ಡಾ| ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ಮೊದಲ ಲಸಿಕೆ ಹಾಕಿಸಿಕೊಂಡ ನರ್ಸಿಂಗ್ ಸಿಬ್ಬಂಧಿ ಶೋಭಾ
Team Udayavani, Jan 16, 2021, 4:17 PM IST
ಉಡುಪಿ : ಡಾ| ಟಿಎಂ ಪೈ ಆಸ್ಪತ್ರೆಯಲ್ಲಿ ಮೊದಲ ಕೋವಿಡ್ ಲಸಿಕೆಯನ್ನು ನರ್ಸಿಂಗ್ ಸಿಬಂದಿ ಶೋಭಾ ಅವರು ಹಾಕಿಸಿಕೊಂಡರು.ನಂತರ ಮಾತನಾಡಿದ ಅವರು ಕಳೆದೊಂದು 9 ತಿಂಗಳಿನಿಂದ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳನ್ನು ನೋಡಿಕೊಳ್ಳುತ್ತಿದ್ದೇವೆ. ರೋಗಿಗಳ ನೋವು ಬಹಳ ಹತ್ತಿರದಿಂದ ಕಂಡಿದ್ದೇವೆ. ಕೋವಿಡ್ ಲಸಿಕೆ ಕೋವಿಡ್ನಿಂದ ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಲಸಿಕೆ ತೆಗೆದುಕೊಂಡು ಅರ್ಧ ಗಂಟೆ ವಿಶ್ರಾಂತಿ ಪಡೆದುಕೊಂಡಿದ್ದೇನೆ. ಇದೀಗ ಮತ್ತೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದರು.