ಉಚಿತ ಪೆಟ್ರೋಲಿಗಾಗಿ ಸಾಮಾಜಿಕ ಅಂತರ ಮರೆತ ವೈದ್ಯಕೀಯ ಹಾಗೂ ಪೊಲೀಸ್ ಸಿಬ್ಬಂದಿ
Team Udayavani, Apr 12, 2020, 7:16 PM IST
ಶಿವಮೊಗ್ಗ: ಇಲ್ಲಿನ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ಕೋವಿಡ್-19 ಸೋಂಕು ವಿರುದ್ಧ ಹೋರಾಡುವ ಯೋಧರಿಗೆ ಒಂದು ಲೀಟರ್ ಉಚಿತ ಪೆಟ್ರೋಲ್ ನೀಡುವುದಾಗಿ ಘೋಷಿಸಿದ್ದಾರೆ. ಉಚಿತ ಪೆಟ್ರೋಲ್ ಗಾಗಿ ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿ ಪೆಟ್ರೋಲ್ ಬಂಕ್ ನಲ್ಲಿ ಮುಗಿದಿದ್ದ ಪ್ರಸಂಗ ನಡೆಯಿತು. ವಿಪರ್ಯಾಸವೆಂದರೆ ಉಚಿತ ಪೆಟ್ರೋಲ್ ಪಡೆಯುವ ಭರದಲ್ಲಿ ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿಗಳೇ ಸಾಮಾಜಿಕ ಅಂತರ ಕಾಪಾಡಲು ಮರೆತರು!