ಕುಂದಾಪುರ : ಅನಾರೋಗ್ಯ ಪೀಡಿತ ಬಾಲಕನ ಚಿಕಿತ್ಸೆಗಾಗಿ ಯಕ್ಷ ವೇಷ ಧರಿಸಿ ಧನ ಸಂಗ್ರಹ
Team Udayavani, Dec 11, 2021, 8:15 PM IST
ಕುಂದಾಪುರ: ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿರುವ 6 ವರ್ಷದ ಬಾಲಕನ ಚಿಕಿತ್ಸೆಗೆ ಹೆಚ್ಚಿನ ಹಣದ ಆವಶ್ಯಕತೆಯಿರುವ ಕಾರಣ ಕುಂದಾಪುರದ ವಾರದ ಸಂತೆಯಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ ಬೆಂಕಿ ಮಣಿ ಸಂತು ಅರೆಹೊಳೆ ಅವರು ಮಾರಣಕಟ್ಟೆ ಕ್ಷೇತ್ರ ಮಹಾತ್ಮೆಯಲ್ಲಿ ಬರುವ “ಮೈಧಾವಿನಿ’ ಎನ್ನುವ ವೇಷ ಧರಿಸಿ, ಹಣ ಸಂಗ್ರಹಿಸಿದರು.