ಅಭಿಮಾನಿ ದೇವರುಗಳ ಭೇಟಿ ಇಲ್ಲದೆ ಬಿಕೋ ಅನ್ನುತ್ತಿರುವ ಅಣ್ಣಾವ್ರ ಪುಣ್ಯಭೂಮಿ
Team Udayavani, Apr 12, 2020, 4:46 PM IST
ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ವರನಟ ಡಾ. ರಾಜ್ ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಪ್ರತಿನಿತ್ಯ ಸಾವಿರಾರು ಜನ ಅಭಿಮಾನಿಗಳು ಭೇಟಿ ನೀಡುತ್ತಿದ್ದರು. ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಈ ಸ್ಥಳದಲ್ಲಿ ಜನಜಂಗುಳಿ ತಪ್ಪುತ್ತಿರಲಿಲ್ಲ. ಆದರೆ ಇದೀಗ ಕೋವಿಡ್ ಸಂಬಂಧಿತ ಲಾಕ್ ಡೌನ್ ಕಾರಣದ ಎಫೆಕ್ಟ್ ಈ ಸ್ಮಾರಕವಿರುವ ಪ್ರದೇಶದ ಮೇಲೂ ಪರಿಣಾಮವನ್ನು ಬೀರಿದೆ. ಈಗ ಹೇಗಿದೆ ನೋಡಿ ಅಣ್ಣಾವ್ರ ಶಾಶ್ವತವಾಗಿ ವಿಶ್ರಾಂತಿ ಪಡೆದುಕೊಳ್ಳುತ್ತಿರುವ ‘ಪುಣ್ಯ ಭೂಮಿ’.