲ್ಲಿ ಸೋಮವಾರ ಬೆಳಗ್ಗೆ ಏಕಾಏಕಿ ಆಗಸಕ್ಕೆ ದಟ್ಟವಾದ ಹೊಗೆ ಹರಡಿತು. ನೀಲಿ ಆಗಸದಲ್ಲಿ ಕಪ್ಪು ಕಾರ್ಮೋಡ ಆವರಿಸಿಕೊಂಡಿತು. ವಾಡಿ ಪಟ್ಟಣದ ಮೇಲೆ ಕರಿಛಾಯೆ ಮೂಡಿಸಿತು. ಭಯಂಕರವಾದ ಹೊಗೆ ಕಂಡು ಕಾರ್ಮೋಡಗಳ ಚಲನೆಯಿರಬಹುದು ಎಂದು ನಗರದ ಜನ ಭಾವಿಸಿದ್ದರು. ಇದು ಎಸಿಸಿ ಕಂಪನಿ ಉಗುಳುತ್ತಿರುವ ವಿಷಕಾರಿ ಧೂಳು ಎಂದರಿತು ಧಂಗಾದರು.
ಘಟನೆಯಿಂದ ವಿಚಲಿತರಾದ ಎಸಿಸಿ ಕಂಪನಿಯ ಆಡಳಿತ ವರ್ಗ ಹಾಗೂ ಇಂಜಿನಿಯರ್ ಗಳು, ಅವಘಡ ಸಂಬವಿಸಿದ ಸ್ಥಳದತ್ತ ದೌಡಾಯಿಸಿದರು. ಕ್ಲಿಂಕರ್ ಸಾಗಿಸುವ ಬೆಲ್ಟ್ ಕತ್ತರಿಸಿದೆಯೋ ಅಥವ ಕ್ಲಿಂಕರ್ ಸೈಲೋ ಧ್ವಂಸಗೊಂಡಿದೆಯೋ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ವಾಡಿ ನಗರ ಸೇರಿದಂತೆ ಸುತ್ತಲ ಗ್ರಾಮಗಳಾದ ಇಂಗಳಗಿ, ಕುಂದನೂರ, ಚಾಮನೂರ, ಹಳಕರ್ಟಿ, ಕಮರವಾಡಿ, ಕೊಂಚೂರ, ಬಳವಡಗಿ ಪರಸರವೂ ಕಲುಷಿತಗೊಂಡು ಜನರ ಆಕ್ರೋಶಕ್ಕೆ ಗುರಿಯಾಯಿತು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್ 2ನೇ ಪಂದ್ಯ
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ