ಉದ್ಯೋಗ ಖಾತ್ರಿ ಯೋಜನೆಯಡಿ ತುಂಬಿದ ಶಿರ್ವ ಕಡಂಬು ಕೆರೆ : ಗ್ರಾಮಸ್ಥರ ಮೊಗದಲ್ಲಿ ಮಂದಹಾಸ
Team Udayavani, May 26, 2020, 6:05 PM IST
ಶಿರ್ವ: ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಚಾಲನೆ ನೀಡಲಾದ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟಾರು ಕಡಂಬು ಬಳಿಯಿರುವ ಕೆಳಗಿನ ಮನೆ ಕೆರೆ ಗ್ರಾಮಸ್ಥರು ಮತ್ತು ನರೇಗಾ ಕಾರ್ಮಿಕರ ಶ್ರಮದಿಂದ ದುರಸ್ತಿಗೊಂಡು ಅಪಾರ ಪ್ರಮಾಣದಲ್ಲಿ ನೀರು ತುಂಬಿದ್ದು ಗ್ರಾಮಸ್ಥರನ್ನು ಪುಳಕಿತರನ್ನಾಗಿಸಿದೆ. ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ವಾರಿಜಾ ಪೂಜಾರ್ತಿ ಮತ್ತು ಪಿಡಿಒ ಅನಂತ ಪದ್ಮನಾಭ ನಾಯಕ್ ನೇತೃತ್ವದಲ್ಲಿ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಉದ್ಯೋಗವಿಲ್ಲದೆ ಮನೆಯಲ್ಲಿರುವ ಯುವಕರ ಮನವೊಲಿಸಿ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ನೀಡುವ ಮೂಲಕ ಕೃಷಿಗೆ ಬೇಕಾಗಿರುವ ನೀರು ಮತ್ತು ಅಂತರ್ಜಲ ಮಟ್ಟ ವೃದ್ಧಿಗಾಗಿ ಸಾಮೂಹಿಕವಾಗಿ ಕೆಲಸ ಮಾಡಲು ನಿರ್ಧರಿಸಲಾಗಿತ್ತು.
ಕಡಂಬು ಮತ್ತು ಸುತ್ತಮುತ್ತಲಿನ ಪರಿಸರದ ಯುವಕರು ಮತ್ತು ಮಹಿಳೆಯರು,ಗ್ರಾಮಸ್ಥರು ಉತ್ಸಾಹದಿಂದ ಕೆರೆ ದುರಸ್ತಿ ಕಾರ್ಯದಲ್ಲಿ ಪಾಲ್ಗೊಂಡಿದ್ದು ,ಕಡಂಬು ನಮೋ ಫ್ರೆಂಡ್ಸ್ ಬಳಗ ಅವರೊಂದಿಗೆ ಕೈ ಜೋಡಿಸಿತ್ತು. ಹೂಳೆತ್ತಿದ ಮಣ್ಣನ್ನು ಸಿಮೆಂಟ್ ಚೀಲದಲ್ಲಿ ತುಂಬಿ ಕೆರೆಯ ಸುತ್ತ ದಂಡೆ ಕಟ್ಟಲಾಗಿದೆ.ನೀರಿನ ಒರತೆ ಹೆಚ್ಚಾದ ಕಾರಣ ಇನ್ನೂ ಹೆಚ್ಚು ಗುಂಡಿ ತೋಡಲು ಆಗಲಿಲ್ಲ ಎಂದು ಕಾರ್ಮಿಕ ಮುಂದಾಳು ಗೀತಾ ಕಡಂಬು ತಿಳಿಸಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್ 2ನೇ ಪಂದ್ಯ
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
Pilikula: 2 ಮರಿಗಳಿಗೆ ಜನ್ಮ ನೀಡಿದ ಹುಲಿ ರಾಣಿ