ಜಗದೀಶ್ ಅಧಿಕಾರಿ ಕ್ಷಮೆ ಯಾಚಿಸದಿದ್ದರೆ ಬಿಲ್ಲವರಾದ ನಾವು ‘ತಾಂಟಲು’ ಸಿದ್ದ: ಪ್ರತಿಭಾ ಕುಳಾಯಿ
Team Udayavani, Feb 6, 2021, 5:22 PM IST
ಸುರತ್ಕಲ್: “ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯರ ಬಗ್ಗೆ ಮತ್ತು ಸಮಸ್ತ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ನಮ್ಮ ಗರಡಿಗೆ ಬಂದು ತಪ್ಪು ಕಾಣಿಕೆ ಹಾಕಿ ಸಮಾಜದ ಮುಂದೆ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಅಧಿಕಾರಿಯವರೇ ಹೇಳುವಂತೆ ಅವರು ಸಿಕ್ಕಲ್ಲೆಲ್ಲ ನಾವು ತಾಂಟಲು ಸಿದ್ದರಿದ್ದೇವೆ” ಎಂದು ಮಾಜಿ ಕಾರ್ಪೊರೇಟರ್, ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಎಚ್ಚರಿಕೆ ನೀಡಿದ್ದಾರೆ.