ಭಗವಾನ್ ಮುಖಕ್ಕೆ ಮಸಿ ಬಳಿದಿದ್ದು ಘಟನೆ ಅಲ್ಲ, ಪ್ರತಿಭಟನೆ: ಪೇಜಾವರ ಶ್ರೀ | Udayavani
Team Udayavani, Feb 5, 2021, 3:43 PM IST
ರಾಯಚೂರು: ಚಿಂತಕ ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದಿದ್ದು ಘಟನೆ ಅಲ್ಲ ಅದು ಪ್ರತಿಭಟನೆ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ವ್ಯಾಖ್ಯಾನಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಕೂಡ ಸಮಾಜವನ್ನು ಉದ್ರೇಕಗೊಳಿಸುವ ಕೆಲಸ ಮಾಡಬಾರದು. ಭಗವಾನ್ ಅವರು ಸಮಾಜ ಉದ್ರೇಕಗೊಳಿಸುವ ರೀತಿ ನಡೆದುಕೊಂಡಿದ್ದೇ ಇಂದು ಈ ರೀತಿ ಪ್ರತಿಭಟನೆ ವ್ಯಕ್ತವಾಗಿದೆ. ಆ ರೀತಿ ಮಾಡಿ ಕೀಳುಮಟ್ಟದ ಪ್ರಚಾರ ಪಡೆಯಬಾರದು. ಈ ಘಟನೆಯಲ್ಲಿ ಇಬ್ಬರೂ ತಪ್ಪು ಮಾಡಿದ್ದಾರೆ ಎಂದರು.