ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ಯತ್ನಾಳ್
Team Udayavani, Jan 24, 2022, 6:00 PM IST
1. ನನ್ನನ್ನ ಸಂಪುಟದಿಂದ ಕೈಬಿಟ್ರೂ ಪಕ್ಷದ ಪರ ಕೆಲಸ ಮಾಡುತ್ತೇನೆ: ಸಚಿವ ಬೈರತಿ ಬಸವರಾಜ್ ಸಂಪುಟ ವಿಸ್ತರಣೆ ವಿಚಾರದಲ್ಲಿ ಸಿಎಂ ಪರಮಾಧಿಕಾರ ಹೊಂದಿದ್ದು, ಅವರು ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳಬಹುದು, ನನ್ನನ್ನ ಕೈಬಿಟ್ಟರೂ ಪಕ್ಷದ ಕೆಲಸ ಮಾಡುತ್ತೇನೆ ಎಂದು ಸಚಿವ ಬೈರತಿ ಬಸವರಾಜ್ ಸೋಮವಾರ ಹೇಳಿಕೆ ನೀಡಿದ್ದಾರೆ. 2. ಭ್ರೂಣ ಪತ್ತೆ ಮಾಡುವವರ ವಿರುದ್ಧ ಕಠಿಣ ಕ್ರಮ: ಸಚಿವ ಡಾ.ಕೆ.ಸುಧಾಕರ್ ವಾರ್ನಿಂಗ್ ಭ್ರೂಣ ಪತ್ತೆಗೆ ರಾಜ್ಯದಲ್ಲಿ ಅವಕಾಶವಿಲ್ಲ, ಭ್ರೂಣ ಪತ್ತೆ ಮಾಡುವ ತಜ್ಞರು, ತಾಂತ್ರಿಕ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಪರವಾನಗಿಯನ್ನು ರದ್ದು ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ. 3. ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಶವವಾಗಿ ಪತ್ತೆ ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕಾಶ್ ಟ್ರಾವೆಲ್ಸ್ ನ ಮಾಲೀಕ ಪ್ರಕಾಶ್ ಅವರ ಶವವು ಹೊಸನಗರ ತಾಲೂಕಿನ ಪಟಗುಪ್ಪ ಸೇತುವೆ ಸಮೀಪದ ಹೊಳೆಯಲ್ಲಿ ಪತ್ತೆಯಾಗಿದೆ. ಶನಿವಾರದಿಂದ ನಾಪತ್ತೆಯಾಗಿದ್ದ ಪ್ರಕಾಶ್ ಅವರ ಕಾರು ಹಾಗೂ ಅವರ ಚಪ್ಪಲಿಗಳು ಪಟಗುಪ್ಪ ಸೇತುವೆ ಬಳಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಶೋಧ ಕಾರ್ಯ ನಡೆಸಿದ್ದು ಸೋಮವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. 4. ದೇಶ ಶಿವಸೇನೆಯ ಪ್ರಧಾನಿಯನ್ನು ನೋಡುತ್ತಿತ್ತು: ಬಿಜೆಪಿಗೆ ಬಿಟ್ಟು ಕೊಟ್ಟೆವು ಎಂದ ರಾವುತ್ “ನಾವು ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಕೆಳಗಿನಿಂದ ಮೇಲಕ್ಕೆ ಕೊಂಡೊಯ್ದಿದ್ದೇವೆ. ಬಾಬರಿ ಮಸೀದಿ ಪ್ರಕರಣದ ನಂತರ ಉತ್ತರ ಭಾರತದಲ್ಲಿ ಶಿವಸೇನೆಯ ಅಲೆ ಇತ್ತು, ಆ ಸಮಯದಲ್ಲಿ ನಾವು ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ, ದೇಶದಲ್ಲಿ ಶಿವಸೇನೆಯ ಪ್ರಧಾನಿ ಇರುತ್ತಿದ್ದರು ಆದರೆ ನಾವು ಅದನ್ನು ಬಿಜೆಪಿಗೆ ಬಿಟ್ಟುಕೊಟ್ಟೆವು ” ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಸೋಮವಾರ ಹೇಳಿದ್ದಾರೆ. 5.“ಕೇಜ್ರಿವಾಲ್ ಗೆ ಒಂದು ಅವಕಾಶ ಕೊಡಿ”; ಪಂಚರಾಜ್ಯಗಳಲ್ಲಿ ಆಪ್ ಚುನಾವಣಾ ಪ್ರಚಾರಕ್ಕೆ ಚಾಲನೆ ವಿಧಾನಸಭೆ ಚುನಾವಣೆ ನಡೆಯಲಿರುವ ಪಂಚ ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷದ ವರಿಷ್ಠ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ದೆಹಲಿ ಸರ್ಕಾರದ ಉತ್ತಮ ಕೆಲಸದ ವಿಡಿಯೋಗಳನ್ನು ಅಪ್ ಲೋಡ್ ಮಾಡುವಂತೆ ದೆಹಲಿ ನಿವಾಸಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. 6. ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ: ರೇಣು ಭೇಟಿಗೆ ಯತ್ನಾಳ್ ಸಮಜಾಯಿಷಿ ಸಂಪುಟ ಪುನಾರಚನೆ ಶೀಘ್ರವಾಗಿ ಆಗಬೇಕು, ವಾರದೊಳಗೆ ಮಾಡಿದರೆ ಒಳ್ಳೆಯದು ಎಂದು ಬಿಜೆಪಿ ಶಾಸಕ, ಮಾಜಿ ಕೇಂದ್ರ ಸಚಿವ ಬಸವನ ಗೌಡ ಪಾಟೀಲ್ ಯತ್ನಾಳ್ ಬಿಜೆಪಿಗೆ ಸೋಮವಾರ ಮತ್ತೆ ಸವಾಲು ಎಸೆದಿದ್ದಾರೆ. ರೇಣುಕಾಚಾರ್ಯ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ”ನಾನು ಯಡಿಯೂರಪ್ಪ ಮತ್ತು ವಿಜಯೇಂದ್ರರ ವಿರೋಧಿ. ನಾನೇನು ಡಿಕೆಶಿ, ಸಿದ್ದರಾಮಯ್ಯ ಭೇಟಿ ಮಾಡಿಲ್ಲ. ಜಮೀರ್ ಅಹಮದ್ ಭೇಟಿ ಮಾಡಿದ್ದೇನಾ..? ಎಂದು ಪ್ರಶ್ನಿಸಿದ್ದಾರೆ. 7. ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಕಾರ್ತಿಕ್ ಸುಬ್ಬರಾಜ್ ಅವರ ಬಹು ನಿರೀಕ್ಷಿತ ತಮಿಳು ಆಕ್ಷನ್ ಡ್ರಾಮಾ ಹೊಂದಿರುವ ‘ಮಹಾ ಪುರುಷ’ಚಿತ್ರ ಫೆಬ್ರವರಿ 10 ರಂದು ಭಾರತದ ಜನಪ್ರೀಯ ಮನರಂಜನಾ ತಾಣವಾದ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಗೊಳ್ಳಲಿದೆ. ಲಲಿತ್ ಕುಮಾರ್ ನಿರ್ಮಾಣದ ಚಿತ್ರದಲ್ಲಿ ನಿಜ ಜೀವನದ ತಂದೆ ಮಗನ ಜೋಡಿ ವಿಕ್ರಮ್ ಮತ್ತು ಧ್ರುವ ವಿಕ್ರಮ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಬಿ ಸಿಂಹ ಮತ್ತು ಸಿಮ್ರಾನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. 8. ಸ್ಮೃತಿ ಮಂದಾನ ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗರಾಗಿ ಆಯ್ಕೆ ಭಾರತದ ಭರ್ಜರಿ ಓಪನರ್ ಸ್ಮೃತಿ ಮಂದಾನ ಅವರು 2021 ರಲ್ಲಿ ಎಲ್ಲಾ ಮಾದರಿಗಳಲ್ಲಿ ತಮ್ಮ ಅದ್ಭುತ ಫಾರ್ಮ್ಗಾಗಿ ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗ ಎಂದು ಸೋಮವಾರ ಆಯ್ಕೆಯಾಗಿದ್ದಾರೆ.