ಮಟ್ಟು :ಪಂಚಾಯತ್ ಚುನಾವಣೆ ಬಹಿಷ್ಕಾರದ ಕೂಗು
Team Udayavani, Dec 17, 2020, 8:36 PM IST
ಕಟಪಾಡಿ; ರಾಜ್ಯದ ಹಲವೆಡೆ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಬಹಿಷ್ಕಾರ ಮಾಡುತ್ತಿರುವ ಸುದ್ದಿ ಕೇಳಿಬರುತ್ತಿರುವ ಬೆನ್ನಲ್ಲೇ ಉಡುಪಿ ಜಿಲ್ಲೆಯ ಕಾಪು ತಾಲೂಕು ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ವಾರ್ಡ್ ನ ಪರಿಶಿಷ್ಟರಾದ ಗೊಡ್ಡ ಸಮುದಾಯದವರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮತದಾನ ಬಹಿಷ್ಕಾರದ ಕೂಗು ಕೇಳಿ ಬರುತ್ತಿದೆ . ತಮ್ಮ ಆರಾಧ್ಯ, ಸುಮಾರು 300 ವರ್ಷಗಳ ಇತಿಹಾಸ ಇರುವ ಮಟ್ಟು ಶ್ರೀ ಬ್ರಹ್ಮ ಮುಗ್ಗೆರ್ಕಳ ದೈವಸ್ಥಾನ ಮೇ 2018 ರಲ್ಲಿ ಊರ ಹಾಗು ಪರವೂರ ಭಕ್ತರ ಸಹಕಾರದೊಂದಿಗೆ ಜೀರ್ಣೋಧ್ದರ ಗೊಂಡಿದ್ದು , ಕೇವಲ ಗರ್ಭ ಗುಡಿಯ ಹಾಗು ಮುಖ ಮಂಟಪ ಕಾಮಗಾರಿ ಮಾತ್ರ ಪೂರ್ಣ ಗೊಂಡಿರುತ್ತದೆ . ಅಗ್ರಸಭೆ ಹಾಗು ಆವರಣ ಗೋಡೆ ಕಾಮಗಾರಿ ಬಾಕಿ ಇರುತ್ತದೆ . ಈ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪರಿಶಿಷ್ಟರಾದ ನಮಗೆ ಕಷ್ಟ ಸಾಧ್ಯ. ಅದರಿಂದ ನಾವು ಸರ್ಕಾರದ ಜನಪ್ರತಿನಿಧಿಗಳಿಗೆ , ಹಾಗು ಮುಜುರಾಯಿ ಇಲಾಖೆ ಗೆ ಸರಕಾರಿ ಅನುದಾನಕ್ಕೆ ಮನವಿ ಸಲ್ಲಿಸಿರುತ್ತೇವೆ. ಆದರೆ 2 ವರ್ಷ ಕಳೆದರೂ ಯಾವುದೇ ಸೂಕ್ತ ಸರಕಾರಿ ಅನುದಾನ ನಮಗೆ ಸಿಕ್ಕಿರುವುದಿಲ್ಲ ಎಂದು ಪ್ರಮುಖ ಗುರುರಾಜ್ ಅವರು ಆಕ್ರೋಶ ಹೊರಹಾಕಿ ದ್ದಾರೆ ಅಲ್ಲದೆ ನಮ್ಮ ವಾರ್ಡ್ ನಲ್ಲಿ 3 -4 ದಿವಸೊಕೊಮ್ಮ ಕುಡಿಯುವ ನೀರು ಸರಬರಾಜು ಆಗುತಿದ್ದ್ದು , ಅದಕ್ಕೂ ಪರಿಶಿಷ್ಟ ರಾದ ನಮ್ಮಿಂದ ಪಂಚಾಯತ್ ನೀರಿನ ಬಿಲ್ಲು ನ್ನು ಪ್ರತಿ ತಿಂಗಳು ಪಡೆಯುತ್ತಾರೆ. ಸುಮಾರು 50 ಪರಿಶಿಷ್ಟ ಕುಟುಂಬಗಳು ವಾಸಿಸುತ್ತಿದು ಕೆಲವರಿಗೆ ಸೂಕ್ತ ಜಾಗ ಹಾಗು ಮನೆಯ ವ್ಯವಸ್ಥೆ ಇರುವುದಿಲ್ಲ. ಅದರಿಂದ ನಮಗೆ ಸೂಕ್ತ ಸರಕಾರಿ ಜಾಗವನ್ನು ನೀಡಲು ಆಗ್ರಹಿಸುತ್ತಿದ್ದೇವೆ . ಅಲ್ಲದೆ ನಮ್ಮಲ್ಲಿ ವಿದ್ಯಾವಂತ ಯುವಕ , ಯುವಕರಿಗೆ ಕೋಟೆ ಪಂಚಾಯತ್ ನಲ್ಲಿ ಮೀಸಲು ಉದ್ಯೋಗ ಮತ್ತು ಸರಕಾರೀ ಉದ್ಯೋಗವನ್ನ್ಯು ನೀಡಲು ಆಗ್ರಹಿಸುತಿದರು. ಬೇಡಿಕೆ ಈಡೇರಿಸದಿದ್ದಲ್ಲಿ ಮುಂಬರುವ ತಾ.ಪಂ. ಹಾಗೂ ಜಿಲ್ಲಾ ಪಂಚಾಯತ್ ಮತದಾನ ಬಹಿಷ್ಕಾರದ ನಿಲುವಾಗಿದೆ ಎಂದಿದ್ದಾರೆ. ಈ ಸಂದರ್ಭ ಪ್ರಮುಖ ರಾದ ನಾಗರಾಜ್, ದಿನೇಶ್, ರಾಘು, ಪ್ರದೀಪ್, ಧನಂಜಯ ಮತ್ತಿತರ ರು ಉಪಸ್ಥಿತರಿದ್ದರು
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ
Lok Adalat: ಲೋಕ್ ಅದಾಲತ್ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ