ತುಳುನಾಡಿನಲ್ಲಿ ತುಳು ಫಲಕ ಅಭಿಯಾನ ಆರಂಭವಾಗಲಿ: dayananda kattalsar
Team Udayavani, Aug 19, 2020, 7:25 PM IST
ಬಜಪೆ: ಇಲ್ಲಿನ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲ ರಸ್ತೆ ಬದಿಯ ಫಲಕ, ಬಸ್ ನಿಲ್ದಾಣ, ಮಾರುಕಟ್ಟೆ, ಸಾರ್ವಜನಿಕ ವಲಯದ ಫಲಕಗಳು ಕನ್ನಡದ ಕೆಳಗೆ ತುಳು ಭಾಷೆಯಲ್ಲಿ ಬರೆಯುವ ಮೂಲಕ ತುಳು ಅಭಿಮಾನದ ಜತೆಗೆ ತುಳು ಅಭಿಯಾನವನ್ನು ಅರಂಭಿಸಲು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಅವರು ಬಜಪೆ ಗ್ರಾ.ಪಂ.ಗೆ ಭೇಟಿ ನೀಡಿ, ಪಿಡಿಒ ಸಾಯೀಶ್ ಚೌಟ್ ಅವರೊಂದಿಗೆ ಸಮಾಲೋಚಿಸಿದರು. ಈ ಸಂದರ್ಭ ದಯಾನಂದ ಕತ್ತಲ್ಸಾರ್ ಮಾತನಾಡಿ, ತುಳು ಭಾಷೆಗೆ ಸ್ವಂತ ಲಿಪಿಯಿದೆ. ತುಳುನಾಡಿನ ಮಠಾಧೀಶರುಗಳು ಸಹಿ ತುಳುವಿನಲ್ಲಿದೆ. ತುಳುವಿನ ಬಗ್ಗೆ ಹಲವಾರು ಮಂದಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಮಹಾನಗರ ಪಾಲಿಕೆಯ ರಸ್ತೆ, ಬೀದಿಗಳ ನಾಮಫಲಕ, ಸಂಸ್ಥೆಗಳ ಹೆಸರುಗಳು ಆಂಗ್ಲ, ಕನ್ನಡ ಜತೆಗೆ ತುಳು ಭಾಷೆಯಲ್ಲಿರಬೇಕಿದೆ. ತುಳು ಅಭಿಮಾನವನ್ನು ಬೆಳಸಲು ಬಜಪೆ ಗ್ರಾ.ಪಂ.ನಿಂದ ತುಳು ಅಭಿಯಾನ ಆರಂಭವಾಗಲಿ. ಯುವ ತುಳುನಾಡ್ ಮತ್ತು ಜೈ ತುಳುನಾಡ್ನ ಸದಸ್ಯರು ಫಲಕವನ್ನು ತುಳು ಲಿಪಿಯಲ್ಲಿ ಬರೆಯಲು ಸಿದ್ಧರಿದ್ದಾರೆ. ಬಜಪೆ ಗ್ರಾ.ಪಂ. ವ್ಯಾಪ್ತಿಯಲ್ಲಿ ತುಳು ಲಿಪಿಯಲ್ಲಿ ಫಲಕವನ್ನು ಬರೆಯುವ ಮೂಲಕ ಅಭಿಯಾನಕ್ಕೆ ಚಾಲನೆಯನ್ನು ನೀಡಲಾಗುವುದು ಎಂದರು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ