ಬಿರುವೆರ್ ಕಾಪು ಸೇವಾ ಸಮಿತಿಯ ವತಿಯಿಂದ ಕಷಾಯ ವಿತರಣೆ
Distribution of kashaya by Biruver Kapu Seva Samiti
Team Udayavani, Jul 28, 2022, 5:32 PM IST
ಕಾಪು : ಬಿರುವೆರ್ ಕಾಪು ಸೇವಾ ಸಮಿತಿಯ ವತಿಯಿಂದ ಕಾಪು ಪೇಟೆಯಲ್ಲಿ ಹಾಲೆ ಮರದ ತೊಗಟೆಯಲ್ಲಿ ಸಿದ್ದ ಪಡಿಸಿದ ಕಷಾಯ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಗುರುವಾರ ಮುಂಜಾನೆ 3 ಗಂಟೆಗೆ ಇನ್ನಂಜೆ, ಮಡುಂಬು, ಕಾಪು ಮೊದಲಾದ ಕಡೆಗಳಲ್ಲಿ ಹಾಲೆ ಮರದ ಕೆತ್ತೆಯನ್ನು ಸಂಗ್ರಹಿಸಿ, ಸಾಂಪ್ರದಾಯಿಕ ಶೈಲಿಯಲ್ಲಿ ಆಟಿದ ಕಷಾಯವನ್ನು ಸಿದ್ಧಪಡಿಸಲಾಗಿದೆ. ಸುಮಾರು 50 ಲೀಟರ್ ನಷ್ಟು ಹಾಲೆ ಮರದ ಕೆತ್ತೆಯ ಕಷಾಯವನ್ನು ಕಾಪು ಪೇಟೆಯಲ್ಲಿ ನೂರಾರು ಮಂದಿ ನಾಗರಿಕರಿಗೆ ಉಚಿತವಾಗಿ ವಿತರಿಸುವ ಮೂಲಕ ಬಿರುವೆರ್ ಕಾಪು ಸೇವಾ ಸಮಿತಿಯ ಸದಸ್ಯರು ಮಾದರಿಯಾಗಿದ್ದಾರೆ.