ದಿನ 3 | ಚಂದ್ರಘಂಟಾ | ಪಾರ್ವತಿ ತಾಯಿ ರೌದ್ರ ರೂಪ ತಾಳಲು ಕಾರಣವೇನು ?
Navarathri Special day 3
Team Udayavani, Sep 28, 2022, 12:02 PM IST
ನವರಾತ್ರಿಯ 9 ದಿನಗಳು 9 ಬಣ್ಣಗಳು ಮತ್ತದರ ಮಹತ್ವವನ್ನು ಸಾರುತ್ತವೆ. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿಧಾತ್ರಿ ನವಶಕ್ತಿಗಳನ್ನು ಅತ್ಯಂತ ಪೂಜ್ಯ ಭಾವದಿಂದ ಆರಾಧಿಸುತ್ತೇವೆ. ಪ್ರತಿದಿನ ಪೂಜಿಸುವ ದೇವಿಯ ಮಹತ್ವ ಸಾರುವ ವಿಡಿಯೋ ಇಲ್ಲಿದೆ.
#3 ಚಂದ್ರಘಂಟಾ:
ಚಂದ್ರನನ್ನು ಶಿರದಲ್ಲಿ ಧರಿಸಿದ ಈ ಮಾತೆ, ಜೀವನದಲ್ಲಿ ಶಾಂತಿ, ಶೀತಲತೆ ಅಂದರೆ, ಪ್ರೀತಿ – ವಾತ್ಸಲ್ಯ – ಮಮಕಾರದ ಭಾವವನ್ನು ಜಾಗೃತಗೊಳಿಸುವರು. ಪ್ರೀತಿ – ಮಮಕಾರಗಳು ಇಲ್ಲಿ ಒಬ್ಬ ವ್ಯಕ್ತಿ – ವಸ್ತುವಿಗೆ ಮಾತ್ರ ಸಂಬಂಧಿಸಿಲ್ಲ ಅದು ಲೋಕದ ಎಲ್ಲರನ್ನು ಎಲ್ಲವನ್ನೂ ದೈವೀಕವಾಗಿ ಕಾಣುವ ತತ್ವದ ಪ್ತತೀಕ.