ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ
Team Udayavani, Nov 27, 2021, 6:02 PM IST
- ಬಿಜೆಪಿಗೆ ಹೆಚ್ ಡಿಕೆ ಟಾಂಗ್
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಬಿಜೆಪಿಗೆ ಬೆಂಬಲ ನೀಡಲಾಗುವುದು ಎಂದು ಎಲ್ಲೂ ನಾನು ಹೇಳಿಲ್ಲ. ಆದರೆ ಬೆಂಬಲ ಕೇಳಿದ ಯಡಿಯೂರಪ್ಪ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನು ಹೇಳಿದ್ದೇನೆ ಎಂದರು.
- ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 30% ಅರಣ್ಯ ನಿರ್ಮಾಣ
ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಶೇಖಡಾ 30ರಷ್ಟು ಅರಣ್ಯ ನಿರ್ಮಾಣ ಮಾಡುವಂತೆ ಅರಣ್ಯ ಸಚಿವ ಉಮೇಶ್ ಕತ್ತಿ ಆದೇಶಿಸಿದ್ದಾರೆ. ಅರಣ್ಯ ಇಲಾಖೆಯ ಸಹಯೋಗದಿಂದ ಗಿಡ ಮರಗಳನ್ನು ಬೆಳೆಸಿ ಎಂದು ಸಚಿವರು ರಾಜ್ಯದ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
- ವಿಮೋಚನಾ ದಿನದಂದು ಪ್ರಧಾನಿ ನರೇಂದ್ರ ಮೋದಿ ಗೋವಾಕ್ಕೆ
ಗೋವಾದ 60 ನೇಯ ವಿಮೋಚನಾ ದಿನದಂದು ಪ್ರಧಾನಿ ನರೇಂದ್ರ ಮೋದಿ ಗೋವಾ ಭೇಟಿ ಬಹುತೇಕ ಖಚಿತವಾಗಿದೆ. ಡಿ.19ಕ್ಕೆ ಪ್ರಧಾನಿ ಅವರ ಗೋವಾ ಭೇಟಿಯ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸುವ ಕುರಿತು ಸರ್ಕಾರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ.
- ಶಬರಿಮಲೆ: ಕೇರಳ ಸರಕಾರದ ವಿಶೇಷ ಆದೇಶ
ಕೇರಳ ಸರ್ಕಾರ ಕೋವಿಡ್ ನಿಯಮಾವಳಿಗಳನ್ನು ಸಡಿಲಗೊಳಿಸಿ ಆದೇಶಿಸಿದೆ. ಇನ್ನು ಮುಂದೆ ಶಬರಿಮಲೆ ಯಾತ್ರೆಯಲ್ಲಿ ಮಕ್ಕಳು ಪಾಲ್ಗೊಳ್ಳಲು ಆರ್ಟಿ-ಪಿಸಿಆರ್ ಪರೀಕ್ಷೆ ಅನಿವಾರ್ಯವಲ್ಲ ಎಂದಿದೆ. ನವೆಂಬರ್ 26 ರಂದು ಈ ಹೊಸ ಆದೇಶ ಕೇರಳ ಸರ್ಕಾರ ಹೊರಡಿಸಿದೆ.
- ಒಮಿಕ್ರಾನ್ ಭೀತಿ..!
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೊರೋನ ಹೊಸ ರೂಪಾಂತರಿ ಸಂಬಂಧ ಪ್ರಧಾನಿಗೆ ವಿಶೇಷ ಮನವಿ ಮಾಡಿದ್ದಾರೆ. ಕೋವಿಡ್ ಹೊಸ ರೂಪಾಂತರದಿಂದ ಪ್ರಭಾವಿತವಾಗಿರುವ ದೇಶಗಳಿಂದ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲು ಒತ್ತಾಯಿಸಿ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
- ತಪ್ಪಿದ ಅವಘಡ..!
ಬೆಂಗಳೂರು-ಪಾಟ್ನಾ ವಿಮಾನ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ಘಟನೆ ಶನಿವಾರ ನಡೆದಿದೆ. 139 ಪ್ರಯಾಣಿಕರೊಂದಿಗೆ ಬೆಂಗಳೂರಿನಿಂದ ಪಾಟ್ನಾಗೆ ವಿಮಾನ ಹೊರಟಿತ್ತು. ಈ ಗೋ ಏರ್ ವಿಮಾನದ ಇಂಜಿನ್ ಒಂದರಲ್ಲಿ ದೋಷ ಕಂಡು ಬಂದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ..
- ‘ಗೋವಿಂದ ಗೋವಿಂದ’ ಮಜಾ ನೀಡೋ ಸಿನಿಮಾ
“ಗೋವಿಂದ ಗೋವಿಂದ’ ಸಿನಿಮಾ ಬೆಳ್ಳಿತೆರೆಯಲ್ಲಿ ಮಿಂಚುತ್ತಿದೆ. ನಾಯಕ ಸುಮಂತ್ ಮತ್ತು ಇತರರ ಮಜವಾದ ಸನ್ನಿವೇಶಗಳ ಮೂಲಕ ಇಡೀ ಸಿನಿಮಾವನ್ನು ಕಟ್ಟಿ ಕೊಡಲಾಗಿದೆ. ಜಾಲಿಯಾಗಿ ಸಾಗುವ ಸಿನಿಮಾದಲ್ಲಿ ಒಂದಷ್ಟು ಟ್ವಿಸ್ಟ್ಗಳು ಬಂದು ಪ್ರೇಕ್ಷಕರನ್ನು ಕುತೂಹಲಕ್ಕೆ ದೂಡುತ್ತದೆ.
- ಏಶ್ಯನ್ ಚಾಂಪಿಯನ್ಸ್ ಹಾಕಿ ಟ್ರೋಫಿ
ಢಾಕಾದಲ್ಲಿ ಮುಂದಿನ ತಿಂಗಳ 14ರಿಂದ 22ರ ತನಕ ಹಾಕಿ ಪಂದ್ಯಾಟ ನಡೆಯಲಿದೆ. “ಹೀರೋ ಏಶ್ಯನ್ ಚಾಂಪಿಯನ್ಸ್ ಟ್ರೋಫಿ’ ಎಂಬ ಹಾಕಿ ಪಂದ್ಯಾವಳಿಯಲ್ಲಿ ಮನ್ಪ್ರೀತ್ ಸಿಂಗ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಹರ್ಮನ್ಪ್ರೀತ್ ಸಿಂಗ್ ಉಪನಾಯಕರಾಗಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!