ಟೈರ್ ಸ್ಪೋಟಗೊಂಡು ಮಗುಚಿ ಬಿದ್ದ ಮರದ ತುಂಡು ಸಾಗಾಟ ಮಾಡುತ್ತಿದ್ದ ಟೆಂಪೋ
Team Udayavani, Oct 8, 2020, 3:58 PM IST
ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಟೆಂಪೋ ಮಗುಚಿ ಬಿದ್ದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಈ ಟೆಂಪೋ ಮರದ ತುಂಡುಗಳನ್ನು ಹೇರಿಕೊಂಡು ಉಡುಪಿಯಿಂದ ಉಚ್ಚಿಲಕ್ಕೆ ಸಾಗುತ್ತಿತ್ತು. ಮೂಳೂರಿನ ಬಿಲ್ಲವ ಸಂಘದ ಬಳಿ ಬರುತ್ತಿದ್ದ ವೇಳೆ ಟೈರ್ ಸ್ಪೋಟಗೊಂಡು ಟೆಂಪೋ ಮುಗುಚಿ ಬಿದ್ದಿದೆ.
ಟೆಂಪೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಮತ್ತು ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟೆಂಪೋದಲ್ಲಿದ್ದ ಮರದ ತುಂಡುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.