ಫಾಸ್ಟ್ ಟ್ಯಾಗ್ ಅಳವಡಿಸದಿದ್ದರೆ ದಂಡ ಕಟ್ಟಿ ಸಾಗಬೇಕು ಎಂಬುವುದು ಯಾವ ನ್ಯಾಯ
Team Udayavani, Dec 6, 2019, 5:39 PM IST
ಮಂಗಳೂರು : ಕೇಂದ್ರ ಸರಕಾರವು ಜಾರಿಗೆ ತಂದ ಫಾಸ್ಟ್ಟ್ಯಾಗ್ ನಿಯಮದ ಹಿಂದೆ ದೊಡ್ಡ ಲಾಬಿ ಇದೆ. ಫಾಸ್ಟ್ ಟ್ಯಾಗ್ ಅಳವಡಿಸದಿದ್ದರೆ ದಂಡ ಕಟ್ಟಿ ಸಾಗಬೇಕು ಎಂಬುವುದು ಯಾವ ನ್ಯಾಯ. ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. ಮತ್ತೂಂದೆಡೆ ರಸ್ತೆಗಳು ಗುಂಡಿ ಬಿದ್ದಿವೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.