ಜನರ ಕಲ್ಯಾಣವಾಗಬೇಕು, ಉಪದ್ರವವಾಗಬಾರದು :ಕೃಷ್ಣಾಪುರ ಮಠದ ಶ್ರೀಪಾದರ ಸಂದೇಶ
Team Udayavani, Jan 17, 2022, 4:12 PM IST
ಉಡುಪಿ: ಹತ್ತು ಜನರ ಕಲ್ಯಾಣದ ಉದ್ದೇಶದಿಂದ ನಾವು ಪರ್ಯಾಯ ಸ್ವೀಕರಿಸುತ್ತಿದ್ದು, ಪ್ರಾರಂಭದಲ್ಲೇ ಹತ್ತು ಜನರಿಗೆ ಉಪದ್ರವವಾಗುವ ಕಾರ್ಯಕ್ರಮವಾಗಬಾರದು, ಎಲ್ಲಾ ಕಾರ್ಯಕ್ರಮಗಳು ಲೋಕೋಪಯೋಗಿಯಾಗಿರಬೇಕು ಎಂದು ಭಾವೀ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಸೋಮವಾರ ಅನುಗ್ರಹ ಸಂದೇಶ ನೀಡಿದ್ದಾರೆ