ಮಂಗಳೂರು : ಕೊರಗಜ್ಜನ ಗುಡಿ ಎದುರು ಕಾಂಡೋಮ್ ಇಟ್ಟು ವಿಕೃತಿ ಮೆರೆದ ಕಿಡಿಗೇಡಿಗಳು
Team Udayavani, Dec 28, 2021, 5:18 PM IST
1. ಬಂದ್ ಕೈಬಿಡಿ: ಸಚಿವ ಸುನಿಲ್ ಕುಮಾರ್
ಕರ್ನಾಟಕ ಬಂದ್ ಮಾಡುವ ಅನಿವಾರ್ಯತೆಯಿಲ್ಲ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ದುರ್ಷ್ಕರ್ಮಿಗಳ ವಿರುದ್ದ ಸರ್ಕಾರ ಕ್ರಮಕೈಗೊಂಡಿದೆ. ನಮ್ಮ ಸಾಹಿತ್ಯ, ಭಾಷೆ, ಸಂಸ್ಕೃತಿ ಬಗ್ಗೆ ಸರ್ಕಾರ ಪ್ರಥಮ ಆದ್ಯತೆ ನೀಡಿದೆ ಎಂದು ಅವರು ತಿಳಿಸಿದರು.
2. ನೈಟ್ ಕರ್ಫ್ಯೂ ವಿರೋಧಿಸುವವರಿಗೆ ಸಚಿವ ಸುಧಾಕರ್ ಎಚ್ಚರಿಕೆ !
ನೈಟ್ ಕರ್ಫ್ಯೂ ವಿರೋಧಿಸುವವರಿಗೆ ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. ಎಲ್ಲಾ ಸಾಧಕ – ಬಾಧಕ ನೋಡಿಯೇ ಸರ್ಕಾರ ನೈಟ್ ಕರ್ಫ್ಯೂ ನಿರ್ಧಾರ ಮಾಡಿದೆ. ಪದೇ ಪದೇ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
3. ಬಿಜೆಪಿಯದ್ದು ಜನವಿರೋಧಿ ಸಿದ್ಧಾಂತ: ಸಿದ್ದರಾಮಯ್ಯ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ತೀವ್ರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷ ವೈಯಕ್ತಿಕವಾದುದಲ್ಲ, ಇದೊಂದು ಸೈದ್ದಾಂತಿಕ ಹೋರಾಟ. ಬಿಜೆಪಿಯದ್ದು ಜನವಿರೋಧಿ ಸಿದ್ದಾಂತ, ಆ ಸಿದ್ದಾಂತವನ್ನು ಅವರು ಪಡೆದಿರುವುದು ಆರ್ ಎಸ್ ಎಸ್ ನಿಂದ ಎಂದಿದ್ದಾರೆ.
4. ಮಕ್ಕಳಿಗೆ ಸದ್ಯಕ್ಕೆ ಕೊವ್ಯಾಕ್ಸಿನ್ ಮಾತ್ರ!
ದೇಶಾದ್ಯಂತ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ವೇದಿಕೆ ಸಜ್ಜುಗೊಂಡಿದೆ. ಅದಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನೂ ಕೇಂದ್ರ ಸರಕಾರ ಸೋಮವಾರ ಬಿಡುಗಡೆ ಮಾಡಿದೆ. ಜ.3ರಿಂದ ಲಸಿಕೆ ವಿತರಣೆ ಆರಂಭವಾಗಲಿದ್ದು, ಸದ್ಯಕ್ಕೆ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ಮಾತ್ರವೇ ನೀಡಲು ಸರ್ಕಾರ ನಿರ್ಧರಿಸಲಾಗಿದೆ.
5. ಪೊದೆಯಲ್ಲಿ ನಗ್ನ ಸ್ಥಿತಿಯಲ್ಲಿ ಗ್ರಾಮ ಮುಖ್ಯಸ್ಥೆಯ ಶವ ಪತ್ತೆ!
ಗ್ರಾಮವೊಂದರ ಮಹಿಳಾ ಸರಪಂಚ್ ನನ್ನು ಕೊಂದು ಆಕೆಯ ಬೆತ್ತಲೆ ದೇಹವನ್ನು ಪೊದೆಗಳಲ್ಲಿ ಎಸೆದ ಘಟನೆ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ. ಮಹಾಡ್ ತಾಲೂಕಿನ ಬೆಳೋಶಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ಬೆಳಕಿಗೆ ಬಂದಿದೆ.
6. ಕೊರಗಜ್ಜನ ಗುಡಿ: ಕಾಂಡೋಮ್ ಇಟ್ಟ ಕಿಡಿಗೇಡಿಗಳು
ಕೊರಗಜ್ಜನ ಗುಡಿಯ ಎದುರು ಉಪಯೋಗಿಸಿದ ಕಾಂಡೋಮ್ ನ್ನು ಇಟ್ಟು ಅಪವಿತ್ರಗೊಳಿಸಿದ ಘಟನೆಯೊಂದು ಇಂದು ಮಂಗಳೂರಿನಲ್ಲಿ ನಡೆದಿದೆ. ಈ ಘಟನೆ ನಗರದ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ನಮಿಕಟ್ಟೆ ಬಳಿ ನಡೆದಿದೆ. ಮಂಗಳವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ.
7. ಕೊಡಗಿನ ಸೊಸೆಯಾಗುತ್ತಿದ್ದಾರೆ ಅದಿತಿ ಪ್ರಭುದೇವ
ಸ್ಯಾಂಡಲ್ ವುಡ್ ನ ಬೆಡಗಿ ದಾವಣಗೆರೆ ಮೂಲದ ಅದಿತಿ ಪ್ರಭುದೇವ ಕೊಡಗಿನ ಸೊಸೆಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಎರಡೂ ಕುಟುಂಬಗಳು ತಾಂಬೂಲ ಬದಲಾಯಿಸಿಕೊಂಡಿದ್ದು, ವಿವಾಹದ ನಿಶ್ಚಿತಾರ್ಥ ನೆರವೇರಿದೆ.
8. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕೋವಿಡ್ ಪಾಸಿಟಿವ್
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಕೋವಿಡ್ 19 ಸೋಂಕು ಪಾಸಿಟಿವ್ ದೃಢವಾಗಿದೆ. ಕೋವಿಡ್ ಲಕ್ಷಣಗಳು ಕಂಡು ಬಂದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೌರವ್ ಗಂಗೂಲಿ ಅವರನ್ನು ಕೋಲ್ಕತ್ತಾದ ವುಡ್ ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
GST: ಪರೀಕ್ಷಾ ಫಾರಂ ಮೇಲೆ ಜಿಎಸ್ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ
JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್ಡಿಎ ಸ್ಪರ್ಧೆ: ಬಿಜೆಪಿ
Hindu Temple: ಸಂಭಲ್ ಬಳಿಕ ಬುಲಂದ್ಶಹರ್ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ