ಶಾನಾಡಿ: ಗ್ರಾಮೀಣ ಭಾಗದಲ್ಲಿ ಮತ್ತೆ ಗರಿಗೆದರಿದ ಸಾವಯವ ಕಬ್ಬಿನ ಆಲೆಮನೆ | Udayavani
Team Udayavani, Dec 10, 2020, 4:42 PM IST
ವೇಗದ ಬದುಕಿನ ನಡುವೆ ಮರೆಯಾಗುತ್ತಿರುವ ಗ್ರಾಮೀಣ ಕೃಷಿ ಸಂಸ್ಕೃತಿಯ ನಡುವೆ ಗ್ರಾಮೀಣ ಭಾಗದ ರೈತರು ನೂರಾರು ಎಕರೆ ಕೃಷಿಭೂಮಿಯಲ್ಲಿ ಬೆಳೆದಿದ್ದ ಕಬ್ಬು ಕಟಾವಿಗೆ ಸಿದ್ಧವಾಗಿದ್ದು , ಕಬ್ಬು ಮಾರಾಟ ಹಾಗೂ ನಿರ್ವಹಣೆ ಮಾಡಲು ಸಮರ್ಪಕವಾದ ವ್ಯವಸ್ಥೆಯ ಕೊರತೆಯಿಂದಾಗಿ ಕುಂದಾಪುರ ತಾಲೂಕಿನ ಕೆದೂರು ಗ್ರಾ.ಪಂ. ವ್ಯಾಪ್ತಿಯ ಶಾನಾಡಿಯ ಪ್ರಗತಿಪರ ಸಾವಯವ ಕೃಷಿಕರಾದ ಶಾನಾಡಿ ರಾಮಚಂದ್ರ ಭಟ್ ಹಾಗೂ ಉಮಾನಾಥ ಶೆಟ್ಟಿ ಅವರು ಗ್ರಾಮೀಣ ಭಾಗದಲ್ಲಿ ಕಳೆದ ವರ್ಷ ಕಬ್ಬಿನ ಆಲೆಮನೆ (ಬೆಲ್ಲದ ಗಾಣ) ಆರಂಭಿಸಿದಾಗ ಶಾನಾಡಿ ಆಲೆಮನೆಯೊಂದು ರಾಷ್ಟ್ರವ್ಯಾಪಿ ಭಾರೀ ಸದ್ದು ಮಾಡಿದ್ದು ಸಾವಯವ ಬೆಲ್ಲಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದರಂತೆ ಈ ಬಾರಿ ಕೂಡಾ ಸಾವಯವ ಕಬ್ಬಿನ ಆಲೆಮನೆ(ಬೆಲ್ಲದ ಗಾಣ) ಪುನರಾರಂಭಗೊಂಡಿದೆ.