ಆಸ್ಟ್ರೇಲಿಯನ್ ಓಪನ್ ಟೆನಿಸ್ ನಲ್ಲಿ ಉಡುಪಿಯ ಚಾರ್ವಿ ಶೆಟ್ಟಿ
Team Udayavani, Jan 30, 2022, 5:00 PM IST
1. ಆಸ್ಟ್ರೇಲಿಯನ್ ಓಪನ್ ಟೆನಿಸ್ ನಲ್ಲಿ ಉಡುಪಿಯ ಕುವರಿ
ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ನೆಲೆಸಿರುವ ಉಡುಪಿ ಮೂಲದ ಚಾರ್ವಿ ಶೆಟ್ಟಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಸಂಘಟನಾ ಸಿಬ್ಬಂದಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಬಾಲ್ ಕಿಡ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಈಕೆ ಟೆನಿಸ್ ಅಟಗಾರ್ತಿ ಮಾತ್ರವಲ್ಲದೆ ಉತ್ತಮ ಈಜುಪಟು ಮತ್ತು ಉತ್ತಮ ಚಿತ್ರ ಕಲಾವಿದೆಯೂ ಆಗಿದ್ದಾರೆ.
2. ರಾಜ್ಯ ಬಜೆಟ್: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ನಿರೀಕ್ಷೆಗಳು
ರಾಜ್ಯ ಬಜೆಟ್ ಕೆಲವೇ ದಿನಗಳಲ್ಲಿ ಮಂಡನೆಯಾಗಲಿದ್ದು, ರಾಜ್ಯದ ಜನತೆಯ ನಿರೀಕ್ಷೆಗಳು ಅಧಿಕವಾಗಿವೆ. ಹಾಗೆಯೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿಯೂ ಹಲವಾರು ಅಭಿವೃದ್ಧಿ ಕಾಮಗಾರಿಗಳು ಸಹಿತ ಹೊಸಯೋಜನೆಗಳು ಆಗಬೇಕೆನ್ನುವುದು ಜನರ ಒತ್ತಾಸೆಯಿದೆ.
3. ಪುಲ್ವಾಮಾ ಬ್ಲಾಸ್ಟ್ ರೂವಾರಿಯನ್ನು ಹೊಡೆದುರುಳಿಸಿದ ಸೇನೆ
ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ಎನ್ಕೌಂಟರ್ಗಳು ನಡೆದಿವೆ. ಈ ಕಾರ್ಯಾಚರಣೆಯಲ್ಲಿ ಸಕ್ರಿಯ ಉಗ್ರಗಾಮಿ ಗುಂಪುಗಳಾದ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ನ ಐವರು ಭಯೋತ್ಪಾದಕರನ್ನು ರಾತ್ರೋರಾತ್ರಿ ಹೊಡೆದುರುಳಿಸಲಾಗಿದೆ. ಇದರಲ್ಲಿ ಪುಲ್ವಾಮಾ ದಾಳಿ ರೂವಾರಿ ಜಾಹಿದ್ ವಾನಿಯೂ ಹತನಾಗಿದ್ದಾನೆ.
4. ಸಂಪುಟ ವಿಸ್ತರಣೆ ಗುಟ್ಟು ಬಿಟ್ಟುಕೊಡದ ಸಿಎಂ
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟ ವಿಸ್ತರಣೆ ಕುರಿತು ಸಾರ್ವಜನಿಕವಾಗಿ ಚರ್ಚೆ ಮಾಡಲು ಹೋಗುವುದಿಲ್ಲ ಎಂದರು. ವರಿಷ್ಠರು ಕರೆದಾಗ ದೆಹಲಿಗೆ ಹೋಗುತ್ತೇನೆ. ವಿಸ್ತರಣೆ ಸಲುವಾಗಿ ಯಾವಾಗ ಕರೆಯುತ್ತಾರೋ ಆಗ ಹೋಗಲು ಸಿದ್ದನಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.
5. ಅಮೈ ಮಹಾಲಿಂಗ ನಾಯ್ಕರನ್ನು ಕೊಂಡಾಡಿದ ಪ್ರಧಾನಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಈ ವರ್ಷದ ಮೊದಲ ಮನ್ ಕಿ ಬಾತ್ ನ 85 ನೇ ಆವೃತ್ತಿಯಲ್ಲಿ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ರೈತ ಅಮೈ ಮಹಾಲಿಂಗ ನಾಯ್ಕರ ಸಾಧನೆಯನ್ನು ಕೊಂಡಾಡಿದರು. ಮಹಾಲಿಂಗ ನಾಯ್ಕರು ಎಲ್ಲರೂ ಬೆರಗಾಗುವ ಸಾಧನೆ ಮಾಡಿದ್ದಾರೆ ಎಂದರು.
6. ವಿಪಕ್ಷ ಉಪನಾಯಕರಾಗಿ ಯು.ಟಿ.ಖಾದರ್
ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ, ವಿಪಕ್ಷದ ಉಪನಾಯಕರಾಗಿ ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ನೇಮಕವಾಗಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ಪಕ್ಷ ತೊರೆಯುವುದಾಗಿ ಹೇಳಿದ ಬೆನ್ನಲ್ಲೇ ಖಾದರ್ ರನ್ನು ಎಐಸಿಸಿ ನೇಮಕ ಮಾಡಿದೆ.
7. ಕಾಜೋಲ್ ಗೆ ಕೋವಿಡ್ ಪಾಸಿಟಿವ್
ನಟಿ ಕಾಜೋಲ್ ಇಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನಗೆ ಕೋವಿಡ್ -19 ಪಾಸಿಟಿವ್ ಆಗಿರುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕಾಜೋಲ್ ತನ್ನ ಸ್ವಂತ ಚಿತ್ರವನ್ನು ಹಂಚಿಕೊಳ್ಳುವ ಬದಲು ತನ್ನ ಮಗಳು ನೈಸಾ ದೇವಗನ್ ಅವರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
8. ಅಂಡರ್ 19 ವಿಶ್ವಕಪ್ ಪಂದ್ಯದ ವೇಳೆ ಕಂಪಿಸಿದ ಭೂಮಿ
ಟ್ರನಿಡಾಡ್ ನ ಪೋರ್ಟ್ ಆಫ್ ಸ್ಪೇನ್ ನಲ್ಲಿ ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ಭೂಕಂಪನದ ಅನುಭವವಾಗಿದೆ. ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕ್ಯಾಮರಾಗಳು ನಡುಗಿದ್ದು, ಮೈದಾನದಲ್ಲಿ ಆಡುತ್ತಿದ್ದ ಆಟಗಾರರಿಗೆ ಯಾವುದೇ ಅನುಭವವಾಗಿಲ್ಲ ಎಂದು ವರದಿಯಾಗಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
GST: ಪರೀಕ್ಷಾ ಫಾರಂ ಮೇಲೆ ಜಿಎಸ್ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ
JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್ಡಿಎ ಸ್ಪರ್ಧೆ: ಬಿಜೆಪಿ
Hindu Temple: ಸಂಭಲ್ ಬಳಿಕ ಬುಲಂದ್ಶಹರ್ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ