ಬಸ್ ಗೆ ಬೆಂಕಿ :12 ಮಕ್ಕಳು ಸೇರಿ ನಿದ್ದೆಯ ಮಂಪರಿನಲ್ಲಿದ್ದ 45 ಪ್ರವಾಸಿಗರು ಸಜೀವ ದಹನ
Team Udayavani, Nov 23, 2021, 7:34 PM IST
- ಅಗ್ನಿಶಾಮಕದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸುವ ಅಗ್ನಿ ಅವಘಡ ನಿರ್ವಹಿಸಲು ಹೊಸ ತಂತ್ರಜ್ಷಾನ ಅಳವಡಿಸಲಾಗಿದೆ. ಇದೇ ಮೊದಲ ಬಾರಿಗೆ ರೋಸೆನ್ಬೌರ್ ಪೈರ್ಪೈಂಟಿಂಗ್ ಸಿಮ್ಯುಲೇಟರ್ ಅನ್ನು ಪರಿಚಯಿಸಲಾಗಿದೆ. ಈ ಮಾಹಿತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಯರಾಜ್ ಷಣ್ಮುಗಂ ತಿಳಿಸಿದ್ದಾರೆ.
- 18 ಹಳ್ಳಿಗಳ ಜನರ ಸ್ಥಳಾಂತರ: ತಿರುಪತಿಗೆ ಸಂಪರ್ಕ ಕಡಿತ
ಇತ್ತೀಚೆಗೆ ಸುರಿದ ಮಳೆಯಿಂದಾಗಿ ವಿವಿಧ ಮಾರ್ಗಗಳಿಂದ ತಿರುಪತಿಯನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳು ಮತ್ತು ರಸ್ತೆಗಳು ಹಾಳಾಗಿವೆ. ತಿರುಪತಿಯನ್ನು ಸಂಪರ್ಕಿಸುವ ರೈಲು ಸಂಚಾರವನ್ನೂ ಸ್ಥಗಿತಗೊಳಿಸಲಾಗಿದ್ದು ತಿರುಪತಿಗೆ ದೇವಾಲಯಕ್ಕೆ ಸಂಪರ್ಕವೇ ತಪ್ಪಿಹೋಗಿದೆ.
- ಮುಂಬಯಿ ದಾಳಿ: ಕಾಂಗ್ರೆಸ್ ಸಂಯಮ ತೋರಿಸಿದ್ದೇಕೆ? ತಿವಾರಿ ವಿವಾದ
ಇತ್ತೀಚೆಗಷ್ಟೇ ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್ ಅವರು ತಮ್ಮ ಅಯೋಧ್ಯೆ ಪುಸ್ತಕದಲ್ಲಿ ಹಿಂದುತ್ವವನ್ನು ಮುಸ್ಲಿಂ ಮೂಲಭೂತವಾದಿ ಸಂಘಟನೆಯ ಜತೆ ಹೋಲಿಕೆ ಮಾಡುವ ಮೂಲಕ ವಿವಾದ ಹುಟ್ಟು ಹಾಕಿದ್ದರು. ಏತನ್ಮಧ್ಯೆ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರ ನೂತನ ಪುಸ್ತಕದಲ್ಲಿ ಮುಂಬಯಿ ದಾಳಿಯ ನಂತರ ಯುಪಿಎ-1 ಸರ್ಕಾರದ ನಿಷ್ಕ್ರಿಯತೆ ಬಗ್ಗೆ ಪ್ರಶ್ನಿಸಿರುವುದು ಹೊಸ ಚರ್ಚೆಗೆ ನಾಂದಿ ಹಾಡಿದೆ.
- ಬಸ್ ಗೆ ಬೆಂಕಿ: ಸಜೀವ ದಹನ
ಪಶ್ಚಿಮ ಬಲ್ಗೇರಿಯಾದ ಹೆದ್ದಾರಿಯೊಂದರಲ್ಲಿ ಮಂಗಳವಾರ ಬೆಳಗಿನ ಜಾವ ಭೀಕರ ಅವಘಡ ನಡೆದಿದೆ. ಉತ್ತರ ಮೆಸಿಡೋನಿಯನ್ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಬೆಂಕಿಗೆ ಆಹುತಿಯಾಗಿದೆ. 12 ಮಕ್ಕಳು ಸೇರಿದಂತೆ ಕನಿಷ್ಠ 45 ಜನರು ಸಾವನ್ನಪಿರುವ ಬಗ್ಗೆ ವರದಿಯಾಗಿದೆ.
- ಮಧ್ಯಪ್ರದೇಶದಲ್ಲಿ ತಾಜ್ಮಹಲ್ ಮಾದರಿ ಮನೆ
ಆಗ್ರಾದಲ್ಲಿರುವ ತಾಜ್ಮಹಲ್ ಪ್ರೇಮಸೌಧ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ, ಮಧ್ಯಪ್ರದೇಶದ ಬುರ್ಹಾನ್ಪುರ ಎಂಬಲ್ಲಿನ ನಿವಾಸಿ ಆನಂದ್ ಪ್ರಕಾಶ್ ಚೌಸ್ಕೇ ಈ ಮಾದರಿಯ ಮನೆ ನಿರ್ವಿಸಿದ್ದಾರೆ. ತಮ್ಮ ಪತ್ನಿಗೆ ಈ ಮನೆ ನಿರ್ಮಿಸಿ ಉಡುಗೊರೆಯಾಗಿ ನೀಡಿದ್ದಾರೆ.
- ಏರ್ ಟೆಲ್ ಬಳಿಕ ವೋಡಾಫೋನ್ ಪ್ರಿಪೇಯ್ಡ್ ಪ್ಲ್ಯಾನ್ ಬೆಲೆ ಏರಿಕೆ
ಪ್ರಿಪೇಯ್ಡ್ ಪ್ಲ್ಯಾನ್ ಗಳ ಬೆಲೆ ಹೆಚ್ಚಳ ಮಾಡುವ ಮೂಲಕ ಏರ್ ಟೆಲ್ ಗ್ರಾಹಕರಿಗೆ ಶಾಕ್ ನೀಡಿದೆ. ಈ ಬೆನ್ನಲ್ಲೇ ವೋಡಾಫೋನ್ ಐಡಿಯಾ ಕೂಡಾ ಪ್ರಿಪೇಯ್ಡ್ ಟಾರಿಫ್ ನಲ್ಲಿ ಶೇ.25ರಷ್ಟು ಬೆಲೆ ಹೆಚ್ಚಳ ಮಾಡುವುದಾಗಿ ಮಂಗಳವಾರ ಘೋಷಿಸಿದೆ.
- ಹೊಸ ಅವತಾರದಲ್ಲಿ ಶರಣ್ ಅಖಾಡಕ್ಕೆ
ನಟ ಶರಣ್ ಅಭಿನಯದ ಹೊಸ ಚಿತ್ರವೊಂದು ಬಿಡುಗಡೆಗೆ ರೆಡಿಯಾಗಿದೆ. 2019ರಲ್ಲಿ “ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರ ಬಿಡುಗಡೆ ಯಾದ ನಂತರ ಶರಣ್ ಅವರ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಈಗ “ಅವತಾರ್ ಪುರುಷ’ ಬಿಡುಗಡೆಗೆ ಬಂದಿದೆ.
- ಕೊಹ್ಲಿ ಪೋಸ್ಟ್ ಗೆ ‘ಹೆಲ್ಲೋ ಬಿಲ್ಲಿ’ ಎಂದು ಕಾಮೆಂಟ್ ಮಾಡಿದ ಅನುಷ್ಕಾ
ಭಾರತೀಯ ಕ್ರಿಕೆಟ್ ತಂಡದ ನಾಯಕ ಮುದ್ದಾದ ಬೆಕ್ಕನ್ನು ಹಿಡಿದು ಮುದ್ದಾಡಿದ್ದಾರೆ. ಅದರೊಂದಿಗೆ ಕಳೆದ ಅನುಭವವನ್ನು ಇಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಕೇವಲ ಒಂದು ಗಂಟೆಯ ಒಳಗೆ 1.2 ಮಿಲಿಯನ್ಗಿಂತಲೂ ಹೆಚ್ಚು ಲೈಕ್ ಗಳನ್ನು ಪಡೆದಿದೆ. ಕೊಹ್ಲಿ ಈ ಪೋಸ್ಟ್ ಗೆ ‘ಹೆಲ್ಲೋ ಬಿಲ್ಲಿ’ ಎಂದು ಅನುಷ್ಕಾ ಶರ್ಮಾ ಕೂಡ ಕಾಮೆಂಟ್ ಮಾಡಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ