ಕಾಲಿನ ಮೂಲಕ SSLC ಪರೀಕ್ಷೆ ಬರೆದು ಗಮನಸೆಳೆದಿದ್ದ ಕೌಶಿಕ್ ನ ಇನ್ನೊಂದು ವಿಡಿಯೋ ವೈರಲ್
Team Udayavani, Aug 23, 2020, 2:00 PM IST
ಬಂಟ್ವಾಳ : ಕಾಲಿನ ಮೂಲಕ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದು ರಾಜ್ಯದಲ್ಲಿ ಸುದ್ದಿಯಾಗಿದ್ದ ಬಂಟ್ವಾಳ ದ ಕೌಶಿಕ್ ಚೌತಿಯ ದಿನದಂದು ತುಳುನಾಡಿನ ವಿಶಿಷ್ಟ ಮತ್ತು ಪ್ರಸಿದ್ಧ ತಿಂಡಿಯಾದ ಕೊಟ್ಟಿಗೆ ಗೆ ತಯಾರಿಸಲು ಮನೆಯಲ್ಲಿ ಹಲಸಿನ ಎಲೆಯನ್ನು ಕಾಲಿನ ಸಹಾಯದಿಂದ ಕಟ್ಟುತ್ತಿತರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಂಟ್ವಾಳ ಕಂಚಿಕಾರ ಪೇಟೆ ನಿವಾಸಿ ಕೌಶಿಕ್ ಇತ್ತೀಚೆಗೆ ನಡೆದ ಎಸ್.ಎಸ್.ಎಲ್.ಸಿ.ಪರೀಕ್ಷೆ ಯನ್ನು ಕಾಲಿನ ಬೆರಳಿನ ಸಹಾಯದಿಂದ ಬರೆದಿದ್ದ, ಈ ಬಗ್ಗೆ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಂದ ಮೆಚ್ಚುಗೆ ಯ ಮಾತುಗಳನ್ನು ಪಡೆದಿದ್ದ.