ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani
Team Udayavani, Sep 18, 2020, 4:21 PM IST
ಉಡುಪಿ: ಇಲ್ಲಿನ ಚಿತ್ತರಂಜನ್ ಸರ್ಕಲ್ ನಲ್ಲಿರುವ ಹಳೆಯ ಬಹು ಮಹಡಿ ಕಟ್ಟಡದ ಭಾಗವೊಂದು ಧರೆಗುರುಳಿ ಬಿದ್ದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಮಹಿಳೆಯೋರ್ವರು ಗಾಯಗೊಂಡಿದ್ದಾರೆ.
ಚಿತ್ತರಂಜನ್ ಸರ್ಕಲ್ ನಲ್ಲಿರುವ ರಾಯಲ್ ಮಹಲ್ ಕಟ್ಟಡವಾಗಿದ್ದು, ಇದು ಉಡುಪಿ ನಗರದ ಹಳೇಯ ಕಟ್ಟಡಗಳಲ್ಲಿ ಒಂದಾಗಿದೆ. ಈ ಹಳೆಯ ಕಟ್ಟಡದಲ್ಲಿ ಹೋಟೆಲ್, ಬೇಕರಿ, ಭಾರತೀಯ ಜನೌಷಧಿ ಕೇಂದ್ರ, ಚಿಪ್ಸ್ ಅಂಗಡಿ ಸೇರಿದಂತೆ ಐದಾರು ಅಂಗಡಿಗಳಿದ್ದವು.
ಕಟ್ಟಡದ ಒಂದು ಪಾರ್ಶ್ವ ಕುಸಿಯುತ್ತಿದ್ದಂತೆ ಜನರು ಕಟ್ಟಡದಿಂದ ದೂರ ಓಡಿದ್ದಾರೆ. ಈ ವೇಳೆ ಓರ್ವ ಮಹಿಳೆ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದೆ.