Congress ನವರು Hit & Run ಮಾಡ್ಲಿಕ್ಕೆ ಪ್ರಯತ್ನಿಸ್ತಾರೆ : ಬೊಮ್ಮಾಯಿ
CM Basavaraj Bommai Pressmeet
Team Udayavani, May 5, 2022, 2:23 PM IST
ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಬೊಮ್ಮಾಯಿ ಕಾಂಗ್ರೆಸ್ ಕಾಲದಲ್ಲಿ ಪರೀಕ್ಷಾ ಅಕ್ರಮಗಳು ಸಾಕಷ್ಟು ಸಂಖ್ಯೆಯಲ್ಲಿ ನಡೆದಿತ್ತು. ಆದರೆ ಎಷ್ಟು ಜನರ ಬಂಧನವಾಗಿದೆ ಎಂದು ಪ್ರಶ್ನಿಸಿದರು.
ಹಗರಣದಲ್ಲಿ ದಿವ್ಯಾ ಹಾಗರಗಿ ಮಾತ್ರವಲ್ಲ ಇನ್ನೂ ಅನೇಕರು ಇದ್ದಾರೆ. ಕಾಂಗ್ರೆಸ್ ನಾಯಕರೂ ಸಿಕ್ಕಿ ಬಿದ್ದಿದ್ದಾರೆ. ತಮ್ಮ ಗುಟ್ಟು ಬಯಲಾಗಬಹುದೆಂಬ ಭಯ ಕಾಂಗ್ರೆಸಿಗರನ್ನು ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರಾಗಿ ಖರೀದಿ ಪ್ರಕ್ರಿಯೆ ಬಗ್ಗೆಯೂ ಮಾಹಿತಿ ನೀಡಿದ ಅವರು, ೨ ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಹೆಚ್ಚುವರಿಯಾಗಿ ಖರೀದಿಸುವ ಭರವಸೆ ನೀಡೊದರು
ಸಂಪುಟ ವಿಸ್ತರಣೆ ವಿಚಾರದಲ್ಲಿ ನೀವು ಸೆಲ್ಪ್ ಮೇಡ್ ಸ್ಟೋರಿ ಪ್ರಕಟಿಸಿದ್ದೀರಿ. ಈಗ ನನ್ನ ಬಳಿ ಸ್ಪಷ್ಟನೆ ಕೇಳುತ್ತಿದ್ದೀರಿ.
ಅಮಿತ್ ಶಾ ಅವರು ದಿಲ್ಲಿಗೆ ತೆರಳಿ ವಿಷಯ ತಿಳಿಸುತ್ತೇನೆ ಎಂದಿದ್ದಾರೆ. ಅವರು ಕರೆದಾಗ ದಿಲ್ಲಿಗೆ ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದರು