ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.
Team Udayavani, Jan 24, 2021, 12:45 PM IST
ದಶಕಗಳಿಂದ ಈಜು ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಹಲವು ಸಾಧನೆ ಮಾಡಿರುವ ಕಡೆಕಾರಿನ 65ರ ಹರೆಯದ ಶ್ರೀ ಗಂಗಾಧರ ಜಿ. ಅವರು ಪದ್ಮಾಸನ ಹಾಕಿ ಕಾಲಿಗೆ ಸರಪಳಿ ಬಿಗಿದು ಬ್ಯಾಕ್ಸ್ಟ್ರೋಕ್ ಭಂಗಿಯಲ್ಲಿ ಈಜುತ್ತಾ ಸಮುದ್ರದಲ್ಲಿ 1400 ಮೀಟರ್ ಕ್ರಮಿಸಿ ಯಶಸ್ವಿಯಾಗಿ ದಡಸೇರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಸಾರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಶ್ರೀ ಗಂಗಾಧರ್ ಅವರು ಭೋರ್ಗರೆವ ಸಮುದ್ರದ ಮಧ್ಯೆ ಪದ್ಮಾಸನ ಹಾಕಿ ಕಾಲನ್ನು ಸಂಕೋಲೆಯಿಂದ ಬಿಗಿದು ಕಡಲಿಗೆ ಜಿಗಿದ ಗಂಗಾಧರ್ ಎರಡು ಕೈಗಳ ಸಹಾಯದಿಂದ ಈಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೆಸರು ಬರೆಸಿಕೊಂಡಿರುತ್ತಾರೆ.