ಪಂಜ್ ಶೀರ್ ಪ್ರಾಂತ್ಯದಲ್ಲಿ ಪಾಕ್ ವಾಯುಪಡೆಯಿಂದ ಡ್ರೋನ್ ಬಾಂಬ್ ದಾಳಿ!
Team Udayavani, Sep 6, 2021, 7:17 PM IST
ದೇಶ ಉಳಿಸಲು ರೈತ ಒಕ್ಕೂಟ ಕರೆ ಉತ್ತರಪ್ರದೇಶ, ಸುತ್ತಮುತ್ತಲಿನ ರಾಜ್ಯಗಳ ಸಾವಿರಾರು ರೈತರು ಮುಜಫ್ಘರ್ನಗರದಲ್ಲಿ “ಕಿಸಾನ್ ಮಹಾಪಂಚಾಯತ್’ ನಡೆಸಿದ್ದಾರೆ. “ದೇಶಾದ್ಯಂತ ಇಂಥ ಪಂಚಾಯತ್ಗಳು ನಡೆಯಲಿದ್ದು, ದೇಶವನ್ನು ಮಾರಾಟ ಮಾಡುವುದನ್ನು ನಾವು ತಡೆಯಬೇಕಾಗಿದೆ. ಅನ್ನದಾತರನ್ನು, ದೇಶವನ್ನು, ಯುವಕರನ್ನು, ಉದ್ಯೋಗಿಗಳನ್ನು ರಕ್ಷಿಸುವುದು ಈ ರ್ಯಾಲಿಯ ಉದ್ದೇಶ’ ಎಂದು ಕಿಸಾನ್ ಒಕ್ಕೂಟದ ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 38,948 ಕೋವಿಡ್ ಪ್ರಕರಣ ಪತ್ತೆ ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 38,948 ಹೊಸ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದ್ದು, 219 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿ-ಅಂಶದಲ್ಲಿ ತಿಳಿದುಬಂದಿದೆ. ಹೊಸ ವೀಸಾ ಪ್ರಕಟಿಸಿದ ಯುಎಇ ಸಂಯುಕ್ತ ಅರಬ್ ಅಮೀರ್ಶಾಹಿ ಹೊಸ ಶ್ರೇಣಿಯ ವೀಸಾ ಗಳನ್ನು ಘೋಷಿಸಿದೆ. ಈ “ಗ್ರೀನ್ ವೀಸಾ’ ಪಡೆದಿರುವ ವಿದೇಶೀಯರು ಪ್ರಾಯೋಜಕತ್ವ ಇಲ್ಲದೆಯೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅವರ 25 ವರ್ಷದ ವರೆಗಿನ ಮಕ್ಕಳು ಕೂಡ ಜತೆಗಿರಬಹುದು. ಜತೆಗೆ ಉದ್ಯೋಗ ಕಳೆದು ಕೊಂಡವರಿಗೆ 180 ದಿನಗಳ ವರೆಗೆ ಯುಎಇಯಲ್ಲಿ ಇರಲು ಅನುಮತಿ ನೀಡಲಾಗಿದೆ. ಪಂಜ್ ಶೀರ್ ಪ್ರಾಂತ್ಯದಲ್ಲಿ ಪಾಕ್ ವಾಯುಪಡೆಯಿಂದ ಡ್ರೋನ್ ಬಾಂಬ್ ದಾಳಿ! ಅಫ್ಘಾನಿಸ್ತಾನದ ಪ್ರತಿರೋಧ ಪಡೆಗಳ ಕೊನೆಯ ಭದ್ರಕೋಟೆಯಾದ ಪಂಜ್ಶೀರ್ ಪ್ರಾಂತ್ಯದಲ್ಲಿ ಪಾಕಿಸ್ತಾನದ ವಾಯುಪಡೆಯು ಡ್ರೋನ್ ಗಳನ್ನು ಬಳಸಿ ಬಾಂಬ್ ಸ್ಫೋಟ ನಡೆಸಿದೆ ಎನ್ನಲಾಗಿದ್ದು, ಈ ನಡುವೆ ಯುದ್ಧದಲ್ಲಿ ಭಾರೀ ನಷ್ಟ ಅನುಭವಿಸಿದ ಬಳಿಕ ಪಂಜಶೀರ್ ಕಣಿವೆಯಲ್ಲಿನ ಪ್ರತಿರೋಧ ಪಡೆಗಳು ಕದನ ವಿರಾಮಕ್ಕೆ ಕರೆ ನೀಡಿವೆ ಎಂದು ತಿಳಿದುಬಂದಿದೆ. ಸೆ.13 ರವರೆಗೆ ಕರ್ಫ್ಯೂ ವಿಸ್ತರಣೆ ಗೋವಾದಲ್ಲಿ ಜಾರಿಯಲ್ಲಿರುವ ಕರ್ಫ್ಯೂ ವನ್ನು ಸಪ್ಟೆಂಬರ್ 13 ರವರೆಗೆ ವಿಸ್ತರಣೆ ಮಾಡಲಾಗಿದೆ. ಕೇರಳದಿಂದ ಗೋವಾಕ್ಕೆ ಆಗಮಿಸುವವರನ್ನು ಖಡ್ಡಾಯವಾಗಿ ಕ್ವಾರಂಟೈನ್ನಲ್ಲಿಡಲು ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಆದೇಶ ಹೊರಡಿಸಿದೆ. ಮುಂದಿನ ಸಿಎಂ ಎಂದು ಟವಲ್ ಹಾಕಿದ ಕಾಂಗ್ರೆಸ್ ನವರು ತಮ್ಮ ಟವಲ್ ತೆಗೆಯಬೇಕಿದೆ ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಟವಲ್ ಹಾಕಿಕೊಂಡಿದ್ದವವರು ತಮ್ಮ ಸಿಎಂ ಟವಲ್ ತೆಗೆಯಬೇಕು. ಸಿದ್ದರಾಮಯ್ಯ ಎಲ್ಲೂ ಪ್ರವಾಸ ಮಾಡಿರಲಿಲ್ಲ. ಡಿ ಕೆಶಿವಕುಮಾರ್ ಅಧ್ಯಕ್ಷರಾಗಿ ಸೋತಿದ್ದಾರೆ ಎಂದು ಸಂದೇಶ ಸಾರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಅನಂತನಾಗ್ ಬರ್ತ್ಡೇಗೆ ‘ವಿಜಯಾನಂದ’ ಲುಕ್ ಹೊರಕ್ಕೆ ಹಿರಿಯ ನಟ ಅನಂತ ನಾಗ್ ಜನ್ಮದಿನದ ಸಂದರ್ಭದಲ್ಲಿ, ಅನಂತ ನಾಗ್ ಅಭಿನಯಿಸುತ್ತಿರುವ ಮುಂಬರುವ ಚಿತ್ರ “ವಿಜಯಾನಂದ’ದ ಕ್ಯಾರೆಕ್ಟರ್ ಪೋಸ್ಟರ್ ಬಿಡುಗಡೆಯಾಗಿದೆ. ಉದ್ಯಮಿ ವಿಜಯ ಸಂಕೇಶ್ವರ ಅವರ ಬಯೋಪಿಕ್ ಆಗಿರುವ “ವಿಜಯಾನಂದ’ ಚಿತ್ರದಲ್ಲಿ ಅನಂತ ನಾಗ್, ವಿಜಯ ಸಂಕೇಶ್ವರ್ ಅವರ ತಂದೆ ಬಿ.ಜಿ ಸಂಕೇಶ್ವರ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ಗೆ ಅಭಿನಂದನೆ ಇತ್ತೀಚೆಗೆ ಮುಕ್ತಾಯಗೊಂಡ ಒಲಂಪಿಕ್ಸ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಶಿವಮೊಗ್ಗ ಮೂಲದ ಅಂಕಿತಾ ಬಿ.ಎಸ್ ಅವರನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಭಿನಂದಿಸಿದರು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ