ಚುನಾವಣೆ ಸಂಭ್ರಮಾಚರಣೆ ಬದಿಗಿಟ್ಟು ಅನಾಥ ಶವಸಂಸ್ಕಾರಕ್ಕೆ ಮುಂದಾದ ಶಂಕರ ಪಾಟೀಲ್
Team Udayavani, Sep 7, 2021, 5:13 PM IST
ಭಾರತಕ್ಕೆ ಇಸ್ಲಾಂ ಎಂಬ ಪದವು ಆಕ್ರಮಣಕಾರರೊಂದಿಗೆ ಬಂದಿದ್ದು
ಭಾರತದಲ್ಲಿ ವಾಸಿಸುವ ಹಿಂದುಗಳು ಮತ್ತು ಮುಸ್ಲಿಮರ ಪೂರ್ವಜರು ಒಂದೇ ಆಗಿದ್ದಾರೆ ಭಾರತಕ್ಕೆ ಇಸ್ಲಾಂ ಎಂಬ ಪದವು ಆಕ್ರಮಣಕಾರರೊಂದಿಗೆ ಬಂದಿದ್ದರಿಂದ ಅದನ್ನು ನಾವು ಹಾಗೆಯೇ ಉಚ್ಛರಿಸಬೇಕಿದೆ. ಮುಸ್ಲೀಂ ನಾಯಕರು ಆ ಬಗ್ಗೆ ಅನಗತ್ಯ ಸಮಸ್ಯೆಗಳನ್ನು ವಿರೋಧಿಸಬೇಕಾಗಿದೆ. ದೇಶ ಒಗ್ಗಟ್ಟಾಗಬೇಕಿದೆ. ಉಗ್ರರ ವಿರುದ್ಧ ಎದ್ದು ನಿಲ್ಲಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ಮುಖ್ಯಸ್ಥ ಮೋಹನ್ ಜಿ. ಭಾಗವತ್ ಹೇಳಿದ್ದಾರೆ.
ಕಳೆದ 24 ಗಂಟೆಯಲ್ಲಿ 31,222 ಹೊಸ ಕೋವಿಡ್ ಪ್ರಕರಣಗಳು ದಾಖಲು | 290 ಮಂದಿ ಸೋಂಕಿಗೆ ಬಲಿ
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 31,222 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 24 ಗಂಟೆಗಳಲ್ಲಿ ಕೋವಿಡ್ ಕಾರಣಗಳಿಂದಾಗಿ 290 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸರ್ಕಾರ ರಚನೆ ಕಾರ್ಯಕ್ರಮಕ್ಕೆ ಆರು ದೇಶಗಳಿಗೆ ಆಹ್ವಾನ ನೀಡಿದ ತಾಲಿಬಾನ್
ಅಫ್ಘಾನಿಸ್ತಾನದ ಪಂಜ್ ಶೀರ್ ಪ್ರಾಂತ್ಯವನ್ನೂ ವಶಕ್ಕೆ ಪಡೆದ ಸಂತಸದಲ್ಲಿರುವ ತಾಲಿಬಾನ್ ಇದೀಗ ಅಫ್ಘಾನಿಸ್ಥಾನದಲ್ಲಿ ಸರ್ಕಾರ ರಚನೆ ಮಾಡಲು ಮುಂದಾಗಿದೆ. ರಷ್ಯಾ, ಚೀನಾ, ಟರ್ಕಿ, ಇರಾನ್, ಪಾಕಿಸ್ತಾನ ಮತ್ತು ಕತಾರ್ ದೇಶಗಳಿಗೆ ತಾಲಿಬಾನ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಿದೆ. ಆ ಮೂಲಕ 20 ವರ್ಷಗಳ ಬಳಿಕ ಮತ್ತೆ ಅಫ್ಘಾನಿಸ್ಥಾನದಲ್ಲಿ ಅಧಿಕಾರ ಪಡೆಯುತ್ತಿರುವ ತಾಲಿಬಾನ್ ತನ್ನ ವಿದೇಶಿ ನೀತಿಯ ಮೊದಲ ಹೆಜ್ಜೆಗೆ ನಾಂದಿ ಹಾಡಿದೆ.
ಪ್ರತಿಭಟನೆ ನಿರತ ರೈತರ ವಿರುದ್ಧ ಬಲ ಪ್ರಯೋಗ ಮಾಡುವವರಿಗೆ ಕ್ರಮ ಕೈಗೊಳ್ಳುವಂತೆ ರೈತರ ಒತ್ತಾಯ
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹಾಗೂ ಪ್ರತಿಭಟನಾ ನಿರತ ರೈತರ ವಿರುದ್ಧ ಬಲ ಪ್ರಯೋಗ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜಧಾನಿಯ ಹೊರ ವಲಯದ ಬೃಹತ್ ಧಾನ್ಯ ಮಾರುಕಟ್ಟೆಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ಚುನಾವಣೆಯಲ್ಲಿ ಗೆದ್ದರೂ ಸಂಭ್ರಮಾಚರಣೆ ಬದಿಗಿಟ್ಟು ಅನಾಥ ಶವಸಂಸ್ಕಾರಕ್ಕೆ ಮುಂದಾದ ಶಂಕರ ಪಾಟೀಲ
ಅನಾಥ ಶವಗಳನ್ನು ಹಾಗೂ ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಸಾಮಾಜಿಕ ಕಳಕಳಿ ಹೊಂದಿರುವ ಬೆಳಗಾವಿಯ ವಾರ್ಡ್ ನಂಬರ್ 7ರ ನೂತನ ಸದಸ್ಯ ಶಂಕರ ಪಾಟೀಲ ಅವರು ಗೆದ್ದ ದಿನವೇ ತಮ್ಮ ಸಂಭ್ರಮಾಚರಣೆ ಬದಿಗಿಟ್ಟು ಅನಾಥ ಶವದ ಅಂತ್ಯ ಸಂಸ್ಕಾರ ನಡೆಸಿ ಮಾದರಿಯಾಗಿದ್ದಾರೆ.
ಕಲಬುರಗಿ ಪಾಲಿಕೆ: ದೋಸ್ತಿ ವಿಚಾರದಲ್ಲಿ ಸ್ಥಳೀಯರ ಮುಖಂಡರ ಮಾತಿಗೆ ಮನ್ನಣೆ ಎಂದ ಎಚ್ ಡಿಡಿ
ಕಲಬುರಗಿ ಪಾಲಿಕೆಯಲ್ಲಿ ಬೆಂಬಲದ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ನನ್ನ ಬಳಿ ಮಾತಾಡಿದ್ದಾರೆ, ಕುಮಾರಸ್ವಾಮಿ ಹತ್ತಿರವೂ ಮಾತಾಡಿದ್ದಾರೆ. ಆದರೆ ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆಯದೇ ನಾವೇ ತೀರ್ಮಾನ ಮಾಡಬಾರದು ಎಂದು ಕುಮಾರಸ್ವಾಮಿಗೆ ಸೂಚಿಸಿದ್ದೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಯೋಗಿ ಕಣ್ಣಲ್ಲಿ ಲಂಕೆ ಕನಸು : 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್
ನಟ ಯೋಗೇಶ್ ಅಭಿನಯದ “ಲಂಕೆ’ ಚಿತ್ರ ಸೆ.10 ರಂದು ಬಿಡುಗಡೆಯಾಗುತ್ತಿದೆ. ಏಪ್ರಿಲ್ ನಂತರ ಕನ್ನಡ ಚಿತ್ರರಂಗದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿರುವ ಚಿತ್ರ ಇದಾಗಿದ್ದು, 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣುತ್ತಿದೆ.
ಓವಲ್ ವಿಜಯದೊಂದಿಗೆ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಅಗ್ರ ಸ್ಥಾನಕ್ಕೇರಿದ ಭಾರತ
ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೆ ಏರಿದೆ. ಎರಡು ಗೆಲುವಿನೊಂದಿಗೆ 26 ಅಂಕ ಗಳಿಸಿರುವ ಟೀಂ ಇಂಡಿಯಾ 54.17 ಶೇ ಅಂಕಗಳನ್ನು ಹೊಂದಿದೆ. ಎರಡನೇ ಸ್ಥಾನದಲ್ಲಿ ಪಾಕಿಸ್ಥಾನವಿದ್ದರೆ, ಮೂರನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ತಂಡವಿದೆ. ಇಂಗ್ಲೆಂಡ್ ತಂಡ 29.17 ಶೇಖಡಾಗೊಂದಿಗೆ ಕೊನೆಯ ಅಂದರೆ ನಾಲ್ಕನೇ ಸ್ಥಾನದಲ್ಲಿದೆ.