Sastana: ನೂರಾರು ವಾಹನ ಚಾಲಕರಿಗೆ ಅನ್ನದಾತರಾದ ನಾಗರಾಜ್ ಪುತ್ರನ್ ತಂಡ
Team Udayavani, Apr 13, 2020, 7:14 PM IST
ಸಾಸ್ತಾನ : ಹೊರಜಿಲ್ಲೆ, ಹೊರ ರಾಜ್ಯದಿಂದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಾಗುವ ಕಾರು, ಟ್ರಕ್, ಟ್ಯಾಂಕರ್ ನ ನೂರಾರು ಮಂದಿ ಚಾಲಕರಿಗೆ ದಾನಿಗಳ ಸಹಕಾರದೊಂದಿಗೆ ಕಳೆದ 15 ದಿನದಿಂದ ಸಾಸ್ತಾನ ಟೋಲ್ ನಲ್ಲಿ ಜೀವನ್ ಮಿತ್ರ ನಾಗರಾಜ್ ಪುತ್ರನ್ ನೇತೃತ್ವದಲ್ಲಿ ಉಚಿತ ಊಟ ವಿತರಣೆ ನಡೆಸುತ್ತಿದ್ದಾರೆ. ನಾಗರಾಜ್ ಪುತ್ರನ್ ವೃತ್ತಿಯಲ್ಲಿ ಅ್ಯಂಬ್ಯುಲನ್ಸ್ ಚಾಲಕರಾಗಿದ್ದು, ಕಷ್ಟಕಾಲದಲ್ಲಿ ದೂರದ ಊರುಗಳಿಂದ ಬರುವ ವಾಹನ ಚಾಲಕರ ಸಮಸ್ಯೆಯನ್ನು ಅರಿತು ಈ ನಿರ್ಧಾರಕ್ಕೆ ಬಂದಿದ್ದಾರೆ. ದಿನಕ್ಕೊಂದು ಬಗೆಯ ವಿಶೇಷ ಖಾದ್ಯಗಳು. ಲಾಕ್ ಡೌನ್ ಮುಗಿಯುವ ವರೆಗೂ ಸೇವೆ ಮುಂದುವರೆಸುವುದಾಗಿ ತಿಳಿಸಿದ ನಾಗರಾಜ ರ ಸೇವೆಗೆ ಸ್ನೇಹಿತರು ಕೈ ಜೋಡಿಸಿದ್ದಾರೆ.