MESCOM ಗ್ರಾಹಕರೇ ಈ ತಿಂಗಳು ಹೆಚ್ಚು BILL ಬಂದಿದ್ದಕ್ಕೆ SHOCK ಆಗ್ಬೇಡಿ.!
Team Udayavani, May 19, 2020, 12:30 PM IST
ಕೊರೋನಾ ಮಹಾಮಾರಿಯಿಂದಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ವಿದ್ಯುತ್ ಬಿಲ್ ಕಟ್ಟೋದಕ್ಕೂ ವಿನಾಯ್ತಿ ನೀಡಲಾಗಿತ್ತು. ಈ ನಿಯಮವನ್ನು ಅನುಸರಿಸಿದ್ದಂತ ಮೆಸ್ಕಾಂ ಕೂಡ ಗ್ರಾಹಕರಿಗೆ ಮಿನಿಮಮ್ ಬಿಲ್ ನೀಡಿತ್ತು. ಆದ್ರೇ ಇದೀಗ ಮೇ ತಿಂಗಳಿನಿಂದ ಕಳೆದ ಏಪ್ರಿಲ್ ತಿಂಗಳ ಬಾಕಿ ಮೊತ್ತ ಸೇರಿಸಿ ಬಿಲ್ ನೀಡುತ್ತಿರುವುದರಿಂದ ವಿದ್ಯುತ್ ಗ್ರಾಹಕರಿಗೆ ಕನ್ ಪ್ಯೂಸ್ ಆದಂತೆ ಆಗಿದೆ. ಈ ಕುರಿತಂತೆ ಮೆಸ್ಕಾಂ ಸ್ಪಷ್ಟಪಡಿಸಿರುವ ಈ ಮಾಹಿತಿ ಓದಿ.. ನಿಮಗೆ ಬಿಲ್ ಬಗ್ಗೆ ಕ್ಲಾರಿಫಿಕೇಷನ್ ಆಗುತ್ತದೆ.
ಮೆಸ್ಕಾಂ ಗ್ರಾಹಕರ ಮಾಹಿತಿಗಾಗಿ…
ಕೋವಿಡ್-19 ಲಾಕ್ ಡೌನ್ ಕಾರಣದಿದಂದಾಗಿ ಸರ್ಕಾರದ ಸೂಚನೆಯಂತೆ, ಏಪ್ರಿಲ್ ತಿಂಗಳಿನಲ್ಲಿ ಮೆಸ್ಕಾಂ ಗ್ರಾಹಕರಿಗೆ ಸರಾಸರಿ ವಿದ್ಯುತ್ ಬಿಲ್ಲನ್ನು ನೀಡಲಾಗಿರುತ್ತದೆ. ಮೇ ತಿಂಗಳಿನಲ್ಲಿ ನಮ್ಮ ಮಾಪಕ ಓದುಗರು ಮನೆಮನೆಗೆ ತೆರಳಿ ನಿಮ್ಮ ಮಾಪಕದ Actual ರೀಡಿಂಗ್ಅನ್ನು ನಮ್ಮ ಬಿಲ್ಲಿಂಗ್ ಯಂತ್ರದಲ್ಲಿ ದಾಖಲಿಸಿ, ಏಪ್ರಿಲ್ ಮತ್ತು ಮೇ ಎರಡೂ ತಿಂಗಳಿಗೆ ಸೇರಿಸಿ ಒಂದೇ ಬಿಲ್ ಪ್ರತಿಯನ್ನು ನೀಡಲಿದ್ದಾರೆ.. ಹಾಗೆ ಬಿಲ್ ನೀಡುವಾಗ ಪ್ರತಿ ತಿಂಗಳಿಗೆ ಅನ್ವಯವಾಗುವ Rate slabಗಳನ್ನು ಗಣನೆಗೆ ತೆಗೆದುಕೊಂಡು ಎರಡೂ ತಿಂಗಳಿಗೆ ಅನ್ವಯಿಸಿ ಬಿಲ್ಲಿಂಗ್ ಮಾಡಲಾಗುತ್ತದೆ.
ಉದಾಹರಣೆಗೆ ಗೃಹ ಬಳಕೆಯ ಜಕಾತಿಯಲ್ಲಿ ಸಾಮಾನ್ಯವಾಗಿ ಪ್ರತಿ ತಿಂಗಳಿನ ಮೊದಲ 30 ಯೂನಿಟ್ ಗಳಿಗೆ 1 ಸ್ಲ್ಯಾಬ್ ದರ ಅನ್ವಯವಾದರೆ, ಮೇ ತಿಂಗಳಿನಲ್ಲಿ ನೀಡಲ್ಪಡುವ ಎರಡು ತಿಂಗಳ ಬಿಲ್ಲಿನಲ್ಲಿ 30 ಯೂನಿಟ್ ಗಳ ಬದಲಾಗಿ ಒಟ್ಟು 2×30=60 ಯುನಿಟ್ಗಳಿಗೆ ಮೊದಲ ಸ್ಲ್ಯಾಬ್ ದರ ಅನ್ವಯವಾಗುತ್ತದೆ. ಅದರಂತೆಯೇ ಉಳಿದ ರೇಟ್ ಸ್ಲಾಬ್ಗಳೂ (2ನೇ ಸ್ಲ್ಯಾಬ್ 70 ಯೂನಿಟ್ ಬದಲಾಗಿ 140, 3ನೇ ಸ್ಲ್ಯಾಬ್ 100 ಯೂನಿಟ್ ಬದಲಾಗಿ 200) ಎರಡು ತಿಂಗಳಿನ ಲೆಕ್ಕದಲ್ಲಿಯೇ ಅನ್ವಯವಾಗುವುದರಿಂದ ಗ್ರಾಹಕರಿಗೆ ಯಾವುದೇ ತರಹದ ನಷ್ಟವಾಗುವುದಿಲ್ಲ. ಇದೇ ರೀತಿ ಇತರ ಜಕಾತಿಗಳಿಗೂ ಬಿಲ್ಲಿಂಗ್ ಮಾಡಲಾಗುತ್ತದೆ.
ನೀವು ಈಗಾಗಲೇ ಏಪ್ರಿಲ್ ತಿಂಗಳ ಸರಾಸರಿ ಬಿಲ್ಲಿನ ಅನ್ವಯ ಹಣ ಪಾವತಿ ಮಾಡಿದ್ದರೆ, ಆ ಮೊತ್ತವನ್ನು ಹೊಸದಾಗಿ ಮೇ ತಿಂಗಳಿನಲ್ಲಿ ನೀಡಲ್ಪಡುವ ಎರಡೂ ತಿಂಗಳ ರೇಟ್ ಸ್ಲಾಬ್ ಅನ್ವಯಿಸಿ ಬಂದ ಮೊತ್ತದಲ್ಲಿ ಕಳೆದು, ಉಳಿದ ಮೊತ್ತಕ್ಕೆ ಮಾತ್ರ ಬಿಲ್ ನೀಡಲಾಗುತ್ತದೆ. ಆದುದರಿಂದ ಮೆಸ್ಕಾಂ ಗ್ರಾಹಕರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಕೊಟ್ಟು ಗೊಂದಲಕ್ಕೊಳಗಾಗಬಾರದೆಂದು ಕೋರಲಾಗಿದೆ.
ಈಗ ಅರ್ಥ ಆಯ್ತು ಅಲ್ವಾ..? ಮೆಸ್ಕಾಂ ಬಿಲ್ ನಲ್ಲಿ ಯಾವುದೇ ಏರಿಕೆಯಾಗಿಲ್ಲ. ಆದ್ರೇ ಏಪ್ರಿಲ್ ತಿಂಗಳ ಬಿಲ್ ಮಿನಿಮಮ್ ನೀಡಿದ್ದನ್ನು, ಮೀಟರ್ ರೀಡಿಂಗ್ ಜೊತೆಗೆ ಸೇರಿಸಿ ಇದೀಗ ಒಟ್ಟಿಗೆ ನೀಡಲಾಗುತ್ತಿದೆ. ಅಲ್ಲದೇ ಎರಡು ತಿಂಗಳ ಬಿಲ್ ಒಟ್ಟಿಗೆ ನೀಡಿದ್ದರೂ ಬಂದ ಒಟ್ಟು ರೀಡಿಂಗ್ ನಲ್ಲಿನ ಯುನಿಟ್ ಗಳನ್ನು ಎರಡು ತಿಂಗಳಿಗೆ ವಿಭಾಗಿಸಲಾಗಿದೆ. ಅದರಂತೆ ವಿದ್ಯುತ್ ಸ್ಲ್ಯಾಬ್ ಅನುಸಾರವಾಗಿ ಮೆಸ್ಕಾಂ ಬಿಲ್ ಮೊತ್ತವನ್ನು ನೀಡಿದೆ. ಹೀಗಾಗಿ ಬಿಲ್ ಏರಿಕೆಯಾದಂತೆ ಅನಿಸಿದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂಬುದು ಮೆಸ್ಕಾಂ ಮನವಿಯಾಗಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್ಪೈಸ್ ಅವಾರ್ಡ್
Kulgeri: ಟ್ರ್ಯಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು
BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್