ಅಂಗವೈಫಲ್ಯವನ್ನು ಮೆಟ್ಟಿ ನಿಂತ ಸಾಧಕ
Team Udayavani, Nov 20, 2019, 7:03 PM IST
ಸಾಧಿಸುವ ಛಲವೊಂದಿದ್ದರೆ ಅಸಾಧ್ಯವೂ ಸಾಧ್ಯ ಎಂಬುವುದಕ್ಕೆ ಮಂಗಳೂರಿನ ಈ ಯುವ ಪ್ರತಿಭೆಯೊಬ್ಬರು ಸಾಕ್ಷಿಯಾಗಿದ್ದಾರೆ. ಇವರೇ ಮಂಗಳೂರಿನ ಹೊರವಲಯದ ಅಡ್ಯಾರುಪದವಿನ Jagadish Poojary ಯವರು. ಇವರಿಗೆ ಒಂದೂವರೆ ವರ್ಷದ ಬಾಲಕನಾಗಿದ್ದಾಗ ಸೈಕಲ್ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಗುಡ್ಡದ ಕೆಳಗೆ ಬಿದ್ದರು, ಪರಿಣಾಮವಾಗಿ ಜಗದೀಶ್ ಪೂಜಾರಿ ಬಲ ಕಾಲಿಗೆ ಗಂಭೀರ ಗಾಯವಾಯಿತು, ಆದ್ರೆ ಜಗದೀಶ್ ಕುಟುಂಬದಲ್ಲಿ ಬಡತನವಿದ್ದ ಕಾರಣ ಹೆಚ್ಚಿನ ಚಿಕಿತ್ಸೆ ಕೊಡಿಸುವ ಸಾಧ್ಯವಾಗಲಿಲ್ಲ. ಪರಿಣಾಮ ಬಲಗಾಲು ಅರ್ಧ ಸ್ವಾಧೀನ ಕಳೆದುಕೊಂಡಿತು. ಆದರೆ ಇದ್ಯಾವುದಕ್ಕೆ ಎದೆಗುಂದದೆ ಜೆಮ್ ಸೆಂಟರ್ ಸೇರಿ ಅಂಗವೈಫಲ್ಯವನ್ನೂ ಮೀರಿ ದೇಹ ಹುರಿ ಗೊಳಿಸಿ, ತಾನು ಮೊದಲು ಭಾಗವಹಿಸಿದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಅಚ್ಚರಿ ಮೂಡಿಸಿದರು.ಈಗಾಗಲೇ ವಿಶೇಷ ಚೇತನರ ವಿಭಾಗದ ದೇಹದಾರ್ಡ್ಯ ಸ್ಪರ್ಧೆಗಳಲ್ಲಿ ಜಿಲ್ಲಾ ,ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಸುಮಾರು ನಾಲ್ವತ್ತೆಂಟು ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ.