ಕೊಡೇರಿ ಮೀನು ಹರಾಜು ಪ್ರಕ್ರೀಯೆ ಸಂದರ್ಭ 2 ಗುಂಪುಗಳ ನಡುವೆ ಮಾರಾಮಾರಿ
Team Udayavani, Nov 7, 2020, 6:25 PM IST
ಬೈಂದೂರು: ಕೊಡೇರಿ ಕಿರುಬಂದರಿನಲ್ಲಿ ಮೀನು ಹರಾಜು ಪ್ರಕ್ರಿಯೆಯ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ ಎಂದು ವರದಿಯಾಗಿದೆ. ನಾಡದೋಣಿ ಮೀನುಗಾರರ ಸಂಘ ಹಾಗೂ ಕಿರಿಮಂಜೇಶ್ವರ ಕೊಡೇರಿ ತಂಡಗಳ ನಡುವೆ ಈ ಗಲಾಟೆ ನಡೆದಿದ್ದು, ಮೀನುಗಾರಿಕೆ ಇಲಾಖೆ ‘ಮೀನು ಹರಾಜು ಪ್ರಕ್ರಿಯೆ’ಗೆ ಅನುಮತಿ ನೀಡಿರುವುದು ಈ ವಾಗ್ವಾದಕ್ಕೆ ಕಾರಣ ಎನ್ನಲಾಗಿದೆ.