ಭಂಡಾರದಲ್ಲಿ ಮಿಂದೆದ್ದ ಭಕ್ತರು
Ritual of bandara festival
Team Udayavani, Mar 11, 2022, 11:00 AM IST
ಉತ್ತರ ಕರ್ನಾಟಕ-ದಕ್ಷಿಣ ಮಹಾರಾಷ್ಟ್ರದ ವ್ಯಾಪ್ತಿಯಲ್ಲಿ ಭಂಡಾರದ ಜಾತ್ರೆ ಎಂದು ಪ್ರಸಿದ್ಧಿ ಪಡೆದ ಗಡಿ ಭಾಗದ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಶ್ರೀ ಮಲಕಾರಿಸಿದ್ದೇಶ್ವರ-ಅರಣ್ಯಸಿದ್ದೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಂಡಾರ ಹಾರಿಸಿ ಭಕ್ತಿಭಾವ ಮೆರೆದರು. ಗ್ರಾಮೀಣ ಪ್ರದೇಶದಲ್ಲಿ ಅದ್ದೂರಿಯಾಗಿ ನಡೆಯಬೇಕಿದ್ದ ಜಾತ್ರೆಗಳು ಕೊರೊನಾ ಅಟ್ಟಹಾಸದಿಂದ ಕಳೆದೆರಡು ವರ್ಷದಲ್ಲಿ ಜಾತ್ರೆಗಳು ನಡೆದಿರಲಿಲ್ಲ, ಪ್ರಸಕ್ತ ವರ್ಷದಲ್ಲಿ ಕೋವಿಡ್ ಅಲೆ ಕಡಿಮೆಯಾಗಿದ್ದರಿಂದ ಪುಣ ಜಾತ್ರೆಗಳಿಗೆ ಕಳೆ ಬಂದಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಅದ್ದೂರಿಯಾಗಿ ಜಾತ್ರೆಗಳು ನಡೆದಿವೆ.