ಭಾರತ – ಪಾಕ್ ಟಿ20 ವಿಶ್ವಕಪ್ ಪಂದ್ಯ ರದ್ದಾಗದು
Team Udayavani, Oct 20, 2021, 5:58 PM IST
ತಾಲಿಬಾನ್ ಉಗ್ರರ ರಣಕೇಕೆ
ತಾಲಿಬಾನ್ ಉಗ್ರರ ರಣಕೇಕೆ ಮುಂದುವರಿದಿದ್ದು, ಅಫ್ಘಾನಿಸ್ತಾನದ ಜ್ಯೂನಿಯರ್ ಮಹಿಳಾ ರಾಷ್ಟ್ರೀಯ ವಾಲಿಬಾಲ್ ತಂಡದ ಸದಸ್ಯೆಯ ಶಿರಚ್ಛೇದ ಮಾಡಿರುವ ಘಟನೆ ನಡೆದಿರುವುದಾಗಿ ಮೂಲಗಳು ತಿಳಿಸಿವೆ.
ಶೋಪಿಯಾನ್ ನಲ್ಲಿ ಸೇನಾಕಾರ್ಯಾಚರಣೆ
ಜಮ್ಮು- ಕಾಶ್ಮೀರದ ದ್ರಾಗಡ್ ಪ್ರದೇಶದಲ್ಲಿ ಉಗ್ರರ ಇರುವಿಕೆಯ ಮಾಹಿತಿಯ ಮೇಲೆ ಸೇನಾಪಡೆಗಳು ಕಾರ್ಯಾಚರಣೆಗೆ ಇಳಿದಿದ್ದು, ಇಂದು ಬೆಳಗ್ಗೆ ನಡೆಸಿದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ತಿಳಿದುಬಂದಿದೆ.
ಕಾಶ್ಮೀರದಲ್ಲಿ ಯೋಧರ ಹತ್ಯೆ;ಪಾಕ್ ಜತೆ ಟಿ-20 ಕ್ರಿಕೆಟ್ ಪಂದ್ಯವಾಡ್ತೀರಾ?
ಪಾಕಿಸ್ತಾನವು ಕಾಶ್ಮೀರದಲ್ಲಿ ಪ್ರತಿದಿನ ಟಿ 20 ಆಟವಾಡುತ್ತಿದ್ದು, ದೇಶದ ಜನರ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ ಎಂದು AIMIM ಎಐಎಂಐಎಂ ಮುಖ್ಯಸ್ಥ ಒವೈಸಿ ಹೇಳಿದ್ದು, ಒಂಬತ್ತು ಮಂದಿ ನಮ್ಮ ಯೋಧರು ಜಮ್ಮು-ಕಾಶ್ಮೀರದಲ್ಲಿ ಹುತಾತ್ಮರಾಗಿದ್ದಾರೆ. ಆದರೂ ಅಕ್ಟೋಬರ್ 24ರಂದು ಪಾಕಿಸ್ತಾನದ ಜತೆ ಟಿ-20 ಕ್ರಿಕೆಟ್ ಪಂದ್ಯ ಆಡುತ್ತೀರಾ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ರಾಜಕಾರಣಿಗಳಷ್ಟು ನಿರ್ಲಜ್ಜ, ನೀಚರು ಯಾರೂ ಇಲ್ಲ
‘ರಾಜಕಾರಣಿಗಳಷ್ಟು ನಿರ್ಲಜ್ಜ, ನೀಚರು ಯಾರೂ ಇಲ್ಲ. ರಾಜಕಾರಣಿಗಳ ಬದಲಾಗಿ ಹಿಂದೂ ಸಂಘಟನೆಗಳಿಗೆ ಬಲ ತುಂಬಿ’ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.
ಆರ್ ಎಸ್ಎಸ್ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಒಬ್ಬ ಬುದ್ಧಿಮಾಂದ್ಯ
ಆರ್ ಎಸ್ಎಸ್ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಬುದ್ಧಿಮಾಂದ್ಯರಾಗಿದ್ದಾರೆ. ಆರ್ ಎಸ್ಎಸ್ ಅಂದರೆ ದೇಶ ಪ್ರೇಮ ಹಾಗೂ ದೇಶ ಭಕ್ತಿ ಕಲಿಸೋ ಆರ್ಗನೈಸೇಷನ್ ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿಕೆ ನೀಡಿದ್ದಾರೆ.
ದಿಟ್ಟ ನಿಲುವಿಗೆ ಇಂದಿರಾ ಗಾಂಧಿಯವರನ್ನೂ ಹೊಗಳಿದ್ದೆವು
’ನಾವು ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರಿಗೆ ಹಗುರವಾಗಿವಾಗಿ ಇದುವರೆಗೂ ಟೀಕೆ ಮಾಡಿಲ್ಲ.ಪಾಕಿಸ್ತಾನದ ವಿರುದ್ಧ ತೆಗೆದುಕೊಂಡಿದ್ದ ದಿಟ್ಟ ನಿಲುವಿಗೆ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಹೊಗಳಿದ್ದೆವು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಆರ್ಯನ್ ಖಾನ್ ಗೆ ಜೈಲೇ ಗತಿ
ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಆರ್ಯನ್ ಖಾನ್ ಮತ್ತು ಗೆಳೆಯರನ್ನು ಅಕ್ಟೋಬರ್ 3 ರಂದು ಎನ್ ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದೀಗ ಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿರುವ ಹಿನ್ನಲೆಯಲ್ಲಿ ಆರ್ಯನ್ ಖಾನ್ ಜೈಲುವಾಸ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಭಾರತ-ಪಾಕ್ ಟಿ20 ವಿಶ್ವಕಪ್ ಪಂದ್ಯ ರದ್ದಾಗದು
ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಪಾಕಿಸ್ಥಾನ ಪ್ರೇರಿತ ಉಗ್ರರು ಮುಗ್ಧ ನಾಗರಿಕರ ಹತ್ಯೆಯಲ್ಲಿ ತೊಡಗಿರುವುದರಿಂದ ಭಾರತ-ಪಾಕಿಸ್ಥಾನ ನಡುವಿನ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ರದ್ದುಗೊಳಿಸಬೇಕು, ಭಾರತ ತಂಡ ಯಾವುದೇ ಕಾರಣಕ್ಕೂ ಪಾಕಿಸ್ಥಾನ ವಿರುದ್ಧ ಆಡಬಾರದು ಎಂಬ ಕೂಗು ಕೇಳಿಬರುತ್ತಿದೆ. ಆದರೆ ಈ ಪಂದ್ಯ ರದ್ದಾಗದು ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ