STOCK EXCHANGE ಬಗ್ಗೆ ಕುತೂಹಲಕರ ಮಾಹಿತಿಗಳು ಇಲ್ಲಿವೆ ನೋಡಿ…
STOCK EXCHANGE
Team Udayavani, Jul 1, 2023, 6:15 PM IST
ಬಿಎಸ್ ಇ ಲಿಮಿಟೆಡ್ (ಬಾಂಬೆ ಸ್ಟಾಕ್ ಎಕ್ಸ್ ಚೇಂಜ್) ಏಷ್ಯಾದಲ್ಲಿಯೇ ಹಳೆಯ ಸ್ಟಾಕ್ ಎಕ್ಸ್ ಚೇಂಜ್ ಗಳಲ್ಲಿ ಒಂದಾಗಿದೆ. ಇಂದು ವಾಣಿಜ್ಯ ನಗರಿ ಮುಂಬೈನ ದಲಾಲ್ ಸ್ಟ್ರೀಟ್ ನಲ್ಲಿರುವ ಬೃಹತ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಸ್ಥಾಪನೆಯಾಗಿ ಬರೋಬ್ಬರಿ ೧೪೭ ವರ್ಷಗಳಾಗಿವೆ. ಜಗತ್ತಿನ ಅತೀ ದೊಡ್ಡ ಷೇರುಮಾರುಕಟ್ಟೆಯಲ್ಲಿ ಒಂದಾದ ಬಾಂಬೆ ಷೇರುಮಾರುಕಟ್ಟೆ ಸ್ಥಾಪನೆಯಾಗಿ ೧೫೦ ವರ್ಷಗಳತ್ತ ದಾಪುಗಾಲಿಟ್ಟಿದ್ದು, ಇನ್ನು ಕೇವಲ ಮೂರು ವರ್ಷಗಳಲ್ಲಿ ಒಂದೂವರೆ ಶತಮಾನ ಪೂರೈಸಲಿರುವ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ಯಶೋಗಾಥೆ ತುಂಬಾ ರೋಚಕವಾಗಿದೆ ಎಂಬುದರಲ್ಲಿ ಅತಿಶಯೋಕ್ತಿಯೇನಿಲ್ಲ….
ಮೊದಲು ಷೇರು ವಹಿವಾಟು ಆರಂಭವಾಗಿದ್ದೇ ಆಲದ ಮರದ ಕೆಳಗೆ …!
೧೮೪೦ರಲ್ಲಿ ಷೇರು ದಲ್ಲಾಳಿಗಳು ಪ್ರಪ್ರಥಮವಾಗಿ ಬಾಂಬೆ ಟೌನ್ ಹಾಲ್ ಮುಂಭಾಗದ ಆಲದ ಮರದ ಕೆಳಗೆ ಷೇರು ವಹಿವಾಟು ಆರಂಭಿಸಿದ್ದರು. ನಂತರ ೧೮೭೫ರಲ್ಲಿ ೨೫ ಮಂದಿ ಷೇರು ದಲ್ಲಾಳಿಗಳು ತಲಾ ಒಂದು ರೂಪಾಯಿ ಸಂಗ್ರಹಿಸಿ ಅಸೋಸಿಯೇಶನ್ ಹುಟ್ಟುಹಾಕಿ ಇದಕ್ಕೆ “ ದ ನೇಟಿವ್ ಷೇರ್ & ಬ್ರೋಕರ್ಸ್ ಅಸೋಸಿಯೇಶನ್” ಎಂದು ಹೆಸರಿಟ್ಟಿದ್ದರು.
ದ ನೇಟಿವ್ ಷೇರ್ & ಬ್ರೋಕರ್ಸ್ ಅಸೋಸಿಯೇಶನ್” ಆರಂಭಿಸುವಲ್ಲಿ ಆ ಕಾಲದ ಶ್ರೀಮಂತ ಹತ್ತಿ ವ್ಯಾಪಾರಿ ಪ್ರೇಮ್ ಚಂದ್ ರಾಯ್ ಚಂದ್ ಜೈನ್ ಷೇರು ದಲ್ಲಾಳಿಗಳನ್ನು ಒಗ್ಗೂಡಿಸಿ ಷೇರು ವಹಿವಾಟು ಆರಂಭಿಸಿದ ಪ್ರಮುಖರಾಗಿದ್ದಾರೆ. ಆಲದ ಮರದ ಕೆಳಗೆ ವಹಿವಾಟು ನಡೆಸುತ್ತಿದ್ದ ಷೇರುಪೇಟೆ ತದನಂತರ ದಲಾಲ್ ಸ್ಟ್ರೀಟ್ ನ ಹಾಲ್ ನಲ್ಲಿ ಟ್ರೇಡಿಂಗ್ ಅನ್ನು ಆರಂಭಿಸಿತ್ತು. ಆದರೆ ಆ ಕಾಲದಲ್ಲಿ ತಿಂಗಳ ಬಾಡಿಗೆ ಪಾವತಿಸಲು ಅಸಾಧ್ಯವಾಗಿಬಿಟ್ಟಿತ್ತು. ಆ ಸಂದರ್ಭದಲ್ಲಿ ಆಪದ್ಭಾಂಧವರಾಗಿದ್ದು, ಜವಳಿ ಗಿರಣಿ ಮಾಲೀಕ ದಿನ್ಶಾ ಮಾಣಿಕ್ಯಜೀ ಪೇಟಿಟ್…
ದಿನ್ಶಾ ಮಾಣಿಕ್ಯಜೀ ಅವರು ತಮ್ಮ ವಿಕ್ಟೋರಿಯಾ ಮ್ಯಾನ್ಯುಫ್ಯಾಕ್ಚರಿಂಗ್ ಕಂ ಲಿಮಿಟೆಡ್ ಹೆಸರಿನಲ್ಲಿ ೨೫ ಷೇರುಗಳನ್ನು ಖರೀದಿಸಿದ್ದರು. ಆ ನಂತರ ಪ್ರತಿ ಷೇರುಗಳನ್ನು ೬೯೦ ರೂಪಾಯಿಯಂತೆ ಮಾರಾಟ ಮಾಡಲಾಗಿತ್ತು. ಇದರಿಂದ ಒಟ್ಟು ೧೭, ೨೫೦ ರೂಪಾಯಿ ಹಣ ಸಂಗ್ರಹವಾಗಿತ್ತು. ಇದರಲ್ಲಿ ಮಾಣಿಕ್ಯಜೀ ಅವರು ಮುಂಗಡವಾಗಿ ನೀಡಿದ್ದ (ಬಾಡಿಗೆ ಪಾವತಿ) ೨,೩೯೩ ರೂ. ಹಣವನ್ನು ಮರುಪಾವತಿಸಲಾಗಿತ್ತು. ಬಾಕಿ ಉಳಿದ ೧೪, ೮೫೭ ರೂಪಾಯಿ ಮೊತ್ತವನ್ನು ಮೂಲ ಬಂಡವಾಳವನ್ನಾಗಿಸಿ “ದ ನೇಟಿವ್ ಶೇರ್ & ಸ್ಟಾಕ್ ಬ್ರೋಕರ್ಸ್ ಅಸೋಸಿಯೇಶನ್” ವಹಿವಾಟು ಆರಂಭಿಸಿತ್ತು.
ಬಿಎಸ್ ಇ ಸ್ವಂತ ಕಟ್ಟಡಕ್ಕೆ ಸ್ಥಳಾಂತರ:
೧೮೮೯ರಲ್ಲಿ ಷೇರು ವಹಿವಾಟು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊAಡಿತ್ತು. ಅದಕ್ಕೆ ಪೇಟಿಟ್ ಎಂದು ಹೆಸರಿಡಲಾಗಿತ್ತು. ಹೀಗೆ ಷೇರು ವಹಿವಾಟು ಹಲವು ವರ್ಷಗಳ ಕಾಲ ಏರಿಳಿತದೊಂದಿಗೆ ನಡೆಯುತ್ತಿತ್ತು. ಕೊನೆಗೆ ೧೯೯೦ರಲ್ಲಿ ಬಿಎಸ್ ಇ ಮಾರುಕಟ್ಟೆ ವಹಿವಾಟಿನಲ್ಲಿ ಪುಟಿದೆದ್ದಿತ್ತು.
ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ೧೯೯೭ರಲ್ಲಿ ಎಲೆಕ್ಟ್ರಾನಿಕ್ ವ್ಯವಸ್ಥೆಯ ವಹಿವಾಟಿಗೆ ಬದಲಾಯಿತು. ಇಂದು ಎಲೆಕ್ಟ್ರಾನಿಕ್ ಟ್ರೇಡಿಂಗ್ ವ್ಯವಸ್ಥೆ ಹಣಕಾಸು ಉದ್ಯಮದಲ್ಲಿ ಪ್ರಾಬಲ್ಯ ಸಾಧಿಸಿದ್ದು, ಸರಳ ಹಾಗೂ ತ್ವರಿತ ವಹಿವಾಟಿಗೆ ಅನುಕೂಲಕರವಾಗಿ ಪರಿಣಮಿಸಿದೆ. ಬಿಎಸ್ ಇ ಪಟ್ಟಿಗಳಲ್ಲಿ ಷೇರುಗಳು, ಸ್ಟಾಕ್ ಆಯ್ಕೆಗಳು, ಸೂಚ್ಯಂಕ ಭವಿಷ್ಯಗಳು, ಸೂಚ್ಯಂಕ ಆಯ್ಕೆಗಳು ಸೇರಿವೆ.
ಇಂದು ಬಾಂಬೆ ಷೇರುಪೇಟೆ ಕೇವಲ ಸೆಕೆಂಡುಗಳಲ್ಲಿ ೫೦ ಸಾವಿರದಷ್ಟು ಷೇರು ಖರೀದಿ/ಮಾರಾಟದ ಬೇಡಿಕೆಯ ವಹಿವಾಟಿನ ಮಾಹಿತಿ ಪ್ರಕ್ರಿಯೆಯನ್ನು ನಡೆಸುವ ಸಾಮರ್ಥ್ಯ ಹೊಂದಿದೆ.
ಮುAಬೈ ಈಗ ಭಾರತದ ಪ್ರಮುಖ ಹಣಕಾಸು ಕೇಂದ್ರವಾಗಿದೆ. ಇಲ್ಲಿನ ದಲಾಲ್ ಸ್ಟ್ರೀಟ್ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್ ಗಳು, ಹೂಡಿಕೆ ಸಂಸ್ಥೆ ಹಾಗೂ ಹಣಕಾಸು ಸೇವಾ ಕಂಪನಿಗಳಿಗೆ ನೆಲೆಯಾಗಿದೆ. ಅಮೆರಿಕದ ವಾಲ್ ಸ್ಟ್ರೀಟ್ ನಂತೆ ಮುಂಬೈನ ದಲಾಲ್ ಸ್ಟ್ರೀಟ್ ಕೂಡಾ ಪ್ರಾಮುಖ್ಯತೆ ಪಡೆದಿದೆ. ಅದರೊಂದಿಗೆ ಆಲದ ಮರದ ಕೆಳಗೆ ಆರಂಭಗೊAಡಿದ್ದ ಬಾಂಬೆ ಷೇರು ಮಾರುಕಟ್ಟೆ ವಹಿವಾಟು ಇಂದು ಆಲದ ಮರದಂತೆ ಬೃಹತ್ ಆಗಿ ಬೆಳೆದು ನಿಂತಿದೆ.
*ನಾಗೇAದ್ರ ತ್ರಾಸಿ
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ