ಹಿಜಾಬ್, ಜೀನ್ಸ್, ಬಿಕಿನಿ ಹೆಣ್ಣು ಮಕ್ಕಳ ಹಕ್ಕು : ಪ್ರಿಯಾಂಕಾ ಗಾಂಧಿ ವಾದ್ರಾ
Team Udayavani, Feb 9, 2022, 6:04 PM IST
1. ಹಿಜಾಬ್ ವಿವಾದ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ
ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್ ನಲ್ಲಿ ಬುಧವಾರ ವಿಚಾರಣೆ ನಡೆಸಿದ ನ್ಯಾ| ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾಯಿಸಿ ಆದೇಶ ನೀಡಿದ್ದಾರೆ.
2. ಸಮಾನತೆ ಪ್ರತಿಮೆ.. ಇದು ಆತ್ಮನಿರ್ಭರವೋ, ಚೀನಾ ನಿರ್ಭರವೋ
ಇತ್ತೀಚೆಗೆ ಹೈದರಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ ಸಮಾನತೆಯ ಪ್ರತಿಮೆಯನ್ನು ಚೀನಾದಲ್ಲಿ ನಿರ್ಮಿಸಲಾಗಿದ್ದು, ಇದು ಆತ್ಮನಿರ್ಭರವೋ ಅಥವಾ ಚೀನಾ ನಿರ್ಭರವೋ ಎಂದು ರಾಹುಲ್ ಗಾಂಧಿ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.
3. ಟ್ರೆಕ್ಕಿಂಗ್ ವೇಳೆ ಕಣಿವೆಯಲ್ಲಿ ಸಿಲುಕಿದ ಯುವಕನನ್ನು ರಕ್ಷಿಸಿದ ಸೇನೆ
ಕೇರಳದ ಪಾಲಕ್ಕಾಡಿನ ಎಲಿಚಿರದಲ್ಲಿರುವ ಕುರುಂಬಚಿ ಬೆಟ್ಟಕ್ಕೆ ಟ್ರೆಕ್ಕಿಂಗ್ಗೆಂದು ತೆರಳಿದ್ದ ವೇಳೆ ಬೆಟ್ಟದ ಕಣಿವೆ ಯಲ್ಲಿ ಸಿಲುಕಿದ್ದ ಆರ್.ಬಾಬು ಅವರನ್ನು ಬುಧವಾರ ಬೆಳಗ್ಗೆ ಕಾರ್ಯಾಚರಣೆ ಮಾಡಿ ರಕ್ಷಿಸುವಲ್ಲಿ ಸೇನಾಪಡೆ ಯಶಸ್ವಿಯಾಗಿದೆ.
4. ಹಿಜಾಬ್, ಜೀನ್ಸ್, ಬಿಕಿನಿ ಹೆಣ್ಣು ಮಕ್ಕಳ ಹಕ್ಕು
ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾಡಿರುವ ಟ್ವೀಟ್ ಹೊಸ ವಿವಾದ ಸೃಷ್ಟಿಸಿದ್ದು, ಹೆಣ್ಣು ಮಕ್ಕಳು ಬಿಕಿನಿಯಾದರೂ ಧರಿಸಲಿ, ಜೀನ್ಸ್ ಆದರೂ ಧರಿಸಲಿ ಅಥವಾ ಹಿಜಾಬಾದರೂ ತೊಡಲಿ. ಅದು ಅವಳ ಹಕ್ಕು. ಯಾವುದನ್ನು ಧರಿಸಬೇಕೆಂಬುದನ್ನು ಅವಳೇ ನಿರ್ಧರಿಸುತ್ತಾಳೆ. ಭಾರತದ ಸಂವಿಧಾನ ಅವಳಿಗೆ ಆ ಹಕ್ಕನ್ನು ನೀಡಿದೆ ಎಂದು ಟ್ವೀಟ್ ಮಾಡಿದ್ದಾರೆ.
5. ಕರ್ನಾಟಕದ ಹಿಜಾಬ್ ವಿವಾದ: ಪಾಕಿಸ್ತಾನ ಆಕ್ರೋಶ-ಖುರೇಷಿ ಟ್ವೀಟ್
ಕರ್ನಾಟಕದ ಹಿಜಾಬ್ ವಿವಾದದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ನಡುವೆಯೇ ಪಾಕಿಸ್ತಾನ ಕೂಡಾ ಆಕ್ಷೇಪ ಎತ್ತಿ ಟ್ವೀಟ್ ಮಾಡಿದೆ. ಶಿಕ್ಷಣ ಸಂಸ್ಥೆಯಲ್ಲಿ ಹಿಜಾಬ್ ಧರಿಸುವ ಅವಕಾಶವನ್ನು ನಿರಾಕರಿಸುವುದು ಮುಸ್ಲಿಂ ಹೆಣ್ಣುಮಕ್ಕಳ ಮೂಲಭೂತ ಹಕ್ಕುಗಳನ್ನು ಭಾರತ ಉಲ್ಲಂಘಿಸುತ್ತಿದೆ”ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮೂದ್ ಖುರೇಷಿ ಟ್ವೀಟ್ ಮಾಡಿದ್ದಾರೆ.
6. ಓಪೋ ರೆನೊ 7 ಪ್ರೋ 5ಜಿ ಮಾರುಕಟ್ಟೆಗೆ
ಓಪೋ ಸಂಸ್ಥೆಯು ಕಳೆದ ವಾರ ಬಿಡುಗಡೆ ಮಾಡಿದ್ದ ರೆನೊ 7 ಪ್ರೋ 5ಜಿ ಫೋನ್ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಾಗಿದೆ. 12ಜಿಬಿ RAM ಜೊತೆ 256ಜಿಬಿ ಇಂಟರ್ನಲ್ ಸ್ಟೋರೇಜ್ ಇರುವ ಫೋನಿನ ಬೆಲೆ 39,999 ರೂ ಆಗಿದೆ.
7. ಕೆಜಿಎಫ್: 2’ ಗೆ ಡಬ್ಬಿಂಗ್ ಮುಗಿಸಿದ ರವೀನಾ ಟಂಡನ್
ನಟಿ ರವೀನಾ ಟಂಡನ್ ಮುಂಬರುವ ಚಿತ್ರ ”ಕೆಜಿಎಫ್: ಚಾಪ್ಟರ್ 2” ನ ತಮ್ಮ ಪಾತ್ರಕ್ಕಾಗಿ ಡಬ್ಬಿಂಗ್ ಮುಗಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವು 2018 ರ “ಕೆಜಿಎಫ್”ನ ಮುಂದುವರಿದ ಭಾಗವಾಗಿದ್ದು, ರಾಕಿಯ ಕಥೆಯನ್ನು ಅನುಸರಿಸುತ್ತದೆ, ಬಡತನದಿಂದ ಎದ್ದು ಚಿನ್ನದ ಗಣಿ ರಾಜನಾಗುವ ಕಥೆಯಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ.
8. ಐಪಿಎಲ್ 2022: ಅಹಮದಾಬಾದ್ ತಂಡದ ಹೆಸರು ಪ್ರಕಟ
ಅಹಮದಾಬಾದ್ ಮೂಲದ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಅಂತಿಮವಾಗಿ ತನ್ನ ಹೆಸರನ್ನು ಪ್ರಕಟಿಸಿದ್ದು, ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದ ಹೊಸ ತಂಡಕ್ಕೆ ಗುಜರಾತ್ ಟೈಟಾನ್ಸ್ ಎಂದು ಹೆಸರಿಡಲಾಗಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ