ಇತಿಹಾಸ ಪ್ರಸಿದ್ಧ ವಂಡಾರು ಕಂಬಳ ಸಂಪನ್ನ
Team Udayavani, Dec 6, 2020, 10:16 PM IST
ಕೋಟ : ಹರಿಕೆ ಕಂಬಳಗಳ ಸಾಲಿನಲ್ಲಿ ರಾಜಕಂಬಳವೆಂಬ ಪ್ರತೀತಿ ಪಡೆದ ಪ್ರಸಿದ್ಧ ವಂಡಾರು ಸಂಪ್ರದಾಯಿಕ ಕಂಬಳ ರವಿವಾರ ವಿಜೃಂಭಣೆಯಿಂದ ನೆರವೇರಿತು. ಕ್ಷೇತ್ರದ ಅಧಿ ದೇವತೆ ತುಳಸಿ ಅಮ್ಮ ಹಾಗೂ ಪರಿವಾರ ದೇವರ ದರ್ಶನ ಪಡೆದು ಸುತ್ತಕ್ಕಿ ತುಳಿಯುವುದು ಮುಂತಾದ ಹರಿಕೆಗಳನ್ನು ತೀರಿಸಿದರು. ಕ್ಷೇತ್ರದ ಮುಖ್ಯಸ್ಥರಾದ ವಂಡಾರು ಪ್ರವೀಣ್ ಹೆಗ್ಡೆ ಕಂಬಳದ ನೇತೃತ್ವ ವಹಿಸಿದ್ದರು.