ಕಾರ್ಕಳದ ಮಹಿಳೆಯ ಕಣ್ಣೀರ ಕಥೆಗೆ ಸ್ಪಂದನೆ
Team Udayavani, Jan 12, 2022, 6:41 PM IST
ಪಾದಯಾತ್ರೆ ತಡೆಯಲು ಹಿಂಜರಿಕೆ ಏಕೆ: ಸರ್ಕಾರಕ್ಕೆ ಹೈಕೋರ್ಟ್
1.“ನಮ್ಮ ನೀರು ನಮ್ಮ ಹಕ್ಕು” ಹೆಸರಿನಲ್ಲಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪಾದಯಾತ್ರೆ ವಿರೋಧಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ರಾಜ್ಯ ಸರ್ಕಾರವನ್ನು ಕೋರ್ಟ್ ಖಾರವಾಗಿ ಪ್ರಶ್ನಿಸಿದೆ. ಅನುಮತಿ ನೀಡಿಲ್ಲ ಎಂದಾದ ಮೇಲೆ ಪಾದಯಾತ್ರೆ ತಡೆಯಲು ಹಿಂಜರಿಕೆ ಏಕೆ ಎಂದು ಕೋರ್ಟ್ ಕೇಳಿದೆ.
2. ಸಾರಾಸಗಟಾಗಿ ಕ್ಷಮೆ ಯಾಚಿಸಿದ ಸಿದ್ಧಾರ್ಥ್ : ಸ್ವಾಗತಿಸಿದ ಸೈನಾ ನೆಹ್ವಾಲ್
ನಟ ಸಿದ್ಧಾರ್ಥ್ ಸೈನಾ ನೆಹ್ವಾಲ್ ವಿರುದ್ಧ ಅಸಭ್ಯ ಟ್ವೀಟ್ ಮಾಡಿ ಆಕ್ರೋಶಕ್ಕೆ ಗುರಿಯಾಗಿ, ವ್ಯಾಪಕ ಟೀಕೆ ಎದುರಿಸಿದ್ದರು. ಬುಧವಾರ ಪತ್ರವೊಂದನ್ನು ಬರೆದು, ಟ್ವೀಟ್ ಮಾಡಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ.
3. ಕಾರ್ಕಳದ ಮಹಿಳೆಯ ಕಣ್ಣೀರ ಕಥೆಗೆ ಸ್ಪಂದನೆ
ಕರಿಯಕಲ್ಲು ಕಜೆ ನಿವಾಸಿ ಯಶೋದಾ ಆಚಾರ್ಯ ಅವರ 16 ಗೋವುಗಳನ್ನು ಒಂದೂವರೆ ವರ್ಷದ ಅಂತರದಲ್ಲಿ ಕದ್ದೊಯ್ದ ಘಟನೆಯ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು. ಈ ವರದಿ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದು, ಮಹಿಳೆಗೆ ಸಾಂತ್ವನ ಹೇಳಿದ್ದಾರೆ.
4. ಸಾಮೂಹಿಕ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ !
ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನಲ್ಲಿ ಭದ್ರಾ ಬಫರ್ ಝೋನ್ ಜಾರಿ ವಿರೋಧಿಸಿ ರೈತರು ಸಾಮೂಹಿಕ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರಗಳನ್ನು ಬರೆದಿದ್ದಾರೆ. ಭದ್ರಾ ಬಫರ್ ಝೋನ್ ಜಾರಿಗೆ ವಿರೋಧ ಹೆಚ್ಚಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಸ್ಥಳೀಯರ ಆಕ್ರೋಶ ಹೊರ ಹಾಕಲಾಗಿದೆ.
5. ಜಲವಿವಾದ ಹುಡುಗಾಟದ ವಿಚಾರವಲ್ಲ: ಎಂ.ಬಿ. ಪಾಟೀಲ್
ಮೇಕೆದಾಟು ಪಾದಯಾತ್ರೆ ವಿಚಾರದಲ್ಲಿ ಆಡಳಿತಾತ್ಮಕ ಒಪ್ಪಿಗೆ ನೀಡಿದ ಕುರಿತು ಬುಧವಾರ ಎಂ.ಬಿ. ಪಾಟೀಲ್ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಪ್ರಧಾನಿಯವರನ್ನು ಭೇಟಿ ಮಾಡಿದ್ದೆವು ಎಂದರು.
6. ದ್ವೇಷ ಭಾಷಣ ಕಾರ್ಯಕ್ರಮದಲ್ಲಿ ಭಾಗಿಯಾಗುವವರನ್ನು ಬಂಧಿಸಬೇಕು
ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯಗಳಲ್ಲಿ ದ್ವೇಷ ಭಾಷಣ ಮಾಡುವವರನ್ನು ವಶಕ್ಕೆ ತೆಗೆದುಕೊಳ್ಳಬೇಕು ಅಥವಾ ಬಂಧಿಸಬೇಕು ಎಂದು ಹಿರಿಯ ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಸುಪ್ರೀಂಕೋರ್ಟ್ ಗೆ ಇಂದು ಮನವಿ ಮಾಡಿದ್ದಾರೆ.
7. ‘ಮಿಷನ್ ಮಜ್ನು’ ಒಂದು ವಿಭಿನ್ನ ಪ್ರಯೋಗ: ರಶ್ಮಿಕಾ ಮಂದಣ್ಣ
ಕನ್ನಡತಿ , ನಟಿ ರಶ್ಮಿಕಾ ಮಂದಣ್ಣ ಅವರು “ಪುಷ್ಪಾ: ದಿ ರೈಸ್” ಚಿತ್ರಕ್ಕೆ ದೇಶಾದ್ಯಂತ ಪ್ರೇಕ್ಷಕರಿಂದ ದೊರಕಿರುವ ಪ್ರತಿಕ್ರಿಯೆಗೆ ಫುಲ್ ಖುಷ್ ಆಗಿದ್ದಾರೆ. ಅವರ ಮುಂಬರುವ ಹಿಂದಿ ಚಿತ್ರಗಳಾದ “ಮಿಷನ್ ಮಜ್ನು” ಮತ್ತು “ಗುಡ್ಬೈ” ಅನ್ನು ಜನರು ಸ್ವಾಗತಿಸುತ್ತಾರೆ ಎಂದು ಭಾರಿ ನಿರೀಕ್ಷೆ ಇರಿಸಿದ್ದಾರೆ.
8. ಎಲ್ಲಾ ಮಾದರಿಯ ಕ್ರಿಕೆಟ್ಗೆ ಕ್ರಿಸ್ ಮಾರಿಸ್ ಕ್ರಿಕೆಟ್ ವಿದಾಯ
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಅನುಭವಿ ಆಲ್ರೌಂಡರ್ ಕ್ರಿಸ್ ಮಾರಿಸ್ ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. “ನಾನು ಎಲ್ಲ ಮಾದರಿಯ ಕ್ರಿಕೆಟ್ನಿಂದ ಹಿಂದೆ ಸರಿಯುತ್ತಿದ್ದೇನೆ. ಈ ಪಯಣದಲ್ಲಿ ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಎಂದು ಮಾರಿಸ್ ತಿಳಿಸಿದ್ದಾರೆ.