ಶೀನಾ ಬೋರಾ ಜೀವಂತವಾಗಿದ್ದಾಳೆ… ಸಿಬಿಐ ಗೆ ಇಂದ್ರಾಣಿ ಮುಖರ್ಜಿ ಪತ್ರ
Team Udayavani, Dec 16, 2021, 5:46 PM IST
1. ಭಾರತೀಯ ಹೆಣ್ಣು ಮಕ್ಕಳ ವಿವಾಹದ ವಯಸ್ಸು ಏರಿಕೆ..!
ಭಾರತೀಯ ಹೆಣ್ಣು ಮಕ್ಕಳ ವಿವಾಹ ವಯಸ್ಸಿನ ಮಿತಿಯನ್ನು 18 ವರ್ಷದಿಂದ 21 ವರ್ಷಕ್ಕೆ ಏರಿಕೆ ಮಾಡುವ ಪ್ರಸ್ತಾಪ ಅಂಗೀಕಾರಗೊಂಡಿದೆ. ಈ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅಂಕಿತ ಹಾಕಿರುವುದಾಗಿ ಮೂಲಗಳು ತಿಳಿಸಿವೆ.
2. ಮಂಗಳೂರು – ಮಹಿಳೆಯ ಒಳ ಉಡುಪಿನಲ್ಲಿ ಚಿನ್ನ!
ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಮಹಿಳಾ ಪ್ರಯಾಣಿಕರೊಬ್ಬರಿಂದ 36,43,270 ರೂ ಮೌಲ್ಯದ 739 ಗ್ರಾಂ ಚಿನ್ನವನ್ನು, ಗುರುವಾರ ವಶ ಪಡಿಸಿಕೊಂಡಿದ್ದಾರೆ.
3. ಸುವರ್ಣ ವಿಧಾನಸೌಧದೆದುರು ಹೈಡ್ರಾಮಾ
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸುವರ್ಣ ವಿಧಾನ ಸೌಧಕ್ಕೆ ಗುರುವಾರ ಬೆಳಗ್ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನ ಹಲವು ಶಾಸಕರನ್ನು ಪೊಲೀಸರು ತಡೆದ್ದಾರೆ.
4. ಮದುವೆ ಮೆರವಣಿಗೆಯಲ್ಲಿ ಕುದುರೆ ಗಾಡಿಗೆ ಬೆಂಕಿ
ಗುಜರಾತ್ ನ ಪಂಚಮಹಲ್ ಜಿಲ್ಲೆಯಲ್ಲಿ ಶುಭ ಕಾರ್ಯದ ವೇಳೆ ದೊಡ್ಡ ಅಶುಭವೊಂದು ನಡೆದಿದೆ. ಮದುವೆಗೆ ಮದುಮಗನನ್ನು ಕರೆತರುತ್ತಿದ್ದ ಕುದುರೆ ಗಾಡಿಗೆ ಬೆಂಕಿ ಹತ್ತಿಕೊಂಡು ಮದುಮಗ ಹಾಗೂ ಸಂಬಂಧಿಕರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.
5. ಶೀನಾ ಬೋರಾ ಜೀವಂತವಾಗಿದ್ದಾಳೆ; ಇಂದ್ರಾಣಿ ಮುಖರ್ಜಿ
ದೇಶಾದ್ಯಂತ ಸಂಚಲನ ಮೂಡಿಸಿದ ಶೀನಾ ಬೋರಾಳ ಹತ್ಯೆ ಪ್ರಕರಣ ದೊಡ್ಡ ತಿರುವೊಂದನ್ನು ಪಡೆದಿದೆ. ಇಂದ್ರಾಣಿ ಮುಖರ್ಜಿ 2012ರಲ್ಲಿ ತನ್ನ ಮಗಳು ಶೀನಾ ಬೋರಾಳನ್ನು ಹತ್ಯೆಗೈದ ಆರೋಪ ಹೊತ್ತಿದ್ದಾರೆ. ಆದರೆ ಈಗ ಈಕೆ ಸಿಬಿಐಗೆ ಪತ್ರ ಬರೆದಿದ್ದು, ಈ ಪತ್ರದಲ್ಲಿ ಮಗಳು ಬದುಕಿರುವ ಬಗ್ಗೆ ಸಿಬಿಐಗೆ ತನಿಖೆ ನಡೆಸುವಂತೆ ಕೋರಿದ್ದಾರೆ.
6. ತಮಿಳುನಾಡು,ತೆಲಂಗಾಣದಲ್ಲಿ ಮೊದಲ ಪ್ರಕರಣ ಪತ್ತೆ
ಕೋವಿಡ್ 19 ನೂತನ ರೂಪಾಂತರ ತಳಿ ಒಮಿಕ್ರಾನ್ ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮಬಂಗಾಳದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಭಾರತದಲ್ಲಿನ ಒಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 73ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
7. ಡಿ.17 ಅದಿತಿ ಪ್ರಭುದೇವರ ‘ಆನ’ ರಿಲೀಸ್
ಸಿನಿಮಾ ಮೇಲೆ ಸಿನಿಮಾ ಒಪ್ಪಿಕೊಳ್ಳುತ್ತಾ, ಸದಾ ಬಿಝಿಯಾಗಿರುವ ಅದಿತಿ ನಟನೆಯ ಸಿನಿಮಾವೊಂದು ಈ ವಾರ ತೆರೆಕಾಣುತ್ತಿದೆ. ಅದುವೇ “ಆನ’.ಈ ಚಿತ್ರದ ವಿಶೇಷವೆಂದರೆ ಇದು ನಾಯಕಿ ಪ್ರಧಾನ ಚಿತ್ರವಾಗಿದ್ದು, ಇದೇ 17ರಂದು ಚಿತ್ರ ತೆರೆಗೆ ಬರಲಿದೆ.
8. ಕೊಹ್ಲಿಯ ಆ ಒಂದು ಹೇಳಿಕೆಯೇ ಇಷ್ಟೆಲ್ಲಾ ಮನಸ್ಥಾಪಕ್ಕೆ ಕಾರಣ!
ವಿರಾಟ್ ಕೊಹ್ಲಿಯ, ನಾಯಕತ್ವ ಬದಲಾವಣೆ ಕುರಿತಂತೆ ಟಿ20 ನಾಯಕತ್ವ ಬಗ್ಗೆ ಹಲವು ಬೆಳವಣಿಗೆಗಳು ನಡೆಯುತ್ತಿದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಟಿ 20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಕೊಹ್ಲಿ ನೀಡಿದ ಹೇಳಿಕೆಯೇ ಇದಕ್ಕೆಲ್ಲಾ ಕಾರಣ ಎಂದು ಮಾಜಿ ಆಟಗಾರ ಸುನೀಲ್ ಗಾವಸ್ಕರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.