Udupi : PPC ರಸ್ತೆಯ ಸಂಪರ್ಕ ಝೆರಾಕ್ಸ್ ಅಂಗಡಿಯಲ್ಲಿ ಬೆಂಕಿ ಅವಘಡ ಲಕ್ಷಾಂತರ ರೂ. ನಷ್ಟ
Team Udayavani, May 23, 2020, 9:06 PM IST
ಉಡುಪಿ: ನಗರದ ಪಿಪಿಸಿ ರಸ್ತೆಯಲ್ಲಿರುವ ಸಂಪರ್ಕ ಝೆರಾಕ್ಸ್ ಅಂಗಡಿಯಲ್ಲಿ ಶನಿವಾರ ಬೆಂಕಿ ಅನಾಹುತ ಸಂಭವಿಸಿ ಲಕ್ಷಾಂತರ ರೂ. ನಷ್ಟವಾಗಿದೆ.
ಸಂಜೆ ವೇಳೆ ಮಳಿಗೆಗೆ ಆಕಸ್ಮಿಕ ಬೆಂಕಿ ತಗಲಿದ್ದು ಸ್ಥಳಿಯರ ಗಮನಕ್ಕೆ ಬಂದಾಗ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು.
ಬೆಂಕಿ ತಗುಲಿದ ಅಂಗಡಿ ಹಾಗೂ ಪರಿಸರದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು, ಸ್ಥಳಕ್ಕೆ ಸುಮಾರು ನಾಲ್ಕೈದು ಅಗ್ನಿ ಶಾಮಕ ದಳದ ವಾಹನಗಳು ನೀರು ಹಾಕಿ ಬೆಂಕಿ ನಿಯಂತ್ರಿಸಲು ಹರಸಾಹಸ ಪಟ್ಟವು. ಬೆಂಕಿ ಇಡೀ ಕಟ್ಟಡದ ಆಸುಪಾಸು ಹಬ್ಬಿದೆ. ಮಳಿಗೆಯಲ್ಲಿನ ಸಾಮಗ್ರಿಗಳು ಬೆಂಕಿಗಾಹುತಿಯಾಗಿರುವ ಸಾಧ್ಯತೆಯಿದ್ದು, ನಷ್ಟದ ನಿಖರ ಪ್ರಮಾಣ ತಿಳಿದು ಬಂದಿಲ್ಲ. ಅಕ್ಕ ಪಕ್ಕದ ಅಂಗಡಿಗಳ ಮಾಲೀಕರು ಸ್ಥಳಿಯರ ಸಹಾಯದಿಂದ ಅಂಗಡಿ ವಸ್ತುಗಳನ್ನು ಸ್ಥಳಾಂತರಿಸಿದ್ದಾರೆ. ದಟ್ಟ ಹೊಗೆ ಅವರಿಸಿದ್ದು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಘಟನೆ ನಡೆದ ಸ್ಥಳದಲ್ಲಿ ಭಾರೀ ಜನ ಜಮಾಯಿಸಿದ್ದು ಪೊಲೀಸರು ಜನರನ್ನು ನಿಯಂತ್ರಿಸುವಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ವಿದ್ಯುತ್ ಶಾರ್ಟ್ ಸಕ್ಯುìಟ್ ಆಗಿ ಪೇಪರ್ಗಳಿಗೆ ಬೆಂಕಿ ತಗುಲಿ ಹಬ್ಬಿತು ಎಂದು ತಿಳಿದುಬಂದಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Kasaragod:ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; 10 ಮಂದಿಗೆ ಅವಳಿ ಜೀವಾವಧಿ ಸಜೆ
Bus ಪ್ರಯಾಣ ದರ ಏರಿಕೆ; ಮೊದಲು ಉದ್ದೇಶ ಅರಿಯಲಿ: ಖಾದರ್
Hunsur: ಹೊಸ ವರ್ಷಾಚರಣೆ: ಕೇಕ್ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
“ನಿಮ್ಹಾನ್ಸ್ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು
Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ