ನಿವೃತ್ತಿಯಿಂದ ಹೊರಬರಲು ಯುವರಾಜ್ ಸಿಂಗ್ ನಿರ್ಧಾರ
Team Udayavani, Nov 2, 2021, 6:57 PM IST
1. ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯಾಗದೆ ಸಿಂದಗಿಯಲ್ಲಿ ಸೋಲು: ಸಿದ್ದರಾಮಯ್ಯ ಸಿಂದಗಿಯಲ್ಲಿ ನಮ್ಮನಿರೀಕ್ಷೆ ಹುಸಿಯಾಗಿದೆ ಎಂದು ಸಿದ್ದರಾಮಯ್ಯ ಉಪಚುನಾವಣೆಯ ಪಲಿತಾಂಶದ ಬಳಿಕ ತಿಳಿಸಿದರು. ಅಲ್ಲಿ ತೀವ್ರ ಸ್ಪರ್ಧೆಯನ್ನು ನಿರೀಕ್ಷಿಸಿದ್ದೆವು. ಆದರೆ ದೊಡ್ಡ ಅಂತರದಲ್ಲಿಸೋತಿದ್ದೇವೆ ಎಂದರು. ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಹೊಂದಾಣಿಕೆಯಾಗದೆ ಸಿಂದಗಿಯಲ್ಲಿ ಸೋಲಾಗಿದೆ ಎಂದು ಅಭಿಪ್ರಾಯಪಟ್ಟರು. 2. ಉಪಚುನಾವಣೆ ಫಲಿತಾಂಶದ ಬಳಿಕ ಬಿಎಸ್ ವೈ ಹೇಳಿಕೆ. ಸಿಂದಗಿಯಲ್ಲಿ ನಾವು 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೇವೆ ಈ ಮೂಲಕ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. 3. ಸಿದ್ದರಾಮಯ್ಯಗೆ ಟಾಂಗ್ ನೀಡಿದ ಸಚಿವ ಆರಗ ಜ್ಞಾನೇಂದ್ರ ಬಿಟ್ ಕಾಯಿನ್ ಹಗರಣದ ಬಗ್ಗೆ ಗೃಹ ಸಚಿವರು ಪ್ರತಿಕ್ರಯಿಸಿದರು. 2018ರಲ್ಲೇ ಯುಬಿ ಸಿಟಿ ಗಲಾಟೆಯಲ್ಲಿ ಶ್ರೀಕಿ ಎಂಬಾತನನ್ನು ಯಾಕೆ ಬಂಧಿಸಿಲ್ಲ? ಎಂದು ಬಿಟ್ ಕಾಯಿನ್ ಹಗರಣದ ಬಗ್ಗೆ ಗೃಹ ಸಚಿವರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು. ಇಬ್ಬರು ಕಾಂಗ್ರೇಸ್ ನಾಯಕರ ಮಕ್ಕಳ ಜೊತೆ ಸಿಕ್ಕಿಬಿದ್ದಾಗ ಯಾಕೆ ಅರೆಸ್ಟ್ ಮಾಡಿ ತನಿಖೆ ಮಾಡಿಲ್ಲ ಎಂದು ಆರಗ ಜ್ಞಾನೇಂದ್ರ ಟಾಂಗ್ ನೀಡಿದ್ದಾರೆ. 4. ಮೋದಿ ಪಂಚಾಮೃತ ಸೂತ್ರ 2030ರ ಹೊತ್ತಿಗೆ ಭಾರತವನ್ನು ಇಂಗಾಲ ಹೊರಸೂಸುವಿಕೆಯಿಂದ ಮುಕ್ತ ರಾಷ್ಟ್ರವಾಗಿನ್ನಾಗಿಸಲಾಗುತ್ತದೆ’ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ. ಅದನ್ನು ಸಾಧಿಸಲು ಐದು ಕ್ರಮಗಳನ್ನು ಅನುಸರಿಸುವುದಾಗಿ ಶೃಂಗ ಸಭೆಯಲ್ಲಿ ಮೋದಿ ಘೋಷಿಸಿದ್ದಾರೆ. 5. ಪಶ್ಚಿಮಬಂಗಾಳದ ಬಿಜೆಪಿ ಭದ್ರಕೋಟೆಯಲ್ಲಿ ಟಿಎಂಸಿ ಗೆಲುವು ಪಶ್ಚಿಮಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಬಿಜೆಪಿ ಭದ್ರಕೋಟೆಗೂ ಲಗ್ಗೆ ಇಟ್ಟಿದೆ. ಈ ಉಪಚುನಾವಣೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಟಿಎಂಸಿ ಗೆಲುವಿನ ನಾಗಾಲೋಟ ಮುಂದುವರಿಸಿದೆ. 6. ಅಕ್ರಮ ಹಣ ವರ್ಗಾವಣೆ ಪ್ರಕರಣ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಸುಮಾರು 13 ಗಂಟೆಗಳಿಗೂ ಅಧಿಕ ಕಾಲ ವಿಚಾರಣೆಗೊಳಪಡಿಸಿದ ನಂತರ ಬಂಧಿಸಿರುವುದಾಗಿ ವರದಿ ತಿಳಿಸಿದೆ. 7. ಪುನೀತ್ ರಾಜ್ ಕುಮಾರ್ ಸಮಾಧಿಗೆ ಹಾಲು ತುಪ್ಪದ ಶಾಸ್ತ್ರ ಕಂಠೀರವ ಸ್ಟುಡಿಯೋದಲ್ಲಿ ಚಿರ ನಿದ್ರೆಗೆ ಜಾರಿರುವ ನಟ ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ಇಂದು ಬೆಳಿಗ್ಗೆ ಹಾಲು ತುಪ್ಪ ಅರ್ಪಿಸುವ ಕಾರ್ಯಕ್ರಮ ನೆರವೇರಿತು. ಕುಟುಂಬದ ಸಂಪ್ರದಾಯದ ಪ್ರಕಾರ ಇಂದು ಬೆಳಿಗ್ಗೆ 10.30. ರ ಸುಮಾರಿಗೆ ಶಾಸ್ತೋಕ್ರವಾಗಿ ಸಮಾಧಿಗೆ ಹಾಲು ತುಪ್ಪ ಸಮರ್ಪಿಸಲಾಯಿತು. 8. ನಿವೃತ್ತಿಯಿಂದ ಹೊರಬರಲು ಯುವರಾಜ್ ಸಿಂಗ್ ನಿರ್ಧಾರ ಸಾರ್ವಜನಿಕ ಬೇಡಿಕೆಯ ಮೇರೆಗೆ ಫೆಬ್ರವರಿಯಲ್ಲಿ ಪಿಚ್ಗೆ ಹಿಂತಿರುಗುವ ಬಗ್ಗೆ ಆಶಾದಾಯಕವಾಗಿದ್ದೇನೆ ಎಂದು ಕ್ರಿಕೇಟ್ನಿಂದ ನಿವೃತ್ತರಾಗಿದ್ದ ಯುವರಾಜ್ ಸಿಂಗ್ ತಿಳಿಸಿದ್ದಾರೆ. ನಿಮ್ಮ ಪ್ರೀತಿ ಮತ್ತು ಶುಭಾಶಯಗಳಿಗೆ ಧನ್ಯವಾದಗಳು ಎಂದು ಯುವರಾಜ್ ಪ್ರತಿಕ್ರಯಿಸಿದ್ದಾರೆ.