ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು
Team Udayavani, Jan 17, 2022, 7:13 PM IST
1. ಪಂಜಾಬ್ ಚುನಾವಣೆ: ಮತದಾನ ದಿನಾಂಕ ಒಂದು ವಾರಗಳ ಕಾಲ ಮುಂದೂಡಿಕೆ
ಪಂಜಾಬ್ ವಿಧಾನಸಭೆ ಚುನಾವಣೆಗೆ ನಿಗದಿಯಾಗಿದ್ದ ಮತದಾನ ದಿನಾಂಕವನ್ನು ಒಂದು ವಾರಗಳ ಕಾಲ ಮುಂದೂಡಿ ಕೇಂದ್ರ ಚುನಾವಣಾ ಆಯೋಗ ಹೊಸ ಆದೇಶ ಪ್ರಕಟಿಸಿದೆ. ಗುರು ರವಿದಾಸ್ ಜಯಂತಿ ಹಿನ್ನೆಲೆಯಲ್ಲಿ, ಹಲವು ರಾಜಕೀಯ ಪಕ್ಷಗಳ ಮನವಿ ಮೇರೆಗೆ ಆಯೋಗ ಈ ನಿರ್ಧಾರ ತೆಗೆದುಕೊಂಡಿದ್ದು, ಮತದಾನದ ದಿನಾಂಕವನ್ನು16 ರಿಂದ ಫೆ.20 ಕ್ಕೆ ಮುಂದೂಡಲಾಗಿದೆ.
2. ಅಬುಧಾಬಿಯಲ್ಲಿ ಡ್ರೋನ್ ದಾಳಿ: ಇಬ್ಬರು ಭಾರತೀಯರು ಸೇರಿ ಮೂವರು ಸಾವು
ಅಬುಧಾಬಿಯಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಯೆಮೆನ್ ನ ಇರಾನ್-ಹೌತಿ ಬಂಡುಕೋರ ಗುಂಪು ಡ್ರೋನ್ ಮೂಲಕ ಇಂಧನ ಟ್ಯಾಂಕರ್ ಗಳ ಮೇಲೆ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಇಬ್ಬರು ಭಾರತೀಯರು ಮತ್ತು ಓರ್ವ ಪಾಕಿಸ್ಥಾನಿ ಪ್ರಜೆ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
3. ನಾಯಕರ ವಿರುದ್ಧ ಕೇಸ್: ಕಾನೂನು ಹೋರಾಟಕ್ಕೆ ಸಿದ್ಧವಾದ ಕೆಪಿಸಿಸಿ
ಮೇಕೆದಾಟು ಪಾದಯಾತ್ರೆ ಉದ್ಘಾಟನೆ ಹಾಗೂ ನಡಿಗೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಬಂಧ ಕಾನೂನು ಹೋರಾಟ ನಡೆಸುವುದಕ್ಕೆ ಐವರು ಕಾನೂನು ತಜ್ಞರ ಸಮಿತಿಯನ್ನು ಕೆಪಿಸಿಸಿ ರಚನೆ ಮಾಡಿದೆ.
4. ಡಿಕೆಶಿ ಅವರೇ ಆರೋಗ್ಯ ಹೇಗಿದೆ ? ಬಿಜೆಪಿ ವ್ಯಂಗ್ಯ
ಡಿಕೆಶಿ ಅವರೇ ನಿಮ್ಮ ಆರೋಗ್ಯ ಹೇಗಿದೆ? ನಿಮ್ಮ ಜತೆ ಹೆಜ್ಜೆ ಹಾಕಿದವರಿಗೆಲ್ಲ ಕೋವಿಡ್ ದೃಢಪಟ್ಟಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಶಿವಕುಮಾರ್ ಅವರನ್ನು ಕೋವಿಡ್ ಸೂಪರ್ ಸ್ಪ್ರೆಡರ್ ಎಂದು ಆರೋಪಿಸಿದೆ.
5. ಮೋದಿಯವರೆ ದ್ವೇಷದ ರಾಯಭಾರಿಯಾಗಬೇಡಿ,ಪ್ರೀತಿಸಂದೇಶ ಸಾರುವ ಪಾರಿವಾಳವಾಗಿ: ದಿನೇಶ್ ಗುಂಡೂರಾವ್
ಗಣರಾಜ್ಯೋತ್ಸವ ಪೆರೆಡ್ನಲ್ಲಿ ಕೇರಳ ರಾಜ್ಯ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ನೇತಾಜಿ ಅವರ ಸ್ತಬ್ಧಚಿತ್ರಗಳನ್ನು ತಿರಸ್ಕರಿಸಿದ ಕೇಂದ್ರದ ನಡೆ ಅತ್ಯಂತ ಅಸಹ್ಯಕಾರಿ. ಕೇವಲ ರಾಜಕೀಯ ಕಾರಣಕ್ಕಾಗಿ ದೇಶಕ್ಕಾಗಿ ಹುತಾತ್ಮರಾದ ನೇತಾಜಿಯವರನ್ನು ಅವಮಾನಿಸಿದ್ದು ಖಂಡನೀಯ. ಮೋದಿಯವರೆ, ನೀವು ಪ್ರಧಾನಿಯಾಗಿ ದ್ವೇಷದ ರಾಯಭಾರಿ ಆಗಬೇಡಿ, ಪ್ರೀತಿಯ ಸಂದೇಶ ಸಾರುವ ಪಾರಿವಾಳವಾಗಿ ಎಂದು ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿದ್ದಾರೆ.
6. ಇಳಿಮುಖದತ್ತ ಸೋಂಕು: ದೇಶದಲ್ಲಿ 2.59 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,58,089 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. 385 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಒಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, ಇಲ್ಲಿಯವರೆಗೆ 8,209 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ವರದಿ ಮಾಡಿದೆ. ರವಿವಾರದ 2.71 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿತ್ತು.
7..ಜ.26ರಂದು ಅಲ್ಲು ಅರ್ಜುನ್ ರ ‘ಅಲಾ ವೈಕುಂಠಪುರಮುಲೂ’ ಹಿಂದಿ ಆವೃತ್ತಿ ಬಿಡುಗಡೆ
ಅಲ್ಲು ಅರ್ಜುನ್, ಪೂಜಾ ಹೆಗ್ಡೆ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ಅಲಾ ವೈಕುಂಠ ಪುರಮುಲೂ’ಚಿತ್ರದ ಹಿಂದಿ ಆವೃತ್ತಿ ಜನವರಿ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ‘ಪುಷ್ಪ’ ಚಿತ್ರದ ಯಶಸ್ಸಿನ ಲಾಭ ಪಡೆಯಲು, ‘ಅಲಾ ವೈಕುಂಠಪುರಮುಲು’ ನಿರ್ಮಾಪಕರು ಚಿತ್ರವನ್ನು ಹಿಂದಿಗೆ ಡಬ್ ಮಾಡಲು ನಿರ್ಧರಿಸಿದ್ದಾರೆ. ಅಲ್ಲು ಅರ್ಜುನ್ ಅವರ ಸೂಪರ್ಹಿಟ್ ಚಿತ್ರದ ಹಿಂದಿ ಆವೃತ್ತಿಯು ಜನವರಿ 26 ರಂದು ಭಾರತದಲ್ಲಿ ತೆರೆ ಕಾಣಲಿದೆ.
8.ರಣಜಿ ಆಟಗಾರನಿಗೆ 40 ಲಕ್ಷ ರೂ. ಆಫರ್
ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಂನಲ್ಲಿ ತಮಿಳುನಾಡಿನ ರಣಜಿ ಕ್ರಿಕೆಟ್ ಆಟಗಾರ ಸತೀಶ್ ರಾಜ ಗೋಪಾಲ್ ಅವರಿಗೆ ಸ್ಪಾಟ್ ಫಿಕ್ಸಿಂಗ್ಗೆ 40 ಲಕ್ಷ ರೂ. ಆಮಿಷವೊಡ್ಡಿದ್ದ ಸಂಬಂಧ ಬೆಂಗಳೂರಿನ ಬನ್ನಿ ಆನಂದ್ ಎಂಬಾತನ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬೆನ್ಸನ್ಟೌನ್ ನಿವಾಸಿ ಲೋಕೇಶ್ ಎಂಬುವವರು ನೀಡಿದ ದೂರಿನಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿ, ಶೋಧ ನಡೆಸುತ್ತಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫಡ್ನವೀಸ್
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್ಬಿಐ
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ