ನೂತನ ತಂತ್ರಜ್ಞಾನದಿಂದ ದುರಸ್ತಿಗೊಂಡ ಕೂಳೂರು ಸೇತುವೆ : ಸಂಚಾರಕ್ಕೆ ಮುಕ್ತ
Team Udayavani, May 20, 2020, 8:13 PM IST
ಕೂಳೂರು: ಕೂಳೂರು ಹಳೇ ಸೇತುವೆ ನೂತನ ತಂತ್ರಜ್ಞಾನದೊಂದಿಗೆ ದುರಸ್ತಿಯಾಗಿದ್ದು ಬುಧವಾರ ಸಾಂಕೇತಿಕವಾಗಿ ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಜೀರ್ಣಾವಸ್ಥೆಯಲ್ಲಿದ್ದ ಈ ಸೇತುವೆಯನ್ನು 38ಲಕ್ಷ ರೂ. ವೆಚ್ಚದಲ್ಲಿ ಮೈಕ್ರೋ ಕಾಂಕ್ರೀಟ್ ತಂತ್ರಜ್ಞಾನದೊಂದಿಗೆ ದುರಸ್ತಿಗೊಳಿಸಲಾಗಿದೆ. ಈ ಸೇತುವೆ ದುರಸ್ತಿಗೊಳಿಸದೇ ನೂತನ ಸೇತುವೆ ನಿರ್ಮಾಣಕ್ಕಿಳಿದರೆ ವಾಹನ ಓಡಾಟಕ್ಕೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಇದನ್ನು ದುರಸ್ತಿಗೊಳಿಸಲಾಗಿದೆ. ಹೊಸ ಸೇತುವೆ ಶೀಘ್ರ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಇದೇ ವೇಳೆ ಗುರುಪುರ ಸೇತುವೆ ಕುರಿತಂತೆ ಉತ್ತರಿಸಿದ ಅವರು ಸೇತುವೆ ಕೆಲಸ ಪೂರ್ಣವಾಗಿದ್ದು ಸಂಪರ್ಕ ರಸ್ತೆ ನಿರ್ಮಾಣವಾಗಬೇಕಿದೆ. ಕೋವಿಡ್ ಸಮಸ್ಯೆಯಿಂದ ವಿಳಂಬವಾಗಿದೆ ಎಂದರು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
IPL-2025: ಓಂಕಾರ್ ಸಾಳ್ವಿ ಆರ್ಸಿಬಿ ಬೌಲಿಂಗ್ ಕೋಚ್
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Ration Card: ಬಡವರಿಗೆ ಬಿಪಿಎಲ್ ಕಾರ್ಡ್ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ