ಮಣಿಪುರ : ಬಿಜೆಪಿ ಬೆಂಬಲಿಗರಿಂದಲೇ ಬಿಜೆಪಿ ಕಚೇರಿ ಧ್ವಂಸ
Team Udayavani, Jan 31, 2022, 4:45 PM IST
1. ಗೋಡ್ಸೆ ಸಿದ್ಧಾಂತವು ಪ್ರಬಲವಾಗುತ್ತಿದೆ: ಗಾಂಧಿ ಮರಿ ಮೊಮ್ಮಗ
ಕೇಂದ್ರ ಸರ್ಕಾರ ‘ಆಜಾದಿ ಕಾ ಅಮೃತ್ ಮಹೋತ್ಸವ’ ಅಚರಿಸಿದ ಕುರಿತು ಗಾಂಧೀಜಿ ಮರಿ ಮೊಮ್ಮಗ ತುಷಾರ್ ಗಾಂಧಿ ಪ್ರತಿಕ್ರಯಿಸಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಬೋಧನೆಗಳನ್ನು ಪಾಲಿಸುವವರ ಸಂಖ್ಯೆ ದೇಶದಲ್ಲಿ ಕಡಿಮೆಯಾಗುತ್ತಿದ್ದು, ಅವರ ಹಂತಕ ನಾಥೂರಾಂ ಗೋಡ್ಸೆಯ ಸಿದ್ಧಾಂತ ಪ್ರಬಲವಾಗುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
2. ರಾಜಕಾರಣಿಗಳಿಂದ ಗ್ಯಾಂಗ್ ರೇಪ್
ಭಿಲ್ವಾರಾ ಜಿಲ್ಲೆಯ ಮಹಿಳಾ ಸಬ್ ಇನ್ಸ್ಪೆಕ್ಟರ್ ರಾಜಕೀಯ ನಾಯಕ ಮತ್ತು ಇತರರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಆಕೆಯ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
3. ಮಣಿಪುರ ಚುನಾವಣೆ: ಬಿಜೆಪಿ ಕಚೇರಿ ಧ್ವಂಸ
ಮಣಿಪುರದಲ್ಲಿ ಚುನಾವಣೆಯ ಕಾವು ತೀವ್ರವಾಗಿದ್ದು, ಇಂಫಾಲದಲ್ಲಿ ಬಿಜೆಪಿ ಬೆಂಬಲಿಗರು ಟಿಕೆಟ್ ಸಿಗದ ಕಾರಣಕ್ಕೆ ಪ್ರತಿಕೃತಿ ದಹಸಿ ಪಕ್ಷದ ಕಚೇರಿ ಧ್ವಂಸಗೊಳಿಸಿದ ಘಟನೆ ನಡೆದಿದೆ. ಅಭ್ಯರ್ಥಿಗಳ ಪಟ್ಟಿ ಹಲವರಿಗೆ ನಿರಾಸೆ ಮೂಡಿಸಿದ್ದು, ಈ ಆಕ್ರೋಶ ಬಿಜೆಪಿ ನಾಯಕರ ಪ್ರತಿಕೃತಿ ದಹನದ ರೂಪದಲ್ಲಿ ವ್ಯಕ್ತವಾಗಿದೆ.
4. ಜನರ ಮೇಲೆ ಹರಿದ ಎಲೆಕ್ಟ್ರಿಕ್ ಬಸ್ !
ಚಾಲಕ ನಿಯಂತ್ರಣ ತಪ್ಪಿದ ಎಲೆಕ್ಟ್ರಿಕ್ ಬಸ್ಸೊಂದು ಜನರ ಮೇಲೆ ಹರಿದು ಕನಿಷ್ಠ ಆರು ಮಂದಿ ಮೃತಪಟ್ಟು 12ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಕಾನ್ಪುರದಲ್ಲಿ ನಡೆದಿದೆ. ಟಾಟ್ ಮಿಲ್ ಕ್ರಾಸ್ ರಸ್ತೆ ಬಳಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಮೂರು ಕಾರುಗಳು ಮತ್ತು ಹಲವು ಬೈಕ್ ಗಳಿಗೆ ಹಾನಿಯಾಗಿದೆ.
5. ‘ಮಿತ್ರೋ’ಒಮಿಕ್ರಾನ್ ಗಿಂತ ಅಪಾಯಕಾರಿ: ಶಶಿ ತರೂರ್
ತನ್ನ ಟ್ವೀಟ್ ಗಳಿಂದ ಸದಾ ಸುದ್ದಿಯಲ್ಲಿರುವ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಇದೀಗ ತಮ್ಮ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಕುಟುಕಿದ್ದಾರೆ. “ಮಿತ್ರೋ’ ಎನ್ನುವುದು ಒಮಿಕ್ರಾನ್ ಗಿಂತಲೂ ಅಪಾಯಕಾರಿ ಎಂದು ಶಶಿ ತರೂರ್ ಹೇಳಿದ್ದಾರೆ.
6. ಶಿವರಾಮೇಗೌಡರನ್ನು ಪಕ್ಷದಿಂದ ಹೊರ ಹಾಕಿ: ಹೆಚ್ ಡಿಕೆ
ದಿವಂಗತ ಮಾದೇಗೌಡ ವಿರುದ್ಧ ಆಡಿಯೋ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಿಎಂ ಕುಮಾರಸ್ವಾಮಿ ಸೋಮವಾರ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ವಿರುದ್ಧ ಗುಡುಗಿದ್ದಾರೆ. ನೋಟಿಸ್ ಕೊಟ್ಟು ಪಕ್ಷದಿಂದ ಹೊರ ಹಾಕಲಾಗುವುದು, ಈ ಬಗ್ಗೆ ಪಕ್ಷದ ಅಧ್ಯಕ್ಷರಿಗೆ ಸೂಚನೆ ಕೊಡುತ್ತೇನೆ ಎಂದಿದ್ದಾರೆ.
7. ಅಪ್ಪುವನ್ನು ಕಳೆದುಕೊಂಡ ನೋವಿನಲ್ಲೇ ಬದುಕುತ್ತಿದ್ದೇನೆ: ಶಿವರಾಜ್ ಕುಮಾರ್
ಸುದ್ದಿಗಾರರೊಂದಿಗೆ ನಟ ಶಿವರಾಜ್ ಕುಮಾರ್ ಪುನಿತ್ ವಿಷಯವಾಗಿ ಪ್ರತಿಕ್ರಯಿಸಿದರು. ಅಪ್ಪು ನಿಧನ ನೆನೆಸಿಕೊಂಡಾಗೆಲ್ಲ ನಮ್ಮ ಧ್ವನಿಯೇ ಬದಲಾಗುತ್ತದೆ. ಆ ನೋವನ್ನು ಸಂಪೂರ್ಣವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ. ಆ ನೋವಿನ ಜೊತೆಗೆ ಬದುಕುತ್ತಿದ್ದೇವೆ. ಮುಂದೆಯು ನೋವಿನ ಜೊತೆಗೆ ಬದುಕುತ್ತೇವೆ ಎಂದು ಹೇಳಿದರು.
8. ಈ ಬಾರಿಯೂ ಐಪಿಎಲ್ ನಲ್ಲಿ ಭಾಗವಹಿಸಿದ ಆಸೀಸ್ ವೇಗಿ
ಆಸ್ಟ್ರೇಲಿಯಾದ ಪ್ರಮುಖ ವೇಗಿ ಮಿಚೆಲ್ ಸ್ಟಾರ್ಕ್ ಅವರು ಈ ಬಾರಿಯೂ ಐಪಿಎಲ್ ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಎರಡು ಸೀಸನ್ ಆಡಿದ್ದ ಸ್ಟಾರ್ಕ್ ನಂತರ ಸತತವಾಗಿ ವಿಶ್ವದ ಶ್ರೀಮಂತ ಲೀಗ್ ನಿಂದ ದೂರವಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ