ಭವಿಷ್ಯದ ಅಪಾಯಕಾರಿ ವೈರಸ್ ಬಗ್ಗೆ ವಿಜ್ಞಾನಿಗಳು ವಾರ್ನಿಂಗ್ !
Team Udayavani, Jan 29, 2022, 7:01 PM IST
1. ಶಾಲಾರಂಭಕ್ಕೆ ಗ್ರೀನ್ ಸಿಗ್ನಲ್, ನೈಟ್ ಕರ್ಫ್ಯೂ ರದ್ದು: ಹೊಸ ನಿಯಮ ಪ್ರಕಟಿಸಿದ ರಾಜ್ಯ ಸರ್ಕಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಕಾರಣದಿಂದ ಮುಚ್ಚಿದ ಶಾಲೆಗಳನ್ನು ಇನ್ನು ತೆರೆಯಬಹುದು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಇದರೊಂದಿಗೆ ಜ.31ರ ಬಳಿಕ ನೈಟ್ ಕರ್ಫ್ಯೂವನ್ನು ತೆರವು ಮಾಡಲಾಗಿದೆ. 2.ಏನಿದು ಪ್ರಸವ ನಂತರದ ಖಿನ್ನತೆ? ಯಾವ ವೈದ್ಯರನ್ನು ಸಂಪರ್ಕಿಸಬೇಕು? ಇದಕ್ಕೆ ಚಿಕಿತ್ಸೆ ಏನು? ಪ್ರಸವಾನಂತರದ ಖಿನ್ನತೆಯು ಗಂಭೀರವಾದ ಮಾನಸಿಕ ಆರೋಗ್ಯ ಸ್ಥಿತಿಯಾಗಿದ್ದು, ತಾಯಂದಿರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇದರ ಬಗ್ಗೆ ತುಂಬಾ ವಿರಳವಾಗಿ ಮಾತನಾಡಲಾಗುತ್ತದೆ. ಗರ್ಭಧಾರಣೆಯ ಸಮಯದಲ್ಲಿ ಮತ್ತು ನಂತರದ ಪ್ರಕ್ರಿಯೆಯ ಒಂದು ಭಾಗವೆಂದು ನಂಬುವ ಹೆಚ್ಚಿನ ಮಹಿಳೆಯರು ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿದ್ದಾರೆ. ಪ್ರಸವಾ ನಂತರದ ಖಿನ್ನತೆಯು ಅಪಾಯಕಾರಿಯಾಗಿದ್ದು, ಆದರೆ ಚಿಕಿತ್ಸೆ ನೀಡಬಹುದಾಗಿದೆ. ಇದು ಮಹಿಳೆಯನ್ನು ಆತ್ಮಹತ್ಯೆಯಂತಹ ಅಪಾಯಕಾರಿ ನಡವಳಿಕೆಯತ್ತ ದೂಡುವ ಸಾಧ್ಯತೆಯೂ ಇದೆ. 3. ಬೊಮ್ಮಾಯಿ ಸರ್ಕಾರದ ಸಾಧನೆ ಕೇವಲ ಜಾಹಿರಾತಿಗೆ ಮಾತ್ರ ಸೀಮಿತ: ಸಿದ್ದರಾಮಯ್ಯ ಬಸವರಾಜ ಬೊಮ್ಮಾಯಿ ಅವರ ಆರು ತಿಂಗಳ ಸರ್ಕಾರದ ಸಾಧನೆ ಶೂನ್ಯ. ಬರೀ ಹೇಳಿಕೆ, ಜಾಹಿರಾತಿಗೆ ಸೀಮಿತವಾಗಿದೆ. ಇವರು ಕೇಂದ್ರದಿಂದ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ, ರಾಜ್ಯದಲ್ಲಿ ಸಂಪನ್ಮೂಲ ಕ್ರೋಢೀಕರಿಸುವಲ್ಲೂ ವಿಫಲರಾಗಿದ್ದಾರೆ. ಅಭಿವೃದ್ಧಿ ಇವರ ಕಾಲದಲ್ಲಿ ಹಿಂದಕ್ಕೆ ಹೋಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದರು. 4. ಜಮ್ಮು-ಕಾಶ್ಮೀರ: ಉಗ್ರರ ದಾಳಿ ಸಂಚು ವಿಫಲ, ಶಸ್ತ್ರಾಸ್ತ್ರ ಸಹಿತ ಮೂವರ ಬಂಧನ ಜಮ್ಮು-ಕಾಶ್ಮೀರದ ಪೊಲೀಸರು ಭಯೋತ್ಪಾದಕ ದಾಳಿ ಸಂಚನ್ನು ವಿಫಲಗೊಳಿಸಿದ್ದು, ದ ರೆಸಿಸ್ಟೆನ್ಸ್ ಫ್ರಂಟ್ ಹಾಗೂ ಲಷ್ಕರ್ ಎ ತೊಯ್ಬಾ ಸಂಘಟನೆ ಜತೆ ಸಂಪರ್ಕ ಹೊಂದಿರುವ ಮೂವರನ್ನು ಬಂಧಿಸಿ, ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. 5. ಭವಿಷ್ಯದ ಅಪಾಯಕಾರಿ ವೈರಸ್ ಬಗ್ಗೆ ವಾರ್ನಿಂಗ್! ಕೊರೊನಾ ಸೋಂಕಿನ ರೂಪಾಂತರಿಗಳ ಕಾಟದಿಂದ ನಲುಗಿರುವ ಜಗತ್ತಿಗೆ ಚೀನದ ವುಹಾನ್ನ ವಿಜ್ಞಾನಿಗಳು ಹೊಸ ಶಾಕ್ ಕೊಟ್ಟಿದ್ದಾರೆ. ದ.ಆಫ್ರಿಕಾದಲ್ಲಿ ಬಾವಲಿಗಳಲ್ಲಿ ಕಂಡುಬರುವ “ನಿಯೋಕೋವ್’ ಎಂಬ ಕೊರೊನಾ ವೈರಸ್ ಭವಿಷ್ಯದಲ್ಲಿ ಮನುಷ್ಯರಿಗೆ ಹಬ್ಬುವ ಸಾಧ್ಯತೆಯಿದೆ. ಅದು ಅತ್ಯಂತ ಅಪಾಯಕಾರಿ ರೂಪಾಂತರಿಯಾಗಿ ಪರಿಣಮಿಸಲಿದ್ದು, ಈ ಸೋಂಕು ತಗಲಿದ ಮೂವರಲ್ಲಿ ಒಬ್ಬರು ಸಾವಿಗೀಡಾಗುವ ಸಾಧ್ಯತೆಯಿದೆ ಎಂದು ವುಹಾನ್ ಸಂಶೋಧಕರ ವರದಿ ಹೇಳಿದೆ. 6. ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಇಲ್ಲದಿದ್ರೆ ಪೆಟ್ರೋಲ್, ಡೀಸೆಲ್ ಇಲ್ಲ: ದೆಹಲಿ ಸರ್ಕಾರ ರಾಷ್ಟ್ರರಾಜಧಾನಿಯಲ್ಲಿನ ವಾಯುಗುಣಮಟ್ಟ ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಇನ್ಮುಂದೆ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳಲು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲು ದೆಹಲಿ ಸರ್ಕಾರ ಸಿದ್ಧತೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ. 7. ಸಿನಿಮಾ ಥಿಯೇಟರ್ಗೂ 100% ವಿನಾಯಿತಿ ನೀಡುವಂತೆ ವಾಣಿಜ್ಯ ಮಂಡಳಿ ಮನವಿ ರಾಜ್ಯ ಸರ್ಕಾರ ಹಲವು ಕೋವಿಡ್ ನಿಯಮಗಳನ್ನು ಸಡಿಲಿಕೆ ಮಾಡಿದೆ. ಆದರೆ ಚಿತ್ರಮಂದಿರಗಳಿಗಿದ್ದ 50-50 ನಿಯಮವನ್ನು ಮುಂದುವರಿಸಲಾಗಿದೆ. ಹೀಗಾಗಿ ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಸಿನಿಮಾ ಥಿಯೇಟರ್ಗೂ 100% ವಿನಾಯಿತಿ ನೀಡುವಂತೆ ಮನವಿ ಪತ್ರ ಸಲ್ಲಿಸಿತು. 8. ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಕಪ್ ಗೆದ್ದ ಆಸೀಸ್ ನ ಮಾಜಿ ಕ್ರಿಕೆಟರ್ ಆಶ್ಲೆ ಬಾರ್ಟಿ ಮೆಲ್ಬೋರ್ನ್: ವಿಶ್ವದ ಅಗ್ರ ಶ್ರೇಯಾಂಕದ ಟೆನ್ನಿಸ್ ಆಟಗಾರ್ತಿ, ಆಸೀಸ್ ನ ಆಶ್ಲೆ ಬಾರ್ಟಿ ಅವರು ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಕೂಟವನ್ನು ಜಯಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಅವರು ಅಮೆರಿಕದ ಡೇನಿಯಲ್ ಕಾಲಿನ್ಸ್ ವಿರುದ್ಧ ಜಯ ಸಾಧಿಸಿದರು. ಈ ವಿಜಯದಿಂದ 44 ವರ್ಷಗಳ ಬಳಿಕ ಆಸ್ಟ್ರೇಲಿಯನ್ ಓಪನ್ ಮಹಿಳಾ ಪ್ರಶಸ್ತಿಯನ್ನು ಆಸ್ಟ್ರೇಲಿಯಾದ ಆಟಗಾರ್ತಿ ಗೆದ್ದಂತಾಯಿತು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್