ಸೈಕಲ್ ಏರಿ ಮತದಾನ ಜಾಗೃತಿ ಮೂಡಿಸಿದ ಪೊಲೀಸರು ಮತ್ತು ಪತ್ರಕರ್ತರು
Team Udayavani, Apr 10, 2019, 7:42 PM IST
ರಾಜ್ಯದ ಹೆಸರಾಂತ ಕನ್ನಡ ದಿನಪತ್ರಿಕೆ ಉದಯವಾಣಿ ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) ಸಹಯೋಗದಲ್ಲಿ ಬೆಂಗಳೂರು ನಗರದಲ್ಲಿ ಏಪ್ರಿಲ್ 10, ಬುಧವಾರದಂದು ಮತದಾನ ಜಾಗೃತಿ ಸೈಕಲ್ ಜಾಥಾ ನಡೆಯಿತು. ಉದಯವಾಣಿ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷರಾಗಿರುವ ಅನಂತಕೃಷ್ಣ ಹಾಗೂ KSRP ಮೂರನೇ ಬೆಟಾಲಿಯನ್ ಕಮಾಂಡೆಂಟ್ ರಾಮಕೃಷ್ಣ ಪ್ರಸಾದ್ ಜಂಟಿಯಾಗಿ ಈ ಸೈಕಲ್ ಜಾಥಾಗೆ ಚಾಲನೆ ನೀಡಿದರು. KSRP ADGP ಭಾಸ್ಕರ್ ರಾವ್, DIG ಸತೀಶ್ ಕುಮಾರ್, ನಾಲ್ಕನೇ ಬೆಟಾಲಿಯನ್ ಕಮಾಂಡೆಂಟ್ ಕುಮಾರಿ ಮೊಹಮ್ಮದ್ ಸುಜೀತಾ, ಕಮಾಂಡೆಂಟ್ ರಾಮಕೃಷ್ಣ ಪ್ರಸಾದ್, ಇನ್ ಸ್ಪೆಕ್ಟರ್ ಸಮಂತ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಉದಯವಾಣಿ ದಿನಪತ್ರಿಕೆಯ ಸಿಬ್ಬಂದಿ ವರ್ಗದವರು ಸೈಕಲ್ ಏರಿ ಮಹಾನಗರಿಯ ನಾಗರಿಕರಲ್ಲಿ ಮತದಾನದ ಅರಿವು ಮೂಡಿಸುವ ಪ್ರಶಂಸಾರ್ಹ ಕಾರ್ಯವನ್ನು ಮಾಡಿದರು.