ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು
Team Udayavani, Dec 2, 2021, 5:39 PM IST
1. ಕರ್ನಾಟಕಕ್ಕೇ ಕಾಲಿಟ್ಟ ಒಮಿಕ್ರಾನ್ : ದೇಶದಲ್ಲಿ ಮೊದಲ 2 ಪ್ರಕರಣಗಳು!
ಬೆಂಗಳೂರು : ಕೋವಿಡ್ ರೂಪಾಂತರಿ ವೈರಸ್ ಕರ್ನಾಟಕಕ್ಕೇ ಕಾಲಿಟ್ಟಿದ್ದು, ದೇಶದಲ್ಲಿ ಮೊದಲ 2 ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿ ಆತಂಕ ಮೂಡಿಸಿದೆ.
2. ಡಿ.13ಕ್ಕೆ ಎಚ್ಡಿಡಿ ಆತ್ಮ ಚರಿತ್ರೆ ಬಿಡುಗಡೆ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಹುನಿರೀಕ್ಷಿತ “ಆತ್ಮ ಚರಿತ್ರೆ’ ಕುರಿತ ಪುಸ್ತಕ ಡಿಸೆಂಬರ್ 13ಕ್ಕೆ ನವದೆಹಲಿಯಲ್ಲಿ ಬಿಡುಗಡೆಯಾಗಲಿದೆ. ಈ ಪುಸ್ತಕವನ್ನು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಬರೆದಿದ್ದಾರೆ. ದೇವೇಗೌಡರ ವೈಯಕ್ತಿಕ ಹಾಗೂ ರಾಜಕೀಯ ಜೀವನದ ಏಳುಬೀಳುಗಳನ್ನು ಇದು ಒಳಗೊಂಡಿದೆ.
3. ಬಿಜೆಪಿ ಜತೆ ಮೈತ್ರಿಗೆ ಎಚ್ಡಿಕೆ ಇಂಗಿತ
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಯನ್ನು ಬೆಂಬಲಿಸುವ ಮುನ್ಸೂಚನೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿದ್ದಾರೆ. ಈ ಬಗ್ಗೆ ದೇವೇಗೌಡರು ದಿಲ್ಲಿಯಿಂದ ಬಂದ ಮೇಲೆ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.
4. ಚಿರತೆಯೊಂದಿಗೆ ಹೋರಾಡಿ ಮಗನನ್ನು ರಕ್ಷಣೆ ಮಾಡಿದ ತಾಯಿ
ಮಗನನ್ನು ತನ್ನ ಕಣ್ಣೆದುರೇ ಹೊತ್ತೂಯ್ದ ಚಿರತೆಯೊಂದಿಗೆ ಹೋರಾಡಿ, ತಾಯಿಯು ಮಗನನ್ನು ರಕ್ಷಿಸಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಸಿಧಿ ಜಿಲ್ಲೆಯ ಬುಡಕಟ್ಟು ಮಹಿಳೆ ಕಿರಣ, ರವಿವಾರ ರಾತ್ರಿ ತನ್ನ ಮೂರು ಮಕ್ಕಳೊಂದಿಗೆ ಮನೆಯ ಹೊರಗೆ ಬೆಂಕಿಯಿಂದ ಚಳಿ ಕಾಯಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
5. ವಿಶ್ವದ ಅಗ್ಗದ ನಗರಗಳಲ್ಲೊಂದು “ಅಹ್ಮದಾಬಾದ್’
ಗುಜರಾತ್ ರಾಜಧಾನಿ ಅಹ್ಮದಾಬಾದ್ ನಗರ, ವಿಶ್ವದಲ್ಲೇ ಅಗ್ಗದ ನಗರಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ರಿಟನ್ ಮೂಲದ economic intelligence unit ಸಂಸ್ಥೆಯು ನಡೆಸಿರುವ ಸಮೀಕ್ಷೆಯಲ್ಲಿ ಈ ವಿಚಾರ ಹೊರಬಿದ್ದಿದೆ.
6. ಶಬರಿಮಲೆಯಲ್ಲಿ ಇ-ಹುಂಡಿ
ಪ್ರಸಿದ್ಧ ಶಬರಿಮಲೆ ದೇಗುಲದಲ್ಲಿ ಇನ್ನು ಮುಂದೆ ಭಕ್ತಾದಿಗಳು ಗೂಗಲ್ ಪೇ ಮೂಲಕವೂ ಕಾಣಿಕೆ ಸಲ್ಲಿಸಬಹುದಾಗಿದೆ.. ಅದಕ್ಕೆಂದು ದೇವಸ್ಥಾನದ ಮಂಡಳಿ ದೇವಸ್ಥಾನದ ಆವರಣದಲ್ಲಿ ಎಲೆಕ್ಟ್ರಾನಿಕ್ ಹುಂಡಿ ನಿರ್ಮಾಣ ಮಾಡಿದೆ. ಕೇರಳದ ಧನಲಕ್ಷ್ಮಿ ಬ್ಯಾಂಕ್ನೊಂದಿಗೆ ಒಡಂಬಡಿಕೆ ಮಾಡಿಕೊಂಡು, ಎಲೆಕ್ಟ್ರಾನಿಕ್ ಹುಂಡಿ ನಿರ್ಮಿಸಲಾಗಿದೆ.
7. ಹಿರಿಯ ಚಿತ್ರ ನಟ ಶಿವರಾಂ ಅರೋಗ್ಯ ಸ್ಥಿತಿ ಗಂಭೀರ
ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಅವರಿಗೆ ವಿದ್ಯಾಪೀಠ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. 84 ರ ಹರೆಯದ ಶಿವರಾಂ ಮೂರು ದಿನಗಳ ಹಿಂದೆ ಮನೆಯಲ್ಲಿ ಆಯತಪ್ಪಿ ಬಿದ್ದು ತಲೆಯ ಭಾಗಕ್ಕೆ ಗಂಭೀರವಾದ ಗಾಯವಾಗಿದೆ ಎಂದು ತಿಳಿದು ಬಂದಿದೆ.
8. ಐದು ವರ್ಷ ಬಳಿಕ ಮುಂಬಯಿಗೆ ಟೆಸ್ಟ್ ಆತಿಥ್ಯ
ಭಾರತ-ನ್ಯೂಜಿಲ್ಯಾಂಡ್ ನಡುವಿನ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯ ಶುಕ್ರವಾರದಿಂದ ಮುಂಬಯಿಯಲ್ಲಿ ನಡೆಯಲಿದೆ. ಇದರೊಂದಿಗೆ 5 ವರ್ಷಗಳ ಬಳಿಕ “ವಾಂಖೇಡೆ ಸ್ಟೇಡಿಯಂ’ಗೆ ಟೆಸ್ಟ್ ಕ್ರಿಕೆಟ್ ಮರಳಿದಂತಾಗುತ್ತದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Madikeri: ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್